ಜೈವಿಕ ಬದಲಾವಣೆ ಮತ್ತು ಆಧುನಿಕ ಜೀವನಶೈಲಿಯ ಪರಿಣಾಮವಾಗಿ ಇತ್ತೀಚಿಗೆ 20 ವರ್ಷದ ಹೆಣ್ಣುಮಕ್ಕಳಲ್ಲಿ ಹಾರ್ಮೋನ್ನಲ್ಲಿ ಬದಲಾವಣೆ, ಅನಿಯಮಿತ ಮುಟ್ಟು ಮತ್ತು ಫಲವತ್ತತೆಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ.

ಈ ಹಿಂದೆ 30 ವರ್ಷ ಕಳೆದ ನಂತರ ಹೆಣ್ಣುಮಕ್ಕಳಲ್ಲಿ ಕಂಡುಬರುತ್ತಿದ್ದ ಸಮಸ್ಯೆಗಳು ಈಗ 20ನೇ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತಿದೆ.

8 ರಿಂದ 9 ವರ್ಷದ ಹೆಣ್ಣುಮಕ್ಕಳು ಋತುಮತಿಯಾಗುತ್ತಿದ್ದಾರೆ. ಇದು ಅಂಡಾಶಯದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಹಿರಿಯ ಐವಿಎಫ್ ಸಲಹೆಗಾರ್ತಿ ಮತ್ತು ಸ್ತ್ರೀರೋಗ ವೈದ್ಯೆ ಡಾ.ಪ್ರೀತಿ ಅರೋರಾ ಧಮಿಜಾ ತಿಳಿಸಿದ್ದಾರೆ.

ಲಾನ್ಸೆಟ್ ಚೈಲ್ಡ್ ಮತ್ತು ಅಡೊಲೆಸೆಂಟ್ ಹೆಲ್ತ್ನಲ್ಲಿ ಪ್ರಕಟವಾದ ಅಧ್ಯಯನದ ವರದಿ ಪ್ರಕಾರ, ಕಳೆದ ಒಂದು ದಶಕದಲ್ಲಿ ಚಿಕ್ಕ ವಯಸ್ಸಿನಲ್ಲಿ ಋತುಚಕ್ರ ಆರಂಭವಾಗುವುದು ಕಂಡುಬರುತ್ತಿದೆ. ಜತೆಗೆ ಪೋಷಕಾಂಶಗಳ ಕೊರತೆ, ಬೊಜ್ಜಿನ ಸಮಸ್ಯೆಗಳು ಹೆಚ್ಚಾಗಿವೆ. ಇದಕ್ಕೆ ಆನುವಂಶೀಯತೆ ಮಾತ್ರ ಕಾರಣವಲ್ಲ. ಜೀವನಶೈಲಿ ಕೂಡ ಪ್ರಮುಖ ಪಾತ್ರವಹಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ಅತಿಯಾದ ಮತ್ತು ದೀರ್ಘಕಾಲದ ಒತ್ತಡ, ಅತಿಯಾದ ಕಾರ್ಯಕ್ಷಮತೆಯ ವಾತಾವರಣ, ಸರಿಯಾಗಿ ನಿದ್ದೆ ಇಲ್ಲದೆ ಇರುವುದು, ಅತಿಯಾದ ಮೊಬೈಲ್, ಟಿವಿ, ಕಂಪ್ಯೂಟರ್ ಬಳಕೆ, ಡಯೆಟ್ ಇಲ್ಲದೆ ಇರುವುದು ಹಾಗೂ ದೈಹಿಕ ಚಟುವಟಿಕೆಯ ಕೊರತೆಯಲ್ಲಿ ಬೆಳೆಯುತ್ತಿದ್ದಾರೆ. ಈ ಅಂಶಗಳು 20ರ ಹರೆಯದರಲ್ಲೇ ಬೊಜ್ಜು, ಪಿಸಿಒಎಸ್, ಚಯಾಪಚಯದ ಕೊರತೆ, ಅನಿಯಮಿತ ಮುಟ್ಟು ಮತ್ತು ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗುತ್ತಿದೆ.

ಇದರ ಹೊರತಾಗಿ ಲೈಂಗಿಕ ಚಟುವಟಿಕೆ, ಒಂದಕ್ಕಿಂತ ಹೆಚ್ಚು ಸಂಗಾತಿ ಹೊಂದಿರುವುದು, ಸರಿಯಾಗಿ ವೈದ್ಯಕೀಯ ಚಿಕಿತ್ಸೆ ಪಡೆಯದೇ ಇರುವುದು, ಪದೇ ಪದೇ ಗರ್ಭನಿರೋಧಕ ಔಷಧ ಪಡೆಯುವುದು ಎಸ್ಟಿಐನಂತಹ ಕಾಯಿಲೆ ಮತ್ತು ಮೂತ್ರಕೋಶದ ಸಮಸ್ಯೆ, ಫಲವತ್ತತೆ ಕುಂಠಿತವಾಗಲು ಕಾರಣವಾಗುತ್ತದೆ.

ಐದು ಮಹಿಳೆಯರಲ್ಲಿ ಒಬ್ಬರಿಗೆ ಪಿಸಿಒಎಸ್ ಸಮಸ್ಯೆ ಕಾಡುತ್ತಿದೆ. ಇದು ಸಂತಾನೋತ್ಪತ್ತಿಗೆ ಅಡ್ಡಿಯಾಗುತ್ತಿದೆ ಎಂದು ದೆಹಲಿ ಏಮ್ಸ್ನ ಸ್ತ್ರೀರೋಗ ವೈದ್ಯೆ ಜುಹಿ ಭಾರತಿ ಹೇಳಿದ್ದಾರೆ.

ನಿದ್ದೆಯ ಕೊರತೆ ಅತಿಯಾದ ಸುಸ್ತು ಮಾತ್ರವಲ್ಲ, ಹಾರ್ಮೋನುಗಳ ವ್ಯತ್ಯಾಸ, ಸಂತಾನೋತ್ಪತ್ತಿಯಲ್ಲಿ ಸಮಸ್ಯೆ, ಫಲವತ್ತತೆ ಕೊರತೆಗೂ ಕಾರಣವಾಗುತ್ತದೆ. ಸರಿಯಾದ ಸಮಯದ ನಿದ್ದೆ ಒಟ್ಟಾರೆ ಆರೋಗ್ಯಕ್ಕೆ ಕೀಲಿಕೈ ಇದ್ದಂತೆ ಎನ್ನುತ್ತಾರೆ ಡಾ. ಭಾರತಿ.

ಅನೇಕ ಮಹಿಳೆಯರು ಹೇಳಿಕೊಳ್ಳುವ ಸಾಮಾನ್ಯ ಸಮಸ್ಯೆ ಎಂದರೆ ಅನಿಯಮಿತ ಮುಟ್ಟು, ಪಿಸಿಒಎಸ್, ಬಂಜೆತನ, ಬೇಗನೆ ವಯಸ್ಸಾದಂತೆ ಕಾಣುವುದು. ಇವೆಲ್ಲದಕ್ಕೂ ಕಾರಣ ಆಧುನಿಕ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ, ಆಲಸ್ಯ ಜೀವನ, ದೈಹಿಕ ಚಟುವಟಿಕೆ ಇಲ್ಲದಿರುವುದು, ಧೂಮಪಾನ ಮತ್ತು ಮದ್ಯಪಾನ ಸೇವನೆ ಎಂದು ಸರ್ ಗಂಗಾರಾಮ್ ಆಸ್ಪತ್ರೆಯ ಐವಿಎಫ್ ತಜ್ಞೆ ಡಾ. ಭವಾನಿ ಶೇಖರ್ ಹೇಳಿದ್ದಾರೆ.

ಹೀಗಾಗಿ ಸಮತೋಲಿತ ಪೋಷಕಾಂಶಯುಕ್ತ ಆಹಾರ ಸೇವನೆ ಬಗ್ಗೆ ಗಮನಹರಿಸುವುದು, ನಿಯಮಿತ ದೈಹಿಕ ಚಟುವಟಿಕೆ, ಸಾಕಷ್ಟು ಪ್ರಮಾಣದ ನಿದ್ದೆ ಮತ್ತು ಒತ್ತಡ ನಿರ್ವಹಣೆಯನ್ನು ಸರಿಯಾಗಿ ಮಾಡಿದರೆ ಹಾರ್ಮೋನ್ಗಳಲ್ಲಾಗುವ ವ್ಯತ್ಯಾಸವನ್ನು ತಪ್ಪಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.