ಒಂದು ಕೆರೆ ಅದೆಷ್ಟೋ ರೈತರ ಬದುಕನ್ನು ಮುನ್ನಡೆಸುತ್ತದೆ. ಅದೆಷ್ಟೋ ಜೀವರಾಶಿಗಳ ಹೊಟ್ಟೆ ತುಂಬಿಸುತ್ತದೆ. ಎಷ್ಟೋ ಮರಗಿಡಗಳಿಗೆ ಉಸಿರು ತುಂಬುತ್ತದೆ. ಕೆರೆಯೊಂದು ಅಭಿವೃದ್ಧಿಯಾದರೆ ಇಡೀ ಹಳ್ಳಿಯೇ ಅಭಿವೃದ್ಧಿಯಾದಂತೆ. ಅದರಲ್ಲೂ ಕೋಲಾರ ಜಿಲ್ಲೆಯ ಜನರಿಗೆ ಕೆರೆಗಳು ಜೀವನಾಡಿ. ಕೆರೆಗಳೇ ದೇವರು, ಕೆರೆಗಳೇ ಅನ್ನದಾತ. ಇಂಥ ಜಿಲ್ಲೆಯ ಪುಟ್ಟ ಹಳ್ಳಿಗಳಲ್ಲಿ ಕೆರೆಗಳಿಗೆ ಜೀವಕಳೆ ತುಂಬುವ ಕೆಲಸ ಸದ್ದಿಲ್ಲದೆ ನಡೆದಿದೆ. ಮುಳಬಾಗಿಲು ತಾಲ್ಲೂಕಿನ ಊರುಕುಂಟೆ ಮಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಸ್.ಆಶಾ ಎಂಬ ಮಹಿಳೆ ನೇತೃತ್ವದಲ್ಲಿ ಈ ಜಲಕ್ರಾಂತಿ ನಡೆಯುತ್ತಿದೆ.

ಆರೋಹಣ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸ್ಥಾಪಿಸಿ ಕೆರೆಗಳ ರಕ್ಷಣೆ ಹಾಗೂ ಪುನಶ್ಚೇತನಕ್ಕಾಗಿ ಟೊಂಕ ಕಟ್ಟಿ ನಿಂತಿದ್ದಾರೆ. ಕೆರೆಗಳಿಂದಲೇ ನಾಡು ಎಂಬ ಮಾತಿನಲ್ಲಿ ನಂಬಿಕೆ ಇಟ್ಟು ಕೆಲಸ ಮಾಡುತ್ತಿದ್ದಾರೆ. ಇವರಿಟ್ಟ ಪುಟ್ಟ ಪುಟ್ಟ ಹೆಜ್ಜೆಗಳು ದೊಡ್ಡ ಬದಲಾವಣೆಗೆ ಕಾರಣವಾಗುತ್ತಿವೆ. ಈ ಭಾಗದ ರೈತರ ಬದುಕಿಗೆ, ಕೃಷಿಗೆ, ಜೀವರಾಶಿಗೆ, ಆರ್ಥಿಕತೆಗೆ ಪುಷ್ಟಿ ನೀಡುತ್ತಿವೆ.

ಮೂಲತಃ ಮಲೆನಾಡಿನ ತೀರ್ಥಹಳ್ಳಿಯ ಆಶಾ ಅವರನ್ನು ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಮಿಣಿಜೇನಹಳ್ಳಿಗೆ ಮದುವೆ ಮಾಡಿಕೊಡಲಾಯಿತು. ಬಯಲುಸೀಮೆ ಜಿಲ್ಲೆಯ ಪರಿಸ್ಥಿತಿ ಕಂಡು ಜಲಮೂಲಗಳ ರಕ್ಷಣೆಗೆ ಅವರು ಮುಂದಾದರು. ಹೂಳು, ತ್ಯಾಜ್ಯ, ಕಳೆ ತುಂಬಿಕೊಂಡು ನಶಿಸಿ ಹೋಗುವ ಹಂತದಲ್ಲಿದ್ದ ಕೆರೆ, ಕಟ್ಟೆ, ಕಾಲುವೆಗಳನ್ನು ಪುನಶ್ಚೇತನಗೊಳಿಸಿ ಆ ಹಳ್ಳಿಗಳ ಜನರ ಬದುಕನ್ನು ಹಸನಾಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಜಲ ರಕ್ಷಣೆ ಯೋಧರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಜೊತೆಗೆ ಹಲವು ಮಹಿಳೆಯರು ಕೈಜೋಡಿಸಿದ್ದಾರೆ.

ಊರುಕುಂಟೆ ಮಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 26 ಕೆರೆಗಳ ಸ್ಥಿತಿಗತಿಯನ್ನು ಪಟ್ಟಿ ಮಾಡಿಕೊಂಡು ಈ ಕೆಲಸದಲ್ಲಿ ತೊಡಗಿದ್ದಾರೆ. ಜೊತೆಗೆ ಬಾವಿಗಳು, ಕಲ್ಯಾಣಿಗಳ ಪುನರುಜ್ಜೀವನಗೊಳಿಸುತ್ತಿದ್ದಾರೆ. 14 ಕೆರೆ, 4 ಕಲ್ಯಾಣಿ, 6 ಬಾವಿ ಹಾಗೂ ಹತ್ತಾರು ಕಾಲುವೆಗಳ ಹೂಳು ತೆಗೆದಿದ್ದಾರೆ.

10 ಮನೆಗಳಲ್ಲಿ ಹಾಗೂ ನಾಲ್ಕು ಶಾಲೆಗಳಲ್ಲಿ ಮಳೆ ನೀರು ಸಂಗ್ರಹ ಪದ್ಧತಿ ಅಳವಡಿಸಿದ್ದಾರೆ. ಜೊತೆಗೆ ಮಳೆ ನೀರು ಹರಿಯುವ ಕಾಲುವೆಗಳನ್ನು ಸ್ವಚ್ಛಗೊಳಿಸಿದ್ದಾರೆ. ಕೆರೆಗಳಿಂದ ತೆಗೆದ 48 ಸಾವಿರ ಟ್ರ್ಯಾಕ್ಟರ್ ಲೋಡ್ ಮಣ್ಣನ್ನು 400ಕ್ಕೂ ಅಧಿಕ ರೈತರು ತಮ್ಮ ಕೃಷಿ ಜಮೀನಿಗೆ ಬಳಸಿಕೊಂಡರು. ಬೆಳೆ ಕೂಡ ಚೆನ್ನಾಗಿ ಬಂತು. ಮೀನುಗಾರಿಕೆ ಟೆಂಡರ್ ನೀಡಿದ್ದು, ಗ್ರಾಮ ಪಂಚಾಯಿತಿಗೆ ಆದಾಯ ಬರುತ್ತಿದೆ.

ಗ್ರಾಮದಲ್ಲಿ ಕಾಲುವೆ ಹೂಳೆತ್ತುವ ಕೆಲಸವನ್ನು ಸುಮಾರು 60 ಮಹಿಳೆಯರಿಂದಲೇ ಮಾಡಿಸಲಾಗಿದೆ. ಅವರಿಗೆ ಆರೋಹಣ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ನಿತ್ಯ ₹450 ಸಂಭಾವನೆ ಕೊಡಲಾಗಿದೆ. ಈಗ ₹500ಕ್ಕೇರಿಸಿದ್ದಾರೆ. ಈ ಸಂಭಾವನೆಯ ಕಾರಣ ಹಲವು ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ.

‘ಮುಂದಿನ ಪೀಳಿಗೆಗೆ ಕೆರೆಗಳನ್ನು ಉಳಿಸುವುದು ನಮ್ಮ ಈ ಪ್ರಯತ್ನದ ಹಿಂದಿನ ಉದ್ದೇಶ. ಯಾವುದೇ ಅಭಿವೃದ್ಧಿ ಕೆಲಸ ಮಾಡಲು ದಾನಿಗಳು ಬೇಕಾಗುತ್ತದೆ. ಕಂಪನಿಗಳನ್ನು ಹುಡುಕಿ, ಕಾಡಿಬೇಡಿ ಸಿಎಸ್ಆರ್ ಅನುದಾನ ತಂದು ಕೆಲಸ ಮಾಡಿದ್ದೇವೆ. ಕೆರೆಗಳ ಸ್ಥಿತಿಗತಿ ಅರಿತು, ಸಿಎಸ್ಆರ್ ಅನುದಾನ ಪಡೆಯಲು ಪ್ರಸ್ತಾವ ಸಲ್ಲಿಸಿ, ನಂತರ ಗ್ರಾಮ ಪಂಚಾಯಿತಿಗೆ ಪತ್ರ ಬರೆದು ಅನುಮತಿ ಪಡೆದು, ಜೆಸಿಬಿ ಬಳಸಿ ಹೂಳೆತ್ತುವ ಕೆಲಸ ಮಾಡುತ್ತೇವೆ. ಅದಕ್ಕೆ ಲೆಕ್ಕಪತ್ರಗಳಲ್ಲಿ ಪಾರದರ್ಶಕತೆ ಕಾಯ್ದುಕೊಂಡಿದ್ದೇವೆ. ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮಸ್ಥರು ಕೂಡ ಸ್ಪಂದಿಸಿದರು’ ಎನ್ನುತ್ತಾರೆ ಆಶಾ.

ಈ ಹಾದಿಯಲ್ಲಿ ಕೆಲವರ ಚುಚ್ಚುಮಾತು, ಅಪಹಾಸ್ಯ ಕೇಳಬೇಕಾಯಿತು. ಅನುಮಾನ ವ್ಯಕ್ತಪಡಿಸಿ ಕೆಲಸಕ್ಕೆ ಅಡ್ಡಿಪಡಿಸಿದ್ದೂ ಉಂಟು. ಜೊತೆಗೆ ಗ್ರಾಮದ ರಾಜಕೀಯ ಸವಾಲು ಕೂಡ ಎದುರಿಸಬೇಕಾಯಿತು. ಈ ನಡುವೆ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕೆಲಸ ಮಾಡಿದೆವು ಎನ್ನುತ್ತಾರೆ.

ಪಿಚ್ಚಗುಂಟ್ಲಹಳ್ಳಿಯ ಹೊಸಕೆರೆ ಕೆರೆ ಸುತ್ತಲ ಭಾಗದಲ್ಲಿ ಈ ಹಿಂದೆ ಕೇವಲ 15 ರೈತರು ಭತ್ತ ಬೆಳೆಯುತ್ತಿದ್ದರು. ಆದರೆ, ಆ ಕೆರೆ ಪುನಶ್ಚೇತನದ ಬಳಿಕ 58 ರೈತರು ವರ್ಷಕ್ಕೆ ಎರಡು ಬೆಳೆ ತೆಗೆಯುತ್ತಿದ್ದಾರೆ. ಇನ್ನು ಮೂರು ವರ್ಷ ಬರ ಬಂದರೂ ಅವರಿಗೆ ಚಿಂತೆ ಇಲ್ಲ ಎಂದು ನುಡಿಯುತ್ತಾರೆ. ಗ್ರಾಮದ ಮಹಿಳೆಯರಿಗೆ ಮನೆ ಮುಂದೆ ಹಣ್ಣಿನ ಗಿಡ ನೆಟ್ಟು ಬೆಳೆಸಲು ಹೇಳಿದ್ದೇವೆ. ಊರುಕುಂಟೆ ಮಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1,225 ಮನೆಗಳಿದ್ದು, ಆ ಕೆಲಸ ನಡೆಯುತ್ತಿದೆ. ಮೂರು ಕೆರೆ ಅಂಗಳದಲ್ಲಿ ಪಕ್ಷಿಗಳಿಗೆ ನೆರವಾಗುವ ಗಿಡ ನೆಟ್ಟು ಬೆಳೆಸುತ್ತಿದ್ದೇವೆ. ಕೆರೆಗಳ ಹೂಳು ತೆಗೆದಿದ್ದರಿಂದ ಅಂತರ್ಜಲ ಮಟ್ಟವೂ ಹೆಚ್ಚಾಯಿತು. ವ್ಯವಸಾಯದಿಂದ ದೂರ ಉಳಿದಿದ್ದ ರೈತರು ಮತ್ತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಜಾನುವಾರುಗಳಿಗೆ ಹಸಿರು ಮೇವು ಸಿಗುತ್ತಿದೆ. ಕುಡಿಯುವ ನೀರು ಕೂಡ ಸಿಗುತ್ತಿದೆ. ದೊಡ್ಡದೊಡ್ಡ ರೈತರು ವ್ಯವಸಾಯದಲ್ಲಿ ತೊಡಗಿದಾಗ ಹಳ್ಳಿಯ ಜನರಿಗೆ ಕೆಲಸ ಕೂಡ ಸಿಕ್ಕಿತು. ಬೆಂಗಳೂರಿಗೆ ಕೂಲಿಗೆ ಹೋಗುವುದು ತಪ್ಪಿತು ಎಂದು ಹೇಳುತ್ತಾರೆ.

ರಾಜ್ಯದ ವಿವಿಧೆಡೆ ಜಲಾಶಯಗಳು ತುಂಬಿದಾಗ ಬಾಗಿನ ಅರ್ಪಿಸಲಾಗುತ್ತದೆ. ಆದರೆ ಕೋಲಾರ ಭಾಗದಲ್ಲಿ ಕೆರೆಗಳು ತುಂಬಿ ಕೋಡಿ ಒಡೆದಾಗ ದೀಪೋತ್ಸವ ನಡೆಯುತ್ತದೆ. ಆಶಾ ಅವರ ಕೆಲಸ ಎಲ್ಲರಿಗೂ ಪ್ರೇರಣೆ ಆಗಬೇಕಿದೆ. ಕೆರೆ, ಕಟ್ಟೆ, ಕಲ್ಯಾಣಿಗಳನ್ನು ಪುನಶ್ಚೇತನಗೊಳಿಸಬೇಕಿದೆ. ಇದು ಬರೀ ಸ್ವಯಂಸೇವಾ ಸಂಸ್ಥೆಗಳ ಕೆಲಸವಲ್ಲ; ಪ್ರತಿ ನಾಗರಿಕರೂ ಈ ಕೆಲಸದಲ್ಲಿ ತೊಡಗಬೇಕಿದೆ. ⇒vಮಲೆನಾಡಿನಿಂದ ಬಯಲುಸೀಮೆಗೆ ಪಯಣ

ಕರ್ನಾಟಕದಲ್ಲಿ ಒಂದೂ ನದಿಮೂಲ ಇಲ್ಲದ ಜಿಲ್ಲೆ ಕೋಲಾರ. ರೈತರು ಮಳೆ, ಕೆರೆ, ಕೊಳವೆಬಾವಿ ನಂಬಿಕೊಂಡೇ ದಶಕಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಬರಪೀಡಿತ ಹಾಗೂ ಬಯಲುಸೀಮೆ ಜಿಲ್ಲೆಯಲ್ಲಿ ಒಂದು ಕಾಲದಲ್ಲಿ ನಾಲ್ಕೂವರೆ ಸಾವಿರಕ್ಕೂ ಅಧಿಕ ಕೆರೆಗಳಿದ್ದವು. ಕಾಲಾಂತರದಲ್ಲಿ ಆ ಸಂಖ್ಯೆ ತಗ್ಗಿ ಎರಡೂವರೆ ಸಾವಿರಕ್ಕೆ ಬಂದು ನಿಂತಿದೆ.

ಜೀವನಾಡಿಗಳಾಗಿರುವ ಕೆರೆಗಳತ್ತ ನಿರ್ಲಕ್ಷ್ಯ ಧೋರಣೆ, ಒತ್ತುವರಿ ಇದಕ್ಕೆ ಕಾರಣ. ಮಳೆ ಇಲ್ಲದೆಯೂ ನೂರಾರು ಕೆರೆಗಳು ಬತ್ತಿ ಹೋದವು. ಕೆರೆ ಅಂಗಳದಲ್ಲೇ 1,500 ಅಡಿ ಕೊಳವೆಬಾವಿ ಕೊರೆದರೂ ನೀರು ಸಿಗುತ್ತಿರಲಿಲ್ಲ. ನೀರಿಗಾಗಿ ಜಿಲ್ಲೆಯ ಜನ ಪರದಾಡಿದ್ದು ಅಷ್ಟಿಷ್ಟಲ್ಲ. ನೀರು ಹುಡುಕಿಕೊಂಡು ಕುರಿ ಕಾಯುವವರು ಏಳೆಂಟು ಕಿ.ಮೀ ಹೋಗಬೇಕಿತ್ತು. ಅದಕ್ಕೆ ಪರಿಹಾರ ಹುಡುಕಲು ಆಶಾ ಅವರು ತುಳಿದ ಹಾದಿ ಜಿಲ್ಲೆಯಲ್ಲಿ ನೀರಿನ ಸೆಲೆ ಉಕ್ಕಲು ಕಾರಣವಾಗಿದೆ.

ಮಲೆನಾಡು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಆಶಾ ಕೋಲಾರದಂಥ ಬಯಲು ಸೀಮೆಗೆ ಬಂದು ಆರೋಹಣ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸ್ಥಾಪಿಸಿದರು. ಅವರ ನೇತೃತ್ವದಲ್ಲಿ ಈ ಸಂಸ್ಥೆಯನ್ನು ಏಳು ವರ್ಷಗಳಿಂದ ಮಹಿಳೆಯರೇ ಮುನ್ನಡೆಸುತ್ತಿರುವರು. ಜಲಮೂಲ, ಪರಿಸರ ಸಂರಕ್ಷಣೆ ಈ ಸಂಸ್ಥೆಯ ಧ್ಯೇಯವಾಗಿದೆ. ನೀರು, ಮಣ್ಣು, ಹಸಿರೀಕರಣಕ್ಕೆ ಒತ್ತು ನೀಡುತ್ತಿದೆ. ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವ, ಸಿಎಸ್ಆರ್ ನಿಧಿಯ ಸಹಕಾರದಲ್ಲಿ ಕೆಲಸ ಮಾಡುತ್ತಿದೆ.

ನೀರಿನ ಮಹತ್ವ ಮಹಿಳೆಯರಿಗೆ ಮಾತ್ರ ಗೊತ್ತು. ಹೀಗಾಗಿ, ನಾವು ಕೆರೆ, ಕಾಲುವೆ ಪುನಶ್ಚೇತನ ಕಾರ್ಯ ಕೈಗೊಂಡಾಗ ಹೆಚ್ಚು ಸಹಕಾರ ನೀಡಿದ್ದೇ ಮಹಿಳೆಯರು. ಈ ಎಲ್ಲಾ ಕಾರಣಗಳಿಂದ ನಮ್ಮ ಹಳ್ಳಿಯ ಪರಿಸರದಲ್ಲಿ ಬದಲಾವಣೆ ಆಗುತ್ತಿದೆ ಎನ್ನುತ್ತಾರೆ ಆಶಾ.

ಮಲೆನಾಡಿನಿಂದ ಬಯಲುಸೀಮೆಗೆ ಪಯಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.