ಓರಗೆಯವರು ಮೊಬೈಲ್ನಲ್ಲಿ ಗೇಮ್ ಆಡುತ್ತಾ, ಟಿ.ವಿ.ಯಲ್ಲಿ ಕಾರ್ಟೂನ್ ನೋಡುತ್ತಾ ಕಾಲ ಕಳೆಯುತ್ತಿದ್ದರೆ, ಅವಳು ಮಾತ್ರ ಕಾಪಿ ಪುಸ್ತಕ ಹಿಡಿದು ಅಕ್ಷರ ತಿದ್ದುತ್ತಿದ್ದಳು, ಖಾಲಿ ಹಾಳೆಯಲ್ಲಿ ಇನ್ನಷ್ಟು ಮತ್ತಷ್ಟು ದುಂಡಗೆ ಬರೆಯಲು ಹವಣಿಸುತ್ತಿದ್ದಳು, ಗಂಟೆಗಟ್ಟಲೆ ಬರೆದೂ ಬರೆದೂ ಕೈ ಸೋತಾಗಷ್ಟೇ ಅವಳು ಮೇಲಕ್ಕೆ ಏಳುತ್ತಿದ್ದುದು.

‘ಅಯ್ಯೋ ಈ ಡಿಜಿಟಲ್ ಯುಗದಲ್ಲಿ ಕೈಬರಹ ಹೇಗಿದ್ದರೇನು?’ ಎಂದು ಮೂಗು ಮುರಿಯುವವರೂ ಒಮ್ಮೆ ಅವಳ ಅಕ್ಷರ ನೋಡಿದ ಕೂಡಲೇ ದಂಗಾಗುತ್ತಾರೆ. ಇದೇನು ಕೈಯಲ್ಲಿ ಬರೆದದ್ದೋ ಅಥವಾ ಕಂಪ್ಯೂಟರ್ ಅಚ್ಚೋ ಎಂಬ ಗೊಂದಲದಲ್ಲಿ ತಿರುಗಿಸಿ ಮುರುಗಿಸಿ ನೋಡಿ ಕಕ್ಕಾಬಿಕ್ಕಿಯಾಗುತ್ತಾರೆ.

ಹೌದು, ನೇಪಾಳದ ಯುವತಿ ಪ್ರಕೃತಿ ಮಲ್ಲ ಕೈಬರಹಕ್ಕೆ ಮನಸೋಲದವರೇ ಇಲ್ಲ. ಕಂಪ್ಯೂಟರ್ ಪ್ರಿಂಟ್ಔಟ್ನಲ್ಲಿನ ಅಕ್ಷರಗಳಂತೆಯೇ ಶಿಸ್ತುಬದ್ಧವಾಗಿ, ಮುದ್ದಾಗಿ ಇರುತ್ತದೆ ಅದು. ಅಕ್ಷರಗಳ ನಡುವೆ ಬಿಟ್ಟ ಸ್ಥಳವಾಗಲಿ, ಬರೆಯುವ ಶೈಲಿಯಾಗಲಿ ಎಲ್ಲವೂ ಅತ್ಯಂತ ನಿಖರ ಮತ್ತು ಮನಮೋಹಕ.

ಅಷ್ಟಕ್ಕೂ ಈಕೆ ಯಾರು ಅಂದುಕೊಂಡಿರಿ? ‘ಜಗತ್ತಿನ ಅತ್ಯಂತ ಸುಂದರವಾದ ಕೈಬರಹ’ ಎಂಬ ಬಿರುದು ಪಡೆದಾಕೆ.

ಪ್ರಕೃತಿಯು ಹೊರಜಗತ್ತಿಗೆ ಪರಿಚಯವಾದದ್ದೇ ಆಕಸ್ಮಿಕವಾಗಿ. 2017ರಲ್ಲಿ 8ನೇ ತರಗತಿಯಲ್ಲಿದ್ದಾಗ ಆಕೆ ಮಾಡಿದ್ದ ಹೋಮ್ವರ್ಕ್ ಕಂಡವರು ಯಾರೋ ಆ ಅಕ್ಷರಗಳ ಮೋಡಿಗೆ ಒಳಗಾಗುತ್ತಾರೆ. ‘ವ್ಹಾವ್! ಎಷ್ಟೊಂದು ಸುಂದರವಾದ ಕೈಬರಹ’ ಎಂದುಕೊಂಡು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾರೆ. ನೋಡನೋಡುತ್ತಿದ್ದಂತೆಯೇ ಒಬ್ಬರಿಂದೊಬ್ಬರಿಗೆ ಶೇರ್ ಆಗುತ್ತಾ ಆಗುತ್ತಾ ಅದು ಜಗತ್ತಿಗೇ ವ್ಯಾಪಿಸುತ್ತದೆ. ಎಲ್ಲ ಮೂಲೆಗಳಿಂದಲೂ ಪ್ರಶಂಸೆಯ ಸುರಿಮಳೆ ಪ್ರಕೃತಿಯತ್ತ ಹರಿದುಬರುತ್ತದೆ.

ನೇಪಾಳ ಸರ್ಕಾರ ಆಯೋಜಿಸಿದ್ದ ಪೆನ್ಮ್ಯಾನ್ಷಿಪ್ ಸ್ಪರ್ಧೆಯ ಶೀರ್ಷಿಕೆ ಅನಾಯಾಸವಾಗಿ ಆಕೆಯ ಮುಡಿಗೇರುತ್ತದೆ. ದೇಶದ ಸೇನಾಪಡೆ ‘ಪ್ರಕೃತಿ ನಮ್ಮ ಹೆಮ್ಮೆ’ ಎಂದು ಶ್ಲಾಘಿಸುತ್ತದೆ. 2022ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ನ (ಯುಎಇ) 51ನೇ ರಾಷ್ಟ್ರೀಯ ದಿನಾಚರಣೆಯ ಪ್ರಯುಕ್ತ ಆಡಳಿತಕ್ಕೆ ಶುಭ ಕೋರಿ ಕೈಬರಹದಲ್ಲಿ ಆಕೆ ಬರೆದಿದ್ದ ಪತ್ರ ಅಲ್ಲಿನ ಆಡಳಿತಗಾರರನ್ನು ಇನ್ನಿಲ್ಲದಂತೆ ಸೆಳೆಯುತ್ತದೆ. ಅದೇ ದಿನಾಚರಣೆಯ ಕಾರ್ಯಕ್ರಮಕ್ಕೆ ಆಕೆಯನ್ನು ಕರೆಸಿ ಸನ್ಮಾನ ಮಾಡುವ ಆಡಳಿತವರ್ಗ, ‘ವಿಶ್ವದ ಅತ್ಯುತ್ತಮ ಕೈಬರಹ’ ಎಂಬ ಬಿರುದನ್ನು ದಯಪಾಲಿಸಿ ಆಕೆಯನ್ನು ಪುರಸ್ಕರಿಸುತ್ತದೆ.

ಇಷ್ಟೆಲ್ಲ ಜಗತ್ಪ್ರಸಿದ್ಧಳಾಗಿದ್ದರೂ ಪ್ರಕೃತಿಯ ವೈಯಕ್ತಿಕ ಮಾಹಿತಿ ಮಾತ್ರ ಸಾರ್ವಜನಿಕವಾಗಿ ಲಭ್ಯವಾಗಿಲ್ಲ. 2017ರಲ್ಲಿ ಆಕೆ 8ನೇ ತರಗತಿಯಲ್ಲಿ ಇದ್ದುದನ್ನು ಲೆಕ್ಕಕ್ಕೆ ತೆಗೆದುಕೊಂಡರೆ, ಈ 9 ವರ್ಷಗಳಲ್ಲಿ ಆಕೆ ಸ್ನಾತಕೋತ್ತರ ಪದವಿಯನ್ನು ಓದಿ ಮುಗಿಸಿರಬಹುದು ಎಂದು ಅಂದಾಜಿಸಲಾಗಿದೆ.

ಇಷ್ಟು ಸೊಗಸಾದ ಕೈಬರಹ ಪ್ರಕೃತಿಗೆ ಜನ್ಮಜಾತವಾಗಿ ಬಂದದ್ದೇನಲ್ಲ. ಚಿಕ್ಕಂದಿನಿಂದ ಪ್ರತಿದಿನವೂ ಕನಿಷ್ಠ 2 ಗಂಟೆ ಅಭ್ಯಾಸ ಮಾಡಿದ್ದಕ್ಕೆ ದಕ್ಕಿದ ಪ್ರತಿಫಲ ಅದು. ಹೀಗಾಗಿ, ಯಾವುದೂ ಸುಲಭವಾಗಿ ದಕ್ಕುವುದಿಲ್ಲ, ಕಷ್ಟಪಟ್ಟರೆ ಮಾತ್ರ ಪ್ರತಿಫಲ ಎಂಬುದಕ್ಕೆ ಪ್ರಕೃತಿಯೇ ಸೂಕ್ತ ನಿದರ್ಶನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.