7

‘ನನ್ನ ಮನಸ್ಸು ಯಾವಾಗ ಹೇಗೋ ಗೊತ್ತಾಗುತ್ತಿಲ್ಲ!’

Published:
Updated:

ರಶ್ಮಿ, ರಾಯಚೂರು

1. ನನ್ನ ಮನಃಸ್ಥಿತಿಯೇ ನನಗೆ ಸಮಸ್ಯೆಯನ್ನು ನೀಡುತ್ತಿದೆ. ಅದು ಯಾವಾಗ ಹೇಗಿರುತ್ತದೆಯೋ ತಿಳಿಯುವುದಿಲ್ಲ. ಒಮ್ಮೊಮ್ಮೆ ತುಂಬಾ ಸಿಟ್ಟು ಬರುತ್ತದೆ. ಆದರೆ ಅದನ್ನು ಹೊರಹಾಕಲು ಆಗುವುದಿಲ್ಲ. ಅಳು ಬರುತ್ತದೆ ಆದರೆ ಅಳಲು ಆಗುವುದಿಲ್ಲ. ಮಾನಸಿಕ ಒತ್ತಡ ಜಾಸ್ತಿ ಆಗುತ್ತಿದೆ; ಆದರೆ ಇದರಿಂದ ಹೊರ ಬರಲು ಆಗುತ್ತಿಲ್ಲ. ನನ್ನ ಸ್ನೇಹಿತರ ಜೊತೆ ಮಾತನಾಡಲು ಹೋದರೆ ಅವರು ಸರಿಯಾಗಿ ಪ್ರತಿಕ್ರಿಯಿಸುವುದಿಲ್ಲ. ಮನಸ್ಸಿಗೆ ತುಂಬ ನಿರಾಸೆ ಆಗುತ್ತದೆ. ಇದರಿಂದ ನನ್ನ ಓದಿಗೂ ಸಮಸ್ಯೆ ಆಗುತ್ತಿದೆ. 

ನೀವು ಇಲ್ಲಿ ನಿಮ್ಮ ಮನಃಸ್ಥಿತಿಯನ್ನು ವಿವರಿಸಿದ ರೀತಿಯನ್ನು ನೋಡಿದರೆ ನೀವು ನಿಮಗೆ ಆತ್ಮೀಯರು ಎನ್ನಿಸಿದವರ ಬಳಿ ಮಾತನಾಡುವುದು ಉತ್ತಮ. ಅವರು ನಿಮ್ಮ ತಂದೆ–ತಾಯಿ ಅಥವಾ ನಿಮ್ಮ ಮನಸ್ಸಿಗೆ ಹತ್ತಿರವಾದವರು ಯಾರೇ ಆಗಿರಬಹುದು. ಚಿಕ್ಕ ವಯಸ್ಸಿನಲ್ಲೇ ಅತಿಯಾಗಿ ಮಾನಸಿಕ ಒತ್ತಡಕ್ಕೆ ಒಳಗಾಗುವುದು ಒಳ್ಳೆಯದಲ್ಲ. ನಿಮಗೆ ಯಾರೂ ಮಾತನಾಡಲು ಸಿಗದಿದ್ದರೆ ಮೊದಲಿಗೆ ಅದನ್ನು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳಲು ಅಭ್ಯಾಸ ಮಾಡಿ. ನೀವು ಏನನ್ನು ಯೋಚಿಸುತ್ತಿದ್ದೀರಿ ಮತ್ತು ಜೀವನದಲ್ಲಿ ನೀವು ಏನು ಮಾಡಬೇಕು ಎಂದು ನಿರ್ಧರಿಸಿದ್ದೀರಿ – ಎಂಬುದಕ್ಕೆಲ್ಲಾ ಅಕ್ಷರರೂಪ ನೀಡಿ. ಹೀಗೆ ಮಾಡುವುದರಿಂದ ನಿಮ್ಮ ಯೋಚನೆಯಲ್ಲಿ ಸ್ಪಷ್ಟತೆಯನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಆ ಸ್ಪಷ್ಟತೆ ಏನು ಎಂಬುದನ್ನು ಪಟ್ಟಿ ಮಾಡಿಕೊಳ್ಳಿ. ಯಾವ ಅಂಶಗಳ ನಿಮ್ಮ ಯೋಚನೆಗಳನ್ನು ಮೋಡ ಕವಿದಂತೆ ಮಂಕಾಗಿಸಿದೆ ಎಂಬುದನ್ನು ತಿಳಿದುಕೊಳ್ಳಿ. ಸಮತೋಲಿತ ಆಹಾರ ಹಾಗೂ ವ್ಯಾಯಾಮ ತುಂಬ ಮುಖ್ಯ. ಅದರಲ್ಲೂ ವಿಶೇಷವಾಗಿ ಧ್ಯಾನದೊಂದಿಗೆ ಯೋಗ ಮಾಡಿ. ಅದು ಖಂಡಿತ ನಿಮ್ಮ ಯೋಚನೆಗಳನ್ನು ಬದಲಿಸಲು ಸಹಾಯ ಮಾಡುತ್ತದೆ. ಆಗ ಮಾತ್ರ ನಿಮ್ಮ ಕೋಪ ಹಾಗೂ ಆತಂಕ ತಗ್ಗಲು ಸಾಧ್ಯ. ನಿಮಗೆ ಆತ್ಮೀಯರು ಎನ್ನಿಸಿದವರ ಬಳಿ ಮಾತನಾಡಲು ಸಾಧ್ಯವಾಗದಿದ್ದರೆ ಉತ್ತಮ ಆಪ್ತ ಸಮಾಲೋಚಕರನ್ನು ನೋಡಿ; ಅವರು ನಿಮಗೆ ಖಂಡಿತ ಸಹಾಯ ಮಾಡುತ್ತಾರೆ.

**

ಹೆಸರು, ಊರು ಬೇಡ

2. ನನಗೆ 27 ವರ್ಷ. ಚಾರ್ಟೆಡ್ ಅಕೌಟೆಂಟ್ ಓದುವಾಗ ಎರಡು ಬಾರಿ ಫೇಲ್ ಆದೆ. ನನಗೆ ಪಾಸ್ ಆಗುವ ಎಬಿಲಿಟಿ ಇಲ್ಲ ಎಂದು ಬಿಟ್ಟುಬಿಟ್ಟೆ. ನಾನು ಚಾರ್ಟೆಡ್ ಅಕೌಂಟ್ ಆಫೀಸಿನಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಸಮಸ್ಯೆ ಎಂದರೆ ನಾನು ಯಾವುದೇ ಪ್ಲಾನ್ ಮಾಡಿದರು ಅದನ್ನು ಪ್ರಾಕ್ಟಿಕಲ್ ಆಗಿ ಮಾಡಲು ಬರುವುದಿಲ್ಲ. ಇದಕ್ಕೆ ಕಾರಣವೇನು ಮತ್ತು ಪರಿಹಾರ ಏನು ತಿಳಿಸಿ.

ಸಿಎ ಮುಗಿಸುವುದು ನಿಜಕ್ಕೂ ಸವಾಲು ಮತ್ತು ಇದುನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಸಮರ್ಪಣಾಭಾವ ಹಾಗೂ ನಿರಂತರತೆಯಿಂದ ಮಾತ್ರ ಇದರಲ್ಲಿ ಯಶಸ್ಸು ಗಳಿಸಲು ಸಾಧ್ಯ. ಯೋಜನೆಗಳನ್ನು ರೂಪಿಸಿ ಅದರ ಮೇಲೆ ಕೆಲಸ ಮಾಡುವುದೇ ಜೀವನ. ಎಲ್ಲಾ ಕೆಲಸವನ್ನೂ ಯೋಜಿತವಾಗಿ ಮಾಡಲು ಸಾಧ್ಯವಿಲ್ಲ. ಕೆಲವು ಯೋಜನೆಗಳನ್ನು ಪ್ರಾಯೋಗಿಕವಾಗಿ ಮಾಡುವುದು ಅಸಾಧ್ಯ. ಅದರ ಅರ್ಥ ಹೊಸ ಐಡಿಯಾಗಳ ಬಗ್ಗೆ ನೀವು ಯೋಚಿಸುವುದನ್ನು ನಿಲ್ಲಿಸಬೇಕು ಎಂಬುದಲ್ಲ. ಯೋಜನೆಗಳನ್ನು ರೂಪಿಸುತ್ತಲೇ ಇರಿ, ನಿಲ್ಲಿಸಬೇಡಿ. 

ಜೀವನದಲ್ಲಿ ಒಮ್ಮೆ ಸೋತರೆ ಮತ್ತೆ ಮತ್ತೆ ಸೋಲುತ್ತಲೇ ಇರುತ್ತೇವೆ ಎಂದು ಅನ್ನಿಸುತ್ತದೆ. ನಾನು ಸೋಲುತ್ತೇನೆ ಎಂದು ಅಂದುಕೊಳ್ಳುವುದು ತುಂಬಾ ಸುಲಭ, ಗೆಲ್ಲುತ್ತೇನೆ ಅನ್ನುಕೊಳ್ಳುವುದು ಸುಲಭವಲ್ಲ. ನಿನ್ನೆ ಅಥವಾ ಇವತ್ತು ನೀವು ಸೋತಿದ್ದೀರಿ ಎಂಬ ಕಾರಣಕ್ಕೆ ಮುಂದೆಯೂ ಸೋಲಬೇಕೆಂದೇನು ಇಲ್ಲ. ಸತ್ಯ ಏನೆಂದರೆ ಇದು ನಿಮ್ಮ ಜೀವನ ಕೊನೆ ಅಲ್ಲ, ಮುಂದೆ ಸಾಗುತ್ತಲೇ ಇರಿ. ನೀವು ಒಂದು ಕ್ರಮ ತೆಗೆದುಕೊಂಡರೆ ಪ್ರತಿದಿನ ಕಲಿಯುತ್ತಲೇ ಇರುತ್ತೀರಿ. ಇದು ನಿಮ್ಮನ್ನು ಕೆಲ ಸೋಲುಗಳಿಗೆ ಬಗ್ಗದಂತೆ ಮಾಡುತ್ತದೆ.  

ನಿಮಗೆ ವಿಶ್ವಾಸಿಗಳು ಎನ್ನಿಸಿದ ಹಾಗೂ ನಿಮ್ಮ ಮಾತನ್ನು ಕೇಳುವ, ನಿಮಗೆ ಆತ್ಮೀಯ ಎನ್ನಿಸುವ ವ್ಯಕ್ತಿಯ ಜೊತೆ ಮಾತನಾಡಿ, ಈ ರೀತಿಯ ಸಂಭಾಷಣೆಯಿಂದ ನಿಮ್ಮ ಆಲೋಚನೆಗೆ ಹೊಸತೊಂದು ಆಯಾಮ ದೊರಕುತ್ತದೆ ಮತ್ತು ಬೇರೊಬ್ಬರ ದೃಷ್ಟಿಕೋನದ ಅರಿವು ನಿಮಗಾಗುತ್ತದೆ. ಆ ವ್ಯಕ್ತಿಯೂ ನಿಮ್ಮನ್ನು ಆಳದಿಂದ ಅರಿತುಕೊಂಡು ನಿಮ್ಮ ಭವಿಷ್ಯದ ದಾರಿಗೆ ಪ್ರೋತ್ಸಾಹ ನೀಡಲು ಸಹಾಯವಾಗಬಹುದು. ಆತ್ಮವಿಶ್ವಾಸವನ್ನು ಹೆಚ್ಚಿಸುವ ಪುಸ್ತಕಗಳನ್ನು ಓದಿ. ನಿಮ್ಮ ಮನಸ್ಸನ್ನು ತಿಳಿಗೊಳಿಸಿ, ಬಲ ತುಂಬಲು ಇಂಥ ಓದು ಅನುಕೂಲಕರ.

**

ಶಿವ, ಬೆಳಗಾವಿ

3. ನನ್ನ ವಯಸ್ಸು 21, ನನಗೆ ಏನಾಗಿದೆ ಗೊತ್ತಾಗುತ್ತಿಲ್ಲ! ಸುಮ್ಮ ಸುಮ್ಮನೆ ಒತ್ತಡಕ್ಕೆ ಒಳಗಾಗುತ್ತೇನೆ. ಒಬ್ಬೊಬ್ಬನೇ ಮಾತನಾಡುತ್ತಿರುತ್ತೇನೆ. ಆದರೆ ಈ ರೀತಿ ಮಾತನಾಡುವುದರಿಂದ ನನಗೆ ಖುಷಿ ಸಿಗುತ್ತದೆ. ನನಗೆ ತುಂಬಾ ಜನ ಇದ್ದಲ್ಲಿ ಇರಲು ಆಗುವುದಿಲ್ಲ. ಏಕಾಂಗಿಯಾಗಿ ಇರಬೇಕು ಎನ್ನಿಸುತ್ತದೆ. ಜಾಸ್ತಿ ಶಬ್ದ ಕೇಳಿದರೆ ಆಗುವುದಿಲ್ಲ. ಯಾರನ್ನು ಚಿಕ್ಕದಾಗಿ ಬೈದರೂ ಮನಸ್ಸಿಗೆ ನೋವಾಗುತ್ತದೆ.

ತಾರುಣ್ಯದಲ್ಲಿ, ಯವಕರಾಗಿದ್ದಾಗ ನಮ್ಮ ಸುತ್ತಲು ಏನು ನಡೆಯುತ್ತಿದೆ ಅದನ್ನು ಮಾಡಲು ಕ್ರಿಯಾಶೀಲರಾಗಿರಬೇಕು; ಜೊತೆಗೆ ಚಟುವಟಿಕೆಯಿಂದ ಇದ್ದು, ಉತ್ಸಾಹದಿಂದಿರಬೇಕು. ಜೀವನದಲ್ಲಿ ಏನು ಮಾಡಬೇಕು ಎಂಬುದರ ಮೇಲೆ ಗಮನ ನೀಡುವ ವಯಸ್ಸಿದು, ಮತ್ತು ಜೀವನದಲ್ಲಿ ನೀವು ಏನನ್ನು ಸಾಧಿಸಬೇಕು ಎಂಬುದನ್ನು ತಿಳಿಯುವ ವಯಸ್ಸು. ಜೀವನವನ್ನು ತುಂಬಾ ಸುಲಭವಾಗಿ ದೂರಬಹುದು. ‘ನನಗೆ ಅದು ಇಷ್ಟ ಇಲ್ಲ, ಇದು ಇಷ್ಟ ಇಲ್ಲ’ ಎಂದು ಸುಲಭವಾಗಿ ಹೇಳಬಹುದು. ಆದರೆ ಯವಕರು ಹಾಗೆ ಮಾಡುವಂತಿಲ್ಲ. ಹಾಗಾಗಿ ಇಂದಿನಿಂದಲೇ ಎದ್ದು ನಿಂತು ಕೆಲಸ ಆರಂಭಿಸಿ. ನಿಮ್ಮ ಅಲಸ್ಯದ ಮನಃಸ್ಥಿತಿಯಿಂದ ಹೊರಬನ್ನಿ. ನೀವು ನಿಜಕ್ಕೂ ಆರಾಮಾಗಿ‌ದ್ದೀರಿ. ನೀವು ಪ್ರತಿದಿನ ಕನಿಷ್ಠ ಒಂದು ಗಂಟೆಯಷ್ಟು ದೀರ್ಘ ವ್ಯಾಯಾಮ ಮಾಡಿ. ಸಂಜೆ 30 ಗಂಟೆ ಧ್ಯಾನ ಮಾಡಿ. ಇವೆಲ್ಲವೂ ನೀವು ತಪ್ಪದೇ ಮಾಡಬೇಕು.

ಸ್ವ–ಪ್ರೇರಣೆಯ ಮಾತುಗಳು ತುಂಬಾ ಮುಖ್ಯ. ಅದನ್ನು ಮಾಡಿ, ನಿಮ್ಮ ಹಿಂದಿನ ಮನೋಭಾವದಿಂದ ಹೊರಬನ್ನಿ. ಸ್ನೇಹಿತರನ್ನು ಸಂಪಾದಿಸಿಕೊಳ್ಳಿ. ತುಂಬ ಜನರ ಸ್ನೇಹ ಸಂಪಾದಿಸಬೇಕೆಂದೇನು ಇಲ್ಲ. ಆದರೆ ನಿಮ್ಮ ವಯಸ್ಸಿನ ಕೆಲವರೊಂದಿಗೆ ಸ್ನೇಹ ಬೆಳೆಸಿಕೊಳ್ಳಿ. ಅವರೊಂದಿಗೆ ಚರ್ಚೆ ಮಾಡಿ ಮತ್ತು ಸುತ್ತಲಿನ ಎಲ್ಲದರ ಬಗ್ಗೆ ಅವರೊಂದಿಗೆ ಮಾತನಾಡಿ. ನಿಮ್ಮ ಸುತ್ತಲೂ ನಡೆಯುವ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಸಮಯ ಸರಿದಂತೆ ನೀವು ಅದರೊಂದಿಗೆ ಎಂಜಾಯ್ ಮಾಡುತ್ತೀರಿ. ಮುಂದೆ ಓದಿ ಅಥವಾ ಕೆಲಸಕ್ಕೆ ಸೇರಿ. ಸಮಯವನ್ನು ಸುಮ್ಮನೆ ಹಾಳು ಮಾಡಬೇಡಿ. ಇಂತಹ ಅಮೂಲ್ಯ ಸಮಯ ಮತ್ತೆ ಮರುವುದಿಲ್ಲ. ಮತ್ತು ಮುಂದೆ ನೀವು ಈ ಬಗ್ಗೆ ಪಶ್ಚಾತ್ತಾಪ ಪಡುವಂತಾಗಬಾರದು.⇒v

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !