ದೇಹದ ತೂಕ ತುಸು ಏರುತ್ತಾ ಹೋದಂತೆ, ಯಾವ ಬಟ್ಟೆ ತೊಟ್ಟರೂ ತೃಪ್ತಿಯಾಗದು. ಪ್ಲಸ್ ಸೈಜ್ ಇರುವವರಿಗಾಗಿಯೇ ಆರಾಮದಾಯಕ ಮಾತ್ರವಲ್ಲ ಆತ್ಮವಿಶ್ವಾಸವನ್ನೂ ನೀಡಬಲ್ಲ ಹಲವು ಕ್ಯಾಷುಯಲ್ ಉಡುಗೆಗಳು ಈಗ ಮಾರುಕಟ್ಟೆಯಲ್ಲಿವೆ.

ನೀವು ಕುರ್ತಾ ಧರಿಸುವವರಾಗಿದ್ದರೆ ‘ಎ –ಲೈನ್’ ಕುರ್ತಾಗಳು, ಅಂದರೆ ಹೆಚ್ಚು ನೆರಿಗೆಗಳಿರುವ ಕುರ್ತಾಗಳನ್ನು ಧರಿಸಿ. ಇದರಿಂದ ಹೊಟ್ಟೆಯ ಬೊಜ್ಜು ಅಷ್ಟಾಗಿ ಕಾಣುವುದಿಲ್ಲ. ನಿತ್ಯ ಬಳಕೆಗೆ ಆದಷ್ಟೂ ಶುದ್ಧ ಹತ್ತಿಯ ಬಟ್ಟೆಯನ್ನು ಬಳಸಿ. ಇನ್ನು ವಿಶೇಷ ಸಮಾರಂಭಗಳಿಗಾಗಿ ಚಂದೇರಿ ಸಿಲ್ಕ್ ಅಥವಾ ಜರಿ ಎಂಬ್ರಾಯಿಡರಿ ಇರುವ ಅನಾರ್ಕಲಿ ಕುರ್ತಾಗಳನ್ನು ಧರಿಸಬಹುದು. ಹೆಚ್ಚಾಗಿ ತಿಳಿ ಬಣ್ಣದ ಬಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು.

ಇನ್ನು ಆಫೀಸಿಗೆ ಡೆನಿಮ್ ಜೀನ್ಸ್ ಧರಿಸಿ. ಹೈ ವೇಸ್ಟ್ ಇದ್ದು, ಅಗಲವಾದ ಬಾಟಮ್ ಇರುವ ಜೀನ್ಸ್ಗಳಿಗೆ ಟಕ್ ಇನ್ ಮಾಡಿದ ಟೀ–ಶರ್ಟ್ ಅಥವಾ ಶರ್ಟ್ ಧರಿಸಬಹುದು. ಇದರ ಮೇಲೆ ದೊಗಲೆ ಸೈಜಿನ ಡೆನಿಂ ಜಾಕೆಟ್ ಧರಿಸಿದರೆ ಟ್ರೆಂಡಿ ಲುಕ್ ಸಿಗುತ್ತದೆ. ಮ್ಯಾಕ್ಸಿ ಡ್ರೆಸ್ಗಳು, ಪಾಕೆಟ್ ಇರುವ ದೋರಿ ಬಟ್ಟೆಗಳು ಆರಾಮದಾಯಕ ಎನಿಸಬಲ್ಲವು.

ಹಗುರವಾದ ಮತ್ತು ನಿಟ್ ರಿಬ್ ಜರ್ಸಿ ಫ್ಯಾಬ್ರಿಕ್ನಲ್ಲಿ ತಯಾರಾದ ಕೋ–ಆರ್ಡ್ (ಟಾಪ್– ಬಾಟಂ ಒಂದೇ ಬಣ್ಣ) ಸೆಟ್ಗಳನ್ನು ತೊಟ್ಟು ಮುದ್ದಾಗಿ ಕಾಣಬಹುದು. ಟೇಪರ್ಡ್ ಪ್ಯಾಂಟ್ಗಳಿಗೆ ತೆಳ್ಳಗಿನ ಟೀ–ಶರ್ಟ್ ಹೊಂದಿಕೆಯಾಗುತ್ತದೆ. ಸರಳವಾದ ಸಾಲಿಡ್ ಶರ್ಟ್ ಡ್ರೆಸ್ಗಳು, ಅಗಲವಾದ ಪ್ಯಾಂಟ್ನ ಜಮ್ ಸೂಟ್ಗಳು ಆಧುನಿಕವಾಗಿರುವುದಷ್ಟೇ ಅಲ್ಲ ತೊಟ್ಟರೆ ಆರಾಮದಾಯಕ ಸಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.