ಅನ್ನಪೂರ್ಣ, ಸುಂದರರಾಜ್ ಅವರ ಒಬ್ಬಳೇ ಮುದ್ದಿನ ಮಗಳು ರೇಖಾ. ಶಾಲಾ ದಿನಗಳಿಂದಲೂ ನನ್ನ ಆಪ್ತ ಗೆಳತಿ. ಮನೆಯವರ ಪ್ರೀತಿಗೆ ಕೊರತೆ ಇಲ್ಲದಂತೆ ಬೆಳೆದವಳು. ಆದರೆ 8ನೇ ತರಗತಿಯಲ್ಲಿ ಋತುಮತಿಯಾದ ಬಳಿಕ ಮನೆಯವರಿಂದ, ಅದರಲ್ಲೂ ತಂದೆಯಿಂದ ಅವಳು ಅನುಭವಿಸಿದ ಮಾನಸಿಕ ಕಿರಿಕಿರಿ, ನೋವು ಈಗಲೂ ಎಷ್ಟೋ ಬಾರಿ ನನ್ನನ್ನು ಕಾಡುತ್ತದೆ. ಈ ದಿನಗಳಲ್ಲೂ ಇಂತಹ ಯಾತನೆ ಅನುಭವಿಸುತ್ತಿರುವ ಎಷ್ಟೋ ಹೆಣ್ಣುಮಕ್ಕಳ ಪ್ರತಿನಿಧಿಯಂತೆ ರೇಖಾ ನನಗೆ ಭಾಸವಾಗುತ್ತಾಳೆ.

ಆಕೆ ಋತುಮತಿಯಾದದ್ದು ತಾಯಿಗೆ ಖುಷಿಯ ಸಂಗತಿಯಾದರೆ ತಂದೆಗೆ ದುಃಖ, ಬೇಜಾರಿನ ವಿಷಯವಾಗಿತ್ತು. 9 ದಿನ ಆಕೆಯನ್ನು ಇನ್ನಿಲ್ಲದಂತೆ ಜತನ ಮಾಡಿ, ಕೊನೇ ದಿನ ನೆಂಟರಿಷ್ಟರನ್ನು ಕರೆದು ಅದ್ಧೂರಿ ಸಮಾರಂಭವನ್ನೇ ಮನೆಯವರು ಏರ್ಪಡಿಸಿದ್ದರು. ಆಗೆಲ್ಲಾ ಖುಷಿಯಾಗಿಯೇ ಇದ್ದ ರೇಖಾಗೆ ತಿಂಗಳ ಋತುಚಕ್ರ ಶುರುವಾದಾಗಷ್ಟೇ ತಂದೆಯ ಅತಿರೇಕದ ವರ್ತನೆ ಅನುಭವಕ್ಕೆ ಬರತೊಡಗಿತು.

ಮುಟ್ಟಾದ ಐದು ದಿನಗಳವರೆಗೂ ಮಡಿ, ಮಡಿ, ಮಡಿ. ಸಂಪ್ರದಾಯದ ಹೆಸರಿನಲ್ಲಿ ಕಟ್ಟುನಿಟ್ಟಿನ ನಿಯಮ ಪಾಲನೆ. ಒಮ್ಮೆ ಮುಟ್ಟಾದ ಮೂರನೇ ದಿನ, ಒಣಗಿದ ತುಳಸಿ ಗಿಡಕ್ಕೆ ನೀರು ಹಾಕುತ್ತಿದ್ದಳು ರೇಖಾ. ಮುಟ್ಟಾದವರು ತುಳಸಿ ಗಿಡಕ್ಕೆ ನೀರು ಹಾಕುವಂತಿಲ್ಲ, ಗಿಡವನ್ನು ಮುಟ್ಟುವಂತಿಲ್ಲ ಎಂದು ಕಟ್ಟಪ್ಪಣೆ ಮಾಡಿದರು ತಂದೆ. ರೋಗನಿರೋಧಕ ಶಕ್ತಿ ಹೆಚ್ಚಿಸುವ ತುಳಸಿ ಒಣಗಿದರೂ ಪರವಾಗಿಲ್ಲ ಮುಟ್ಟಾದ ಹೆಣ್ಣುಮಕ್ಕಳು ಅದಕ್ಕೆ ನೀರು ಹಾಕಬಾರದೇ ಎಂಬ ಪ್ರಶ್ನೆ ಕೇಳಲು ಧೈರ್ಯ ಸಾಲದೆ ಅವಳ ಗಂಟಲಲ್ಲೇ ಉಳಿಯಿತು.

ಅಂದೊಮ್ಮೆ ರೇಖಾಳ ತಂದೆ ಸ್ನಾನಕ್ಕೆಂದು ನೀರಿನ ಕೊಡಕ್ಕೆ ಹೀಟರ್ ಹಾಕಿದ್ದರು. ನೀರು ಅತಿಯಾಗಿ ಕಾದ ಕಾರಣ ಸ್ವಿಚ್ ಆಫ್ ಮಾಡಿದ ರೇಖಾ ಕೊಡವನ್ನು ಎತ್ತಿ ಪಕ್ಕಕ್ಕೆ ಇಟ್ಟಳು. ಅದನ್ನು ಕಂಡ ತಂದೆ ಹೌಹಾರಿದರು. ಅಷ್ಟೂ ಬಿಸಿನೀರನ್ನು ಕೂಡಲೇ ಕೆಳಕ್ಕೆ ಚೆಲ್ಲಿ, ಮಡಿ ಹೋಯಿತು ಎಂದು ಅಬ್ಬರಿಸಿದರು. ನೀರಿಗೂ ಮೈಲಿಗೆಯೇ ಎಂದು ವಿರೋಧಿಸಿದಳು ರೇಖಾ. ಅದರಿಂದ ಏನೂ ಪ್ರಯೋಜನವಾಗಲಿಲ್ಲ.

ಮುಟ್ಟಾದವಳು ಕೊಡ ತುಂಬಿ ಹರಿಯುತ್ತಿದ್ದರೂ ನಲ್ಲಿಯನ್ನು ನಿಲ್ಲಿಸುವಂತಿಲ್ಲ, ಪೂಜೆಗೆ ಕೂತಾಗ ಆಕೆ ಓಡಾಡುವುದು ಕಂಡರೂ ಮೈಲಿಗೆ, ದೇವರ ವಿಗ್ರಹದ ಮೇಲೆ ಅವಳ ನೆರಳು ಬೀಳುವಂತಿಲ್ಲ, ಪೂಜೆಗೆ ತಂದ ಹೂ ಮುಟ್ಟುವಂತಿಲ್ಲ. ತಂದೆಯನ್ನು ಅಪ್ಪಿತಪ್ಪಿ ಮುಟ್ಟಿದರೆ ಕೂಡಲೇ ಅವರು ಮತ್ತೆ ಸ್ನಾನದ ಮನೆಗೆ ಓಡುತ್ತಾರೆ. ಇದೆಂಥ ಪದ್ಧತಿ? ಪ್ರಕೃತಿಗೆ ಇಲ್ಲದ ಮೈಲಿಗೆ ಮನುಷ್ಯರಿಗೇಕೆ? ಯಾವ ಧರ್ಮಗ್ರಂಥದಲ್ಲಿವೆ ಇಂತಹ ನಿಯಮಗಳು ಎಂದು ನನ್ನ ಮುಂದೆ ಹೇಳಿಕೊಂಡು ಕಣ್ಣೀರಿಡುತ್ತಿದ್ದಳು ಅವಳು.

ಇದು ಹತ್ತಾರು ವರ್ಷಗಳ ಹಿಂದೆ ನನ್ನ ಅನುಭವಕ್ಕೆ ಬಂದ ಸಂಗತಿಯಾದರೂ ಇಂದಿಗೂ ಎಷ್ಟೋ ಮನೆಗಳಲ್ಲಿ ಇಂತಹುದೇ ವಾತಾವರಣ ಇರುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಗೆಯ ಅನಗತ್ಯ, ಅವೈಜ್ಞಾನಿಕ ಪದ್ಧತಿಗಳು ನಿಲ್ಲುವುದು ಯಾವಾಗ? ಹೆಣ್ಣುಮಕ್ಕಳಿಗೆ ಇಂತಹ ಗೊಡ್ಡು ಸಂಪ್ರದಾಯಗಳಿಂದ ಮುಕ್ತಿ ದೊರಕುವುದು ಯಾವಾಗ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.