‘ನಾವು ಚಿಕ್ಕವರಿದ್ದಾಗ ನಮ್ಮ ತಂದೆ ಹುಣಸೆಹಣ್ಣಿನ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದರು. ಸಾಲಗಾರರು ಮನೆ ಬಳಿ ಬರುತ್ತಿದ್ದರು. ಅವರಿಂದ ತಪ್ಪಿಸಿಕೊಳ್ಳಲು ತಂದೆ ಮಧ್ಯರಾತ್ರಿ ಮನೆಗೆ ಬರಬೇಕಿತ್ತು. ಸಂಬಂಧಿಕರೇ ನಮ್ಮನ್ನು ಹೀಯಾಳಿಸುತ್ತಿದ್ದರು. ಈಗ ಇಡೀ ಊರಿಗೆ ಊರೇ ಕೊಂಡಾಡುತ್ತಿದೆ’....

- ಹೀಗೆ ಮಾತನಾಡುತ್ತಲೇ ಭಾವುಕರಾದರು ಭಾರತದ ಅಂಧ ಮಹಿಳೆಯರ ಕ್ರಿಕೆಟ್ ತಂಡದ ನಾಯಕಿ ಟಿ.ಸಿ.ದೀಪಿಕಾ.

ಕಳೆದ ನವೆಂಬರ್ನಲ್ಲಿ ನೇಪಾಳದಲ್ಲಿ ನಡೆದ ಅಂಧ ಮಹಿಳೆಯರ ಟಿ–20 ವಿಶ್ವಕಪ್ನಲ್ಲಿ ಭಾರತ ತಂಡ ಪ್ರಶಸ್ತಿ ಗೆದ್ದು ಸಂಭ್ರಮಿಸಿತು. ತಂಡಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬಂತು. ದಿಲ್ಲಿಯಿಂದ ಹಳ್ಳಿಯ ತನಕ ಸಂಭ್ರಮಾಚರಣೆ ಮನೆ ಮಾಡಿತ್ತು. ವಿಶ್ವಕಪ್ ವಿಜೇತ ಭಾರತ ತಂಡವನ್ನು ಮುನ್ನಡೆಸಿದವರು ಶಿರಾ ತಾಲ್ಲೂಕಿನ ಕರೆತಿಮ್ಮನಹಳ್ಳಿಯ ದೀಪಿಕಾ.

ಮನೆಯಲ್ಲಿ ಒಂದ್ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿಯಿಂದ ಭಾರತಕ್ಕೆ ವಿಶ್ವಕಪ್ ಗೆದ್ದು ಕೊಡುವ ತನಕ ಸಾಗಿ ಬಂದಿದ್ದಾರೆ. ಜೀವನದ ಎಲ್ಲ ಸವಾಲನ್ನು ಸಮರ್ಥವಾಗಿ ಎದುರಿಸಿ ನಿಂತಿದ್ದಾರೆ. ‘ಅವಳಿಗೆ ಕಣ್ಣು ಕಾಣಿಸುವುದಿಲ್ಲ, ಯಾಕೆ ಓದಿಸುತ್ತೀರಿ? ನಿಮಗೆ ಓದಿಸಲು ಆಗುವುದಿಲ್ಲ. ಮನೆಯಲ್ಲಿ ಇರಲು ಬಿಡಿ’ ಎಂದು ಅವಮಾನ ಮಾಡಿದವರಿಗೆ ತಮ್ಮ ಸಾಧನೆ ಮೂಲಕ ಉತ್ತರ ಕೊಟ್ಟಿದ್ದಾರೆ.

ಭಾರತ ವಿಶ್ವಕಪ್ ಗೆದ್ದ ನಂತರ ಹೊಸ ಜೀವನ ದೊರೆತಿದೆ. ಆರ್ಥಿಕವಾಗಿ ಸುಧಾರಿಸುತ್ತಿದ್ದಾರೆ. ಸರ್ಕಾರ ನೆರವಿನ ಹಸ್ತ ಚಾಚಿದೆ. ಉದ್ಯೋಗದ ಭರವಸೆ ನೀಡಿದೆ. ಆಂಧ್ರಪ್ರದೇಶ ಸರ್ಕಾರ ಮಡಕಶಿರಾ– ಕರೆತಿಮ್ಮನಹಳ್ಳಿ ರಸ್ತೆ ಅಭಿವೃದ್ಧಿಗೆ ಮುಂದಾಗಿದೆ. ಈ ಎಲ್ಲ ಕಾರ್ಯಗಳಿಂದ ದೀಪಿಕಾ ಅನೇಕರಿಗೆ ಮಾದರಿಯಾಗಿದ್ದಾರೆ. ಕನಸು ಹೊತ್ತು ಮಹಾನಗರದ ಕಡೆಗೆ ಬರುವವರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ.

ಆಪರೇಷನ್ಗೆ ಹಣವಿಲ್ಲದ ಸ್ಥಿತಿ...

ಶಿರಾ ತಾಲ್ಲೂಕಿನ ದೊಡ್ಡಬಾಣಗೆರೆ ಶಾಲೆಯಲ್ಲಿ 1ರಿಂದ 4ನೇ ತರಗತಿ, ಮೈಸೂರಿನಲ್ಲಿ ಪ್ರೌಢ ಶಿಕ್ಷಣ, ಬರಗೂರಿನಲ್ಲಿ ಪಿಯುಸಿ ಮುಗಿಸಿದರು. 5 ತಿಂಗಳು ಮಗು ಆಗಿದ್ದಾಗ ಕೈ ಉಗುರಿನಿಂದ ಕಣ್ಣಿಗೆ ಪರಚಿಕೊಂಡು ಗಾಯ ಮಾಡಿಕೊಂಡಿದ್ದರು. ವೈದ್ಯರ ಬಳಿ ತೋರಿಸಿದಾಗ ‘12 ವರ್ಷ ತುಂಬಿದ ನಂತರ ಕಣ್ಣಿನ ಆಪರೇಷನ್ ಮಾಡಲಾಗುವುದು’ ಎಂದಿದ್ದರು.

ಹಣದ ಸಮಸ್ಯೆಯಿಂದಾಗಿ ವೈದ್ಯರು ಹೇಳಿದ ಸಮಯಕ್ಕೆ ಚಿಕಿತ್ಸೆ ಕೊಡಿಸಲು ಪೋಷಕರಿಗೆ ಆಗಲಿಲ್ಲ. ‘ಊಟ ಸಿಗೋದೇ ಕಷ್ಟ ಆಗಿತ್ತು. ಆಪರೇಷನ್ ಮಾಡಿಸೋಕೆ ಎಲ್ಲಿಂದ ಸಾಧ್ಯ’ ಎಂದು ದೀಪಿಕಾ ಕಣ್ಣಿನ ದೃಷ್ಟಿ ಕಳೆದುಕೊಂಡ ಘಟನೆಯನ್ನು ಮೆಲುಕು ಹಾಕಿದರು.

ವಿಶ್ವಕಪ್ ಫೈನಲ್ ಪಂದ್ಯದ ಬಳಿಕ ಮೈದಾನದ ಪಿಚ್ನಲ್ಲಿ ಕುಳಿತು ಇದುವರೆಗೆ ನಡೆದು ಬಂದ ಹಾದಿ ಸ್ಮರಿಸಿದೆ. ತಂದೆ–ತಾಯಿ ಪಟ್ಟಿದ್ದ ಕಷ್ಟ, ಬೆಂಬಲ ನೀಡಿದ ಸಮರ್ಥನಂ ಸಂಸ್ಥೆ, 2025ರಲ್ಲಿ ಭಾರತದಲ್ಲಿ ಗತಿಸಿದ ಎಲ್ಲ ಕ್ಷಣಗಳು ಕಣ್ಣುಮುಂದೆ ಹಾದು ಹೋದವು. ಯೋಧರಂತೆ ಹೋರಾಡಿ ದೇಶಕ್ಕೆ ವಿಶ್ವಕಪ್ ಜಯಿಸಿದ ಹೆಮ್ಮೆ ಇದೆ. ಇದರಿಂದ ಭಾರತ ತಂಡದ ಆಟಗಾರ್ತಿಯರ ಬದುಕು ಬದಲಾಗಿದೆ ಎಂದರು ದೀಪಿಕಾ.

‘ಸಮರ್ಥನಂ’ ಆಸರೆ: ಪ್ರೌಢಶಾಲೆಯಲ್ಲಿ ಓದುವಾಗ ರಾಮನಗರ ಮತ್ತು ಮೈಸೂರು ತಂಡಗಳ ಮಧ್ಯೆ ನಡೆದ ಪಂದ್ಯದಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಮೈದಾನಕ್ಕೆ ಇಳಿದಿದ್ದರು. ಅಂಧರಿಗೆ ಪ್ರತ್ಯೇಕವಾಗಿ ಟೂರ್ನಿ ಆಯೋಜಿಸಲಾಗುತ್ತದೆ ಎಂಬ ಅರಿವಿಲ್ಲದ ವಯಸ್ಸಿನಲ್ಲಿ ಕ್ರಿಕೆಟ್ ಕುರಿತು ಪ್ರೀತಿ ಬೆಳೆಸಿಕೊಂಡರು. ಅದು ಅವರನ್ನು ಭಾರತಕ್ಕೆ ವಿಶ್ವಕಪ್ ಗೆದ್ದು ಕೊಡುವ ತನಕ ತಂದು ನಿಲ್ಲಿಸಿದೆ.

2019ರಲ್ಲಿ ಬೆಂಗಳೂರಿನ ‘ಸಮರ್ಥನಂ’ ಅಂಧರ ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಕ್ಯಾಂಪ್ನಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಉತ್ತಮ ಪ್ರದರ್ಶನ ತೋರಿ, ಮೂರು ವರ್ಷ ರಾಜ್ಯದ ಪರವಾಗಿ ಆಡಿದರು. ಅಲ್ಲಿಂದ ಭಾರತ ತಂಡಕ್ಕೆ ಸೇರ್ಪಡೆಯಾದರು.

‘ಭಾರತೀಯ ಅಂಧರ ಕ್ರಿಕೆಟ್ ತಂಡ ಮುನ್ನಡೆಸುವ ಅವಕಾಶ ನನಗೆ ಸಿಗುತ್ತದೆ ಎಂದು ಕನಸಲ್ಲೂ ಎಣಿಸಿರಲಿಲ್ಲ. ತರಬೇತುದಾರರು ನಾಯಕತ್ವ ವಹಿಸಿಕೊಳ್ಳಿ ಎಂದಾಗ ನಾನು ಬೇಡ ಎಂದೇ ಹೇಳಿದ್ದೆ. ಅವರೇ ಧೈರ್ಯ ತುಂಬಿದರು. ಇಡೀ ತಂಡ ನನಗೆ ಬೆಂಬಲವಾಗಿ ನಿಂತಿತ್ತು. 16 ಜನ ಆಟಗಾರ್ತಿಯರು ಅಕ್ಕ–ತಂಗಿಯರಂತೆ ಕ್ರಿಕೆಟ್ ಆಡಿದ್ವಿ, ಅದರ ಫಲಿತಾಂಶ ಈಗ ಎಲ್ಲರ ಮುಂದಿದೆ’ ಎಂದು ಸಂತಸ ಹಂಚಿಕೊಂಡರು.

ಅಮ್ಮನ ವಿಮಾನ ಯಾನ...

ಮಳೆ ಬಂದರೆ ಮನೆ ತುಂಬೆಲ್ಲಾ ನೀರು ತುಂಬಿಕೊಳ್ಳುತ್ತಿತ್ತು. ಮಳೆಗಾಲದ ಪ್ರತಿ ದಿನ ಜಾಗರಣೆ. ಹಸಿವಾದಾಗ ನೀರು ಕುಡಿದು ಮಲಗಿದ ಉದಾಹರಣೆಗಳೂ ಸಾಕಷ್ಟಿವೆ. ಇಂತಹ ಸ್ಥಿತಿಯಲ್ಲಿ ಬೆಳೆದ ಅಮ್ಮನನ್ನು ವಿಮಾನದಲ್ಲಿ ಕರೆದುಕೊಂಡು ಹೋಗಿದ್ದು, ಸಂಭ್ರಮ ದುಪ್ಪಟ್ಟಾಗಿಸಿದೆ ಎಂದು ದೀಪಿಕಾ ಖುಷಿಪಟ್ಟರು.

‘ನಮ್ಮೂರಿನ ಅಕ್ಕಪಕ್ಕದ ಮನೆಯವರೂ ತುಂಬಾ ಹೀಯಾಳಿಸುತ್ತಿದ್ದರು. ಅವರು ಇನ್ನೆಲ್ಲಿ ಊರಲ್ಲಿ ಇರ್ತಾರೆ, ಊರು ಬಿಟ್ಟು ಹೋಗ್ತಾರೆ ಎಂದು ಎಷ್ಟೋ ಬಾರಿ ಅವಮಾನ ಮಾಡಿದರು. ಕಣ್ಣು ಕಾಣಿಸದ ಮಗಳನ್ನು ಇಟ್ಟುಕೊಂಡು ಏನು ಮಾಡುತ್ತಾರೆ. ಅವರಿಗೆ ಮಕ್ಕಳನ್ನು ಓದಿಸಲು ಆಗುವುದಿಲ್ಲವೆಂದು ನಮ್ಮ ಸಂಬಂಧಿಕರೇ ಮಾತನಾಡಿದ್ದರು. ಅವರಿಗೆಲ್ಲ ನನ್ನ ಕೆಲಸದ ಮೂಲಕ ಉತ್ತರ ಸಿಕ್ಕಿದೆ’ ಎಂದು ಹೆಮ್ಮೆಯಿಂದ ಹೇಳಿದರು.

ಐಎಎಸ್ ಗುರಿ....

2024ರಿಂದ ಮುಂಬೈನ ಆದಾಯ ತೆರಿಗೆ ಇಲಾಖೆ ಕಚೇರಿಯಲ್ಲಿ ದೀಪಿಕಾ ಕರ್ತವ್ಯ ನಿರ್ವಹಿಸುತ್ತಿದ್ದು, ಐಎಎಸ್ ಉತ್ತೀರ್ಣರಾಗುವ ಗುರಿ ಹೊಂದಿದ್ದಾರೆ. ಇದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಡಾ.ರಾಜಕುಮಾರ್ ಅಕಾಡೆಮಿಯಲ್ಲಿ ಉಚಿತವಾಗಿ ತರಬೇತಿ ಪಡೆದಿದ್ದಾರೆ. ಕೆಲಸದ ಜತೆಗೆ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.

ಬಾಲ್ಯದ ದಿನಗಳನ್ನು ನೆನೆದರೆ ಈಗಲೂ ಕಣ್ಣೀರು ಬರುತ್ತದೆ. ತಂದೆ–ತಾಯಿ ಕೂಲಿ ಕೆಲಸ ಮಾಡಿಕೊಂಡು ನಮಗೆ ಜೀವನ ಕೊಟ್ಟರು. ಅವರು ಒಳ್ಳೆಯ ದಾರಿಯಲ್ಲಿ ಸಾಗಿದ್ದಕ್ಕೆ ನನಗೆ ಉತ್ತಮ ಸ್ಥಾನ ಸಿಕ್ಕಿದೆ ಎಂದು ದೀಪಿಕಾ ಪೋಷಕರನ್ನು ನೆನಪು ಮಾಡಿಕೊಂಡರು.

⇒ v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.