ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವ್ಯಾಸವೇ ಉದ್ಯಮವಾದಾಗ..!

ಸ್ಫೂರ್ತಿಯ ಉದ್ಯಮಿ
Last Updated 9 ಸೆಪ್ಟೆಂಬರ್ 2020, 18:51 IST
ಅಕ್ಷರ ಗಾತ್ರ

‘ಔದ್ಯಮಿಕ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುತ್ತಿಲ್ಲ. ಕೆಲವು ಕ್ಷೇತ್ರಗಳಿಂದ ಮಹಿಳೆಯರನ್ನು ಹೊರಗಿಡಲಾಗುತ್ತಿದೆ. ಕಷ್ಟಸಹಿಷ್ಣುತೆ ಇದ್ದರೆ, ನಮಗೆ ಬೆಂಬಲ ನೀಡುವ ವ್ಯಕ್ತಿಗಳ ಒಡನಾಟ ಇದ್ದರೆ, ನಾವು ಮಾಡುವ ಕೆಲಸದಲ್ಲಿ ನಂಬಿಕೆ ಇದ್ದರೆ, ಅವುನಮ್ಮ ಏಳಿಗೆಗೆ ಸಹಾಯ ಮಾಡುತ್ತವೆ’ ಎಂದು ಹೇಳುತ್ತಾರೆ ರಾಧಿಕಾ ಟಿಂಬಡಿಯಾ. ಇವರು ಬೆಂಗಳೂರಿನ ಮಹಿಳಾ ಉದ್ಯಮಿ.

ಪರಿಸರ ವಿಜ್ಞಾನದಲ್ಲಿ ತರಬೇತಿ ಪಡೆದಿರುವ ರಾಧಿಕಾ ಅವರಿಗೆ ಪುಸ್ತಕಗಳನ್ನು ಓದುವ ಹವ್ಯಾಸ ಇದೆ. ಈ ಹವ್ಯಾಸವನ್ನೇ ಬಂಡವಾಳ ಆಗಿಸಿಕೊಂಡ ರಾಧಿಕಾ, ‘ಚಂಪಕಾ’ ಹೆಸರಿನ, ಸ್ವತಂತ್ರವಾದ, ಮಹಿಳೆಯರೇ ನಿರ್ವಹಿಸುವ ಪುಸ್ತಕದ ಅಂಗಡಿ, ಮಕ್ಕಳ ವಾಚನಾಲಯ ಮತ್ತು ಕೆಫೆ ಪ್ರಾರಂಭಿಸಿದರು. ಅವರ ಈ ಉದ್ಯಮವು ಪುಸ್ತಕ ಪ್ರೇಮ, ಆಹಾರ ಸವಿಯುವ ಖುಷಿ, ಮನರಂಜನೆ ಮತ್ತು ಬಲಿಷ್ಠ ಸಮುದಾಯ ಬಾಂಧವ್ಯದ ಸಂಗಮದಂತೆ ಇದೆ.

ಈ ಪ್ರಯೋಗಶೀಲ ಉದ್ಯಮದಲ್ಲಿನ ತಮ್ಮ ಆರಂಭಿಕ ದಿನಗಳನ್ನು ನೆನೆಯುವ ರಾಧಿಕಾ, ‘ಕಳೆದ ಒಂದು ದಶಕದಲ್ಲಿ ನಾನು ವನ್ಯಜೀವಿ ಸಂರಕ್ಷಣೆ ಕ್ಷೇತ್ರದಲ್ಲಿ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆಗಳೊಂದಿಗೆಹೆಚ್ಚಾಗಿಗುರ್ತಿಸಿಕೊಂಡಿದ್ದೆ. ಈ ವೃತ್ತಿ ನನಗೆ ಅಗಾಧ ತೃಪ್ತಿ ನೀಡಿತ್ತು. ಪುಸ್ತಕಗಳನ್ನು ಓದುವುದು ನನಗೆ ಮೊದಲಿನಿಂದಲೂ ಪ್ರಿಯವಾದ ಹವ್ಯಾಸ. ಗೋವಾದ ಬುಕ್ ವರ್ಮ್ ಟ್ರಸ್ಟ್ ನಡೆಸುವ ಲೈಬ್ರರಿ ಎಜುಕೇಟರ್ಸ್ ಎಂಬ ಅತ್ಯುತ್ತಮ ಕೋರ್ಸ್ ಅಭ್ಯಾಸ ಮಾಡಿದೆ. ನಾವೇ ಆಯ್ಕೆ ಮಾಡಿದ, ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ, ಪುಸ್ತಕ ಪ್ರೇಮಿಗಳ ಲವಲವಿಕೆಯ ಸಮುದಾಯವೊಂದನ್ನು ಕಟ್ಟುವ, ಓದುವ ತಾಣವನ್ನು ಬೆಂಗಳೂರಿನಲ್ಲಿ ಹುಟ್ಟುಹಾಕಬೇಕೆಂಬ ಯೋಚನೆ ನನ್ನಲ್ಲಿ ಮೊಳೆಯಿತು. ಅದನ್ನು ಸಾಕಾರಗೊಳಿಸಲು ತೀರ್ಮಾನಿಸಿದೆ. ಹಲವಾರು ಸವಾಲುಗಳನ್ನು ಎದುರಿಸಬೇಕಾದರೂ, ನನಗೆ ಈ ಕೆಲಸದಲ್ಲಿ ಖುಷಿ ಸಿಗುತ್ತಿದ್ದರಿಂದ ಕೆಲಸ ಕಷ್ಟವೆನಿಸಲಿಲ್ಲ. ನನ್ನ ಸಂಸ್ಥೆಯ ಸಂಸ್ಕೃತಿಯನ್ನು ನಾನೇ ರೂಪಿಸಬಹುದು, ಮಹಿಳೆಯರಿಗೆ ಕೆಲಸ ನೀಡಬಹುದು, ನಮ್ಮ ಉದ್ಯೋಗಿಗಳಿಗೆ ಸುರಕ್ಷಿತ ಮತ್ತು ಆತ್ಮೀಯ ವಾತಾವರಣ ಸೃಷ್ಟಿಸಬಹುದು ಮತ್ತು ಗ್ರಾಹಕರಿಗೆ ಉತ್ಕೃಷ್ಟ ಸೇವೆ ಒದಗಿಸಬಹುದು ಎಂಬುದು ನನ್ನಲ್ಲಿ ಹೆಮ್ಮೆ ಮೂಡಿಸಿದವು’ ಎನ್ನುತ್ತಾರೆ.

ರಾಧಿಕಾ ಅವರುಅಲ್ಪಕಾಲದಲ್ಲಿಯೇ ಓದುಗರ ಬಲಿಷ್ಠ ಸಮುದಾಯವನ್ನು ಬೆಳೆಸಿದರು. ಹೀಗಿರುವಾಗ, ಕೋವಿಡ್–19 ತಡೆಯಲು ಜಾರಿಗೆ ತಂದ ಲಾಕ್‌ಡೌನ್‌ನಿಂದಾಗಿ ರಾಧಿಕಾ ತಮ್ಮ ಅಂಗಡಿಗೆ ಬೀಗ ಹಾಕಬೇಕಾಯಿತು. ಆದರೆ, ಸುಲಭವಾಗಿ ಸೋಲನ್ನೊಪ್ಪಿಕೊಳ್ಳುವ ಮನೋಭಾವ ರಾಧಿಕಾ ಅವರದ್ದಲ್ಲ. ತಮ್ಮ ಸಮುದಾಯದ ಬೆಂಬಲ ಪಡೆದು ಅವರು ಈ ಸಂದಿಗ್ಧ ಪರಿಸ್ಥಿತಿಯನ್ನು ಅವಕಾಶವಾಗಿ ಪರಿವರ್ತಿಸಲು ತೀರ್ಮಾನಿಸಿದರು. ‘ಗೇಮ್’ ಮತ್ತು ಫೇಸ್‌ಬುಕ್ ಜೊತೆಯಾಗಿ ಆಯೋಜಿಸಿದ ‘ಫ್ಯೂಚರ್ ಪ್ರೆನ್ಯೂರ್ಸ್ ಗ್ರಾಂಡ್ ಛಾಲೆಂಜ್’ ಗೆದ್ದ ರಾಧಿಕಾ ₹ 1 ಲಕ್ಷ ಬಹುಮಾನ ಪಡೆದರು. ಈ ಹಣವನ್ನು ಅವರು ತಮ್ಮ ಸಿಬ್ಬಂದಿಗೆ ವೇತನ ಪಾವತಿಸಲು ಬಳಸಿದರು. ಗೆಳೆಯರ ಬಳಗ, ಕುಟುಂಬದ ಮಾರ್ಗದರ್ಶನ ಹಾಗೂ ಪ್ರೋತ್ಸಾಹದ ಪರಿಣಾಮವಾಗಿ ರಾಧಿಕಾ ತಮ್ಮ ಉದ್ಯಮದ ಸ್ವರೂಪವನ್ನು ಸಮಕಾಲೀನ ಪರಿಸ್ಥಿತಿಗೆ ತಕ್ಕಂತೆ ಬದಲಾಯಿಸಿ, ಆನ್‌ಲೈನ್ ಮೂಲಕ ಸೇವೆಗಳನ್ನು ಒದಗಿಸಲು ಪ್ರಾರಂಭಿಸಿದರು.

‘ಚಂಪಕಾ’ (ಜಾಲತಾಣ: https://champaca.in/) ಓದುಗರಿಗಾಗಿ ತನ್ನ ವೆಬ್‌ಸೈಟಿನಲ್ಲಿಯೇ ಪುಸ್ತಕಗಳನ್ನು ಒದಗಿಸುವ ಸೇವೆ ಪ್ರಾರಂಭಿಸಿತು. ಗ್ರಾಹಕರು ತಮಗಿಷ್ಟವಾದ ಪುಸ್ತಕವನ್ನು ಈ ಜಾಲತಾಣದಲ್ಲಿ ಓದಿದ ನಂತರ, ಚಂಪಕಾ ಮಾಡಿರುವ ಪುಸ್ತಕಗಳ ಆಯ್ಕೆ ಬಗ್ಗೆ ಕುತೂಹಲ ತೋರತೊಡಗಿದರು. ಗ್ರಾಹಕರು ಆನ್ ಲೈನ್ ಚಂದಾದಾರಿಕೆ ಮೂಲಕಈ ಸೇವೆಗಳನ್ನು ಪಡೆಯಬಹುದಾಗಿದೆ.

v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT