ಗಿಡ ನೆಟ್ಟು ಪೋಷಿಸುವ ಕಾರ್ಯಕ್ಕೆ ಮುಂದಾಗಿ

ಗುರುವಾರ , ಜೂನ್ 20, 2019
31 °C
ವಿಶ್ವ ಪರಿಸರ ದಿನಾಚರಣೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ರಮೆಶ್ ಸಲಹೆ

ಗಿಡ ನೆಟ್ಟು ಪೋಷಿಸುವ ಕಾರ್ಯಕ್ಕೆ ಮುಂದಾಗಿ

Published:
Updated:
Prajavani

ಚಾಮರಾಜನಗರ: ಪ್ರಕೃತಿ ನಮಗೆ ನೀಡಿರುವ ಸಂಪತ್ತನ್ನು ಅವಶ್ಯಕತೆಗೆ ಅನುಗುಣವಾಗಿ ನಿಯೋಜಿಸಿಕೊಳ್ಳುವ ವಿಧಾನವನ್ನು ಎಲ್ಲರೂ ರೂಢಿಸಿಕೊಳ್ಳಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ರಮೆಶ್ ಸಲಹೆ ನೀಡಿದರು.

ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಅರಣ್ಯ ಇಲಾಖೆಗಳ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಪ್ರಕೃತಿ ಸೃಷ್ಟಿಯಾದಾಗಲೇ ಮನುಷ್ಯನಿಗೆ ಅವಶ್ಯಕವಿರುವುದನ್ನೆಲ್ಲ ಕೊಟ್ಟಿದೆ. ಪ್ರಕೃತಿಯಲ್ಲಿ ಶೇ 75ರಷ್ಟು ನೀರು, ಶೇ 25ರಷ್ಟು  ಭೂಮಿ ಇದೆ. ಇರುವ ನೀರಿನಲ್ಲಿ ಶೇ 1.5ಷ್ಟು ಮಾತ್ರ ಕುಡಿಯಲು ಯೋಗ್ಯವಾಗಿದೆ. ಉಳಿದವೆಲ್ಲವೂ ಸಮುದ್ರದ ಪಾಲು’ ಎಂದರು.

‘ಕಟ್ಟಡದ ಮೇಲೊಂದು ಕಟ್ಟಡ ಕಟ್ಟುವ ಮಾನವನ ದುರಾಸೆಗೆ ಮರಗಳು ನಾಶವಾಗುತ್ತಿವೆ. ಮಳೆ ನೀರು ಹೊಳೆ, ಕೆರೆ, ಕಟ್ಟೆಗಳಲ್ಲಿ ಸಮರ್ಪಕವಾಗಿ ಸಂಗ್ರಹಗೊಳ್ಳುತ್ತಿಲ್ಲ. ಪರಿಣಾಮ ಸಮುದ್ರದ ಪಾಲಾಗುತ್ತಿದೆ. ಇಂದಿನಿಂದ ನಾವೆಲ್ಲರೂ ಒಂದೊಂದು ಗಿಡ ನೆಟ್ಟು ಪೋಷಿಸುವ ಕಾರ್ಯಕ್ಕೆ ಮುನ್ನುಡಿ ಬರೆಯಬೇಕು. ಆ ಮೂಲಕ ಪರಿಸರದ ರಕ್ಷಣೆಗೆ ಶ್ರಮಿಸೋಣ’ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜೆ.ವಿಶಾಲಕ್ಷಿ ಮಾತನಾಡಿ, ‘ಜನರು ಪರಿಸರಕ್ಕೆ ಹೆಚ್ಚು ಪ್ರಾತಿನಿತ್ಯ ನೀಡಬೇಕು. ನಾವು ಬದುಕಲು ಉತ್ತಮ ಪರಿಸರ ಬೇಕು. ಶುದ್ಧ ಗಾಳಿ, ನೀರು, ಸ್ವಚ್ಛತೆಯ ವಾತಾವರಣ ಇರಬೇಕು. ಆದರೆ, ಇಂದು ಪರಿಸರ ಕಲುಷಿತವಾಗುತ್ತಿದೆ. ಈ ಹಿಂದೆ ಹೆಚ್ಚು ಅರಣ್ಯ ಪ್ರದೇಶ ಇತ್ತು. ಈಗ ಅದು ನಾಶವಾಗುತ್ತಿದೆ. ಇದಕ್ಕೆಲ್ಲ ಕಾರಣ ಮನುಷ್ಯನ ದುರಾಸೆ’ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಮಾತನಾಡಿ, ‘ಆರಣ್ಯ ನಾಶದಿಂದ ಪ್ರಕೃತಿ ವಿಕೋಪಗಳು ಸಂಭವಿಸುತ್ತವೆ. ಗಿಡಗಳನ್ನು ನೆಟ್ಟು ಪೋಷಿಸಬೇಕು. ಇದಕ್ಕೆ ಜನರ ಸಹಕಾರ ಅತಿ ಮುಖ್ಯ’ ಎಂದು ತಿಳಿಸಿದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎಸ್‌.ವಿ.ಸ್ಮಿತಾ, ಬಾಲನ್ಯಾಯ ಮಂಡಲಿ ಸದಸ್ಯ ಟಿ.ಜೆ.ಸುರೇಶ್, ವಲಯ ಅರಣ್ಯಾಧಿಕಾರಿ ಎಂ.ರವಿ, ಪ್ರೊಬೇಷನರಿ ವಲಯ ಅರಣ್ಯಾಧಿಕಾರಿಗಳಾದ ರಶ್ಮಿ ದೇಸಾಯಿ, ಟಿ.ಆರ್.ಅಮೃತಾ, ಕೌಶಿಕ್‌ ದಳವಾಯಿ ಇದ್ದರು. 

ತಿಂದ ಹಣ್ಣುಗಳ ಬೀಜ ಎಸೆಯದಿರಿ...

‘ಪತ್ರಕರ್ತರ ಸಂಘ ಸೇರಿದಂತೆ ಇನ್ನಿತರ ಸಂಘ, ಸಂಸ್ಥೆಯವರು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಪರಿಸರ ಸಂರಕ್ಷಣೆ ಕುರಿತು ಕಾರ್ಯಕ್ರಮ ನೀಡಬೇಕು. ಇಲ್ಲಿ ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ನೀವು ತಿಂದ ಹಣ್ಣುಗಳ ಬೀಜವನ್ನು ಎಸೆಯದೆ ಅವುಗಳನ್ನು ಒಂದು ಕಡೆ ಸಂಗ್ರಹಿಸಿ ತೋಟ ಅಥವಾ ಅರಣ್ಯ ಪ್ರದೇಶದಲ್ಲಿ ಎಸೆಯುವಂತೆ ಸೂಚಿಸಬೇಕು. ಎಸೆದ ಬೀಜ ಮುಂದೊಂದು ದಿನ ಹಣ್ಣಿನ ಗಿಡವಾಗುತ್ತದೆ. ಇದರಿಂದ ಪ್ರಾಣಿಪಕ್ಷಿಗಳಿಗೆ ಅನುಕೂಲವಾಗುತ್ತದೆ’ ಎಂದು ಎಂ.ರಮೇಶ್ ಪ್ರತಿಪಾದಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !