ದಾವೋಸ್‌ ಆರ್ಥಿಕ ಸಭೆ ಇಂದಿನಿಂದ

7

ದಾವೋಸ್‌ ಆರ್ಥಿಕ ಸಭೆ ಇಂದಿನಿಂದ

Published:
Updated:
Prajavani

ದಾವೋಸ್ : ಬಿಕ್ಕಟ್ಟಿನೆಡೆಗೆ ಸಾಗುತ್ತಿರುವ ಜಾಗತಿಕ ಆರ್ಥಿಕ ಅನಾರೋಗ್ಯಕ್ಕೆ ಮದ್ದು ಹುಡುಕುವ ನಿಟ್ಟಿನಲ್ಲಿ ಇಲ್ಲಿ ಸೋಮವಾರದಿಂದ ಐದು ದಿನಗಳ ಕಾಲ ಜಾಗತಿಕ ನಾಯಕರ ಸಭೆ ನಡೆಯಲಿದೆ.

‘ಜಾಗತೀಕರಣ 4.0: ನಾಲ್ಕನೇ ಕೈಗಾರಿಕಾ ಕ್ರಾಂತಿಯ ಯುಗದಲ್ಲಿ ಜಾಗತಿಕ ರೂಪುರೇಷೆ ರಚನೆ’ ಎಂಬ ಧ್ಯೇಯವಾಕ್ಯದಡಿ ಆಯೋಜನೆಗೊಂಡಿರುವ ಸಮಾವೇಶದಲ್ಲಿ ಭಾರತ ಕೇಂದ್ರಿತ ಚರ್ಚಾಗೋಷ್ಠಿಗಳೂ ನಡೆಯಲಿವೆ. 

ಆಡಳಿತಾತ್ಮಕ ಕಾರಣಗಳಿಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬ್ರಿಟನ್ ಪ್ರಧಾನಿ ತೆರೆಸಾ ಮೇ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಸಭೆಯಿಂದ ದೂರವುಳಿದಿದ್ದಾರೆ. ಜರ್ಮನಿ, ಜಪಾನ್, ಇಟಲಿ, ಇಸ್ರೇಲ್ ಸೇರಿದಂತೆ ಪ್ರಬಲ ಆರ್ಥಿಕತೆ ಹೊಂದಿರುವ ದೇಶಗಳ ನಾಯಕರು ಭಾಗಿಯಾಗುತ್ತಿದ್ದಾರೆ.

ಉನ್ನತ ಕಾರ್ಪೊರೇಟ್ ಕಂಪನಿಗಳ ಸಿಇಒಗಳು, ನಾಗರಿಕ ಸಮಾಜದ ಮುಖಂಡರು, ಮಾಧ್ಯಮ ಮುಖ್ಯಸ್ಥರು, ಅಂತರರಾಷ್ಟ್ರೀಯ ಸಂಘಟನೆಗಳಾದ ಐಎಂಎಫ್, ಡಬ್ಲ್ಯೂಟಿಒ, ಒಇಸಿಡಿ, ವಿಶ್ವಬ್ಯಾಂಕ್‌ನ ಮುಖ್ಯಸ್ಥರೂ ಪಾಲ್ಗೊಳ್ಳಲಿದ್ದಾರೆ.

ವರದಿ ಎಚ್ಚರಿಸಿದ್ದೇನು?

ಅಂತರರಾಷ್ಟ್ರೀಯ ಸಂಬಂಧಗಳು ಹಳಸುತ್ತಿದ್ದು, ಇವುಗಳಿಗೆ ಪರಿಹಾರ ಕಂಡು ಕೊಂಡು ಒಟ್ಟಾಗಿ ಹೆಜ್ಜೆ ಇರಿಸಿದರೆ ಜಾಗತಿಕ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂದು ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯೂಇಎಫ್) ವರದಿ ತಿಳಿಸಿತ್ತು. ದತ್ತಾಂಶ ಕಳವು ಹಾಗೂ ಸೈಬರ್ ದಾಳಿಗಳು ಅತಿದೊಡ್ಡ ಸಮಸ್ಯೆಗಳು ಎಂದಿದ್ದ ವರದಿಯು, ಸಮಾಜಗಳ ಧ್ರುವೀಕರಣ ಹೆಚ್ಚಳ ಹಾಗೂ ಸಂಪತ್ತಿನ ಅಸಮಾನ ಹಂಚಿಕೆಯನ್ನು ಒತ್ತಿಹೇಳಿತ್ತು. ಭೌಗೋಳಿಕ ರಾಜಕೀಯದಿಂದ ಆರ್ಥಿಕತೆ ಅಪಾಯಕ್ಕೆ ಈಡಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿತ್ತು.  

ಭಾರತದಿಂದ ಯಾರು?

ರಾಜಕೀಯ ಮುಖಂಡರು: ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್, ಸಚಿವ ಸುರೇಶ್ ಪ್ರಭು, ಆಂಧ್ರ ಸಚಿವ ಲೋಕೇಶ್ ನಾರಾ, ಪಂಜಾಬ್ ಸಚಿವ ಮನ್‌ಪ್ರೀತ್ ಬಾದಲ್

ಉದ್ಯಮಿಗಳು: ಗೌತಮ್ ಅದಾನಿ, ಮುಕೇಶ್ ಅಂಬಾನಿ ಕುಟುಂಬ, ಸಂಜೀವ್ ಬಜಾಜ್, ಸಜ್ಜನ್ ಜಿಂದಾಲ್, ಆನಂದ್ ಮಹೀಂದ್ರಾ, ಸುನೀಲ್ ಮಿತ್ತಲ್, ನಂದನ್ ನಿಲೇಕಣಿ, ಸಲೀಲ್ ಪರೇಖ್, ಅಜೀಂ ಪ್ರೇಮ್‌ಜಿ ಇತರರು.

ಚಿತ್ರ ನಿರ್ದೇಶಕ ಕರಣ್ ಜೋಹರ್, ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್, ಬ್ರಿಕ್ಸ್‌ ದೇಶಗಳ ಅಭಿವೃದ್ಧಿ ಬ್ಯಾಂಕ್ ಮುಖ್ಯಸ್ಥ ಕೆ.ವಿ. ಕಾಮತ್, ಐಎಂಎಫ್ ಮುಖ್ಯ ಹಣಕಾಸು ತಜ್ಞೆ ಗೀತಾ ಗೋಪಿನಾಥ್. 

ಭಾರತದ ಆರ್ಥಿಕತೆ ಚರ್ಚೆ: ಕುಸಿಯುತ್ತಿರುವ ರೂಪಾಯಿ ಮೌಲ್ಯ, ದೀರ್ಘಕಾಲದ ಸುಸ್ಥಿರತೆ ಕೊರತೆ, ಬ್ಯಾಂಕಿಂಗ್‌ ಕ್ಷೇತ್ರದಲ್ಲಿರುವ ಒತ್ತಡ, ಚಾಲ್ತಿಖಾತೆ ಕೊರತೆ ಮೊದಲಾದ ವಿಷಯಗಳು ಚರ್ಚೆಗೆ ಬರಲಿವೆ. 

***

ಚರ್ಚೆಗೆ ಬರಲಿರುವ ವಿಷಯಗಳು

* ಜಾಗತೀಕರಣ ಹೇಗೆ ಕೆಲಸ ಮಾಡುತ್ತದೆ

* ಶಾಂತಿ ಸ್ಥಾಪನೆಗೆ ಹೊಸ ಮಾದರಿಗಳ ಹುಡುಕಾಟ

* ಅಂತರರಾಷ್ಟ್ರೀಯ ಒಳಗೊಳ್ಳುವಿಕೆ ಮತ್ತು ಸುಸ್ಥಿರತೆ

* ಜಾಗತಿಕ ತಾಪಮಾನ ಏರಿಕೆ ಮತ್ತು ಅಂತರರಾಷ್ಟ್ರೀಯ ಆಡಳಿತ

* ಹೆಚ್ಚುತ್ತಿರುವ ಭೌಗೋಳಿಕ ಉದ್ವಿಗ್ನತೆಗಳು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !