ಶುಕ್ರವಾರ, ಡಿಸೆಂಬರ್ 2, 2022
19 °C
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್ ಹೇಳಿಕೆ

ನನ್ನ ಪದಚ್ಯುತಿ ಕಾರಣಕ್ಕಾಗಿ ಅಮೆರಿಕಾವನ್ನು ದೂಷಿಸುವುದಿಲ್ಲ: ಇಮ್ರಾನ್‌ ಖಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಇಸ್ಲಾಮಾಬಾದ್‌/ಲಂಡನ್‌ (ಪಿಟಿಐ): ಅವಿಶ್ವಾಸ ನಿಲುವಳಿ ಮಂಡನೆಯಲ್ಲಿ ವಿಪಕ್ಷಗಳನ್ನು ಬೆಂಬಲಿಸಿ ಅಮೆರಿಕ ತನ್ನ ಪದಚ್ಯುತಿಗೆ ಕಾರಣವಾಗಿತ್ತು ಎಂಬ ಹೇಳಿಕೆಯಿಂದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್ ಹಿಂದೆ ಸರಿದಿದ್ದಾರೆ.

ಇನ್ನು ಮುಂದೆ ಈ ಪದಚ್ಯುತಿ ಕಾರಣಕ್ಕಾಗಿ ಅಮೆರಿಕಾವನ್ನು ದೂಷಿಸುವುದಿಲ್ಲ. ಅದರೊಂದಿಗೆ ಸಂಬಂಧ ವೃದ್ಧಿಸಿಕೊಳ್ಳಲು ಬಯಸುವುದಾಗಿ ಇಮ್ರಾನ್‌ ಖಾನ್ (70) ಫೈನಾಶಿಯಲ್‌ ಟೈಮ್ಸ್‌ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಪಾಕಿಸ್ತಾನ ಎಲ್ಲರೊಂದಿಗೂ ಉತ್ತಮ ಸ್ನೇಹ ಸಂಬಂಧ ಹೊಂದಲು ಬಯಸುತ್ತದೆ. ಅದರಲ್ಲೂ ವಿಶೇಷವಾಗಿ ಅಮೆರಿಕಾದೊಂದಿಗೆ  ಯಾವಾಗಲೂ ಉತ್ತಮ ಸ್ನೇಹ ಸಂಬಂಧವನ್ನು ಬಯಸುತ್ತದೆ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು