ಶುಕ್ರವಾರ, ಏಪ್ರಿಲ್ 16, 2021
23 °C
ಹಿಂದೂ ಸಮುದಾಯಕ್ಕೆ ಸಲ್ಲಿಸಿದ ಸೇವೆ ಹಾಗೂ ಹಿಂದೂ ಸಂಸ್ಕೃತಿ ಉತ್ತೇಜನ

ಹತ್ತು ಭಾರತೀಯ–ಅಮೆರಿಕನ್ ಯುವಕ/ಯುವತಿಯರಿಗೆ ಪ್ರಶಸ್ತಿ ಪ್ರದಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹ್ಯೂಸ್ಟನ್‌: ಹಿಂದೂ ಸಮುದಾಯಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಹಾಗೂ ಹಿಂದೂ ಸಂಸ್ಕೃತಿಯನ್ನು ಉತ್ತೇಜಿಸುವುದಕ್ಕಾಗಿ ಅಮೆರಿಕದಲ್ಲಿರುವ ಹಿಂದೂ ಗ್ರೇಟರ್ ಹ್ಯೂಸ್ಟನ್‌(ಎಚ್‌ಜಿಎಚ್‌) ಸ್ವಯಂ ಸೇವಾ ಸಂಸ್ಥೆ ಹತ್ತು ಭಾರತೀಯ ಅಮೆರಿಕನ್ ಯುವಕ/ಯುವತಿಯರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.

ಈಚೆಗೆ ನಡೆದ ಸಂಸ್ಥೆಯ 10ನೇ ವಾರ್ಷಿಕ ಸಮಾರಂಭದಲ್ಲಿ ಹ್ಯೂಸ್ಟನ್‌ನಲ್ಲಿರುವ ಭಾರತದ ಕಾನ್ಸುಲ್ ಜನರಲ್ ಅಸೀಮ್ ಮಹಾಜನ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಪ್ರಶಸ್ತಿ ಪುರಸ್ಕೃತರು: ಅನೀಶ್ ನಾಯಕ್ (ಸೇವಾ ಇಂಟರ್‌ನ್ಯಾಷನಲ್), ಅನುಷಾ ಸತ್ಯನಾರಾಯಣ್ (ಹ್ಯೂಸ್ಟನ್‌ನ  ಗಾಂಧಿ ವಸ್ತುಸಂಗ್ರಹಾಲಯ), ನಿತ್ಯ ರಾಮಂಕುಲಂಗರ (ಶ್ರೀ ಮೀನಾಕ್ಷಿ ಟೆಂಪಲ್ ಸೊಸೈಟಿ), ಸಂದೀಪ್ ಪ್ರಭಾಕರ್ (ಜಾಗತಿಕ ಸಂಸ್ಥೆ ದೈವತ್ವ), ಕೃತಿ ಪಟೇಲ್ (ಬಿಎಪಿಎಸ್), ವಿಪಸ್ಚಿತ್ ನಂದಾ , ಅಭಿಮನ್ಯು ಅಗರ್‌ವಾಲ್ (ಹಿಂದೂ ಪರಂಪರೆ ಯುವ ಶಿಬಿರ) ಮತ್ತು ರಜಿತ್ ಶಾ (ವಲ್ಲಭ ವಿದ್ಯಾ ಮಂದಿರ).

ವಿಶೇಷ ಪ್ರಶಸ್ತಿ: ಸನಾತನ ಹಿಂದೂ ಧರ್ಮದ ನಮಿತಾ ಪಲ್ಲೋಡ್ ಮತ್ತು ಗ್ರೇಟರ್ ಹ್ಯೂಸ್ಟನ್‌ನ  ಕೋಮಲ್ ಲುತ್ರಾ ಅವರಿಗೆ ವಿಶೇಷ ಪ್ರಶಸ್ತಿಗಳನ್ನು ನೀಡಲಾಯಿತು.

ಪ್ರಧಾನಿ ಅಭಿನಂದನೆ :

ಪ್ರಶಸ್ತಿ ಪುರಸ್ಕೃತರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ ಎಂದು ಗ್ರೇಟರ್ ಹ್ಯೂಸ್ಟನ್ ಸಂಸ್ಥೆ ತಿಳಿಸಿದೆ. ‘ಈ ಗೌರವ, ಸನ್ಮಾನಗಳು ಭಾರತೀಯ ವಲಸೆಗಾರರಿಗೆ, ವಿಶೇಷವಾಗಿ ಯುವಕರಿಗೆ ತಮ್ಮ ಸಂಸ್ಕೃತಿಯ ಬೇರುಗಳೊಂದಿಗಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು ನೆರವಾಗುತ್ತದೆ‘ ಎಂದ ಪ್ರಧಾನಿಯವರು ಸಂಸ್ಥೆಗೆ ಪತ್ರ ಬರೆದು ತಿಳಿಸಿದ್ದಾರೆ ಎಂದು ಸಂಸ್ಥೆಯ ಮೂಲಗಳು ಹೇಳಿವೆ.

ವಿಶ್ವದ ವಿವಿಧ ಭಾಗಗಳಲ್ಲಿ ನೆಲೆಸಿರುವ ಭಾರತೀಯ ವಲಸಿಗರು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದ ರಾಯಭಾರಿಗಳಾಗಿದ್ದಾರೆ. ಸಾವಿರಾರು ವರ್ಷಗಳ ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಭೌತಿಕ ಮತ್ತು ಭೌಗೋಳಿಕ ಗಡಿಗಳನ್ನು ಮೀರಿ ಗುರುತಿಸಲಾಗಿದೆ‘ ಎಂದು ಪ್ರಧಾನಿ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು