ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

114 ವರ್ಷದ ಮಹಿಳೆ ಅಮೆರಿಕದ ಹಿರಿಯ ವ್ಯಕ್ತಿ !

Last Updated 29 ಏಪ್ರಿಲ್ 2021, 7:11 IST
ಅಕ್ಷರ ಗಾತ್ರ

ಒಮಾಹ್‌ (ಅಮೆರಿಕ): ಒಮಾಹ್‌ನ ನೆಬ್ರಸ್ಕಾದ ಹಿರಿಯ ನಾಗರಿಕರ ಕೇಂದ್ರದಲ್ಲಿರುವ 114 ವರ್ಷದ ಥೆಲ್ಮಾ ಸಟ್ಕ್ಲಿಫ್ ಅವರನ್ನು ಅಮೆರಿಕದ ಹಿರಿಯ ವ್ಯಕ್ತಿ ಎಂದು ಗುರುತಿಸಲಾಗಿದೆ.

ಥೆಲ್ಮಾ ಸಟ್ಕ್ಲಿಫ್ ಅವರು ಅಕ್ಟೋಬರ್ 1, 1906ರಂದು ಜನಿಸಿರುವುದಾಗಿ ಒಮಾಹಾ ವರ್ಲ್ಡ್-ಹೆರಾಲ್ಡ್ ವರದಿ ಮಾಡಿದೆ. ಇವರು ಅಮೆರಿಕದ ಮೊದಲ ಹಿರಿಯ ವ್ಯಕ್ತಿ ಜತೆಗೆ, ಜಗತ್ತಿನ ಏಳನೇ ಹಿರಿಯ ವ್ಯಕ್ತಿಯೂ ಹೌದು.

ಜಿಮಾಂಟಾಲಜಿ ರಿಸರ್ಚ್‌ ಗ್ರೂಪ್‌ ಪ್ರಕಾರ, ‘ ಇಲ್ಲಿವರೆಗೆ 115 ವರ್ಷದ ಹೆಸ್ಟರ್‌ ಫೋರ್ಡ್‌ ಎಂಬುವವರನ್ನು ಅಮೆರಿಕದ ಅತ್ಯಂತ ಹಿರಿಯ ವಯಸ್ಸಿನ ವ್ಯಕ್ತಿ ಎಂದು ಗುರುತಿಸಲಾಗಿತ್ತು. ಅವರು ಏಪ್ರಿಲ್ 17ರಂದು ಉತ್ತರ ಕರೊಲಿನಾದಲ್ಲಿ ಮೃತಪಟ್ಟರು. ಅವರ ನಂತರ, ಒಮಾಹ್‌ ಮೂಲದ ಥೆಲ್ಮಾ ಅವರನ್ನು ಅಮೆರಿಕದ ಹಿರಿಯ ವ್ಯಕ್ತಿಯಾಗಿ ಗುರುತಿಸಲಾಗಿದೆ.

ಥೆಲ್ಮಾ ಅವರು ಒಮಾಹ್‌ನ ಹಿರಿಯ ನಾಗರಿಕರ ಕೇಂದ್ರದಲ್ಲಿ ವಾಸವಿದ್ದಾರೆ. ಕೊರೊನಾ ಸಾಂಕ್ರಾಮಿಕದಿಂದಾಗಿ ಒಂದು ವರ್ಷದಿಂದ ದೇಶವೇ ಲಾಕ್‌ಡೌನ್ ಆಗಿತ್ತು. ಹೀಗಾಗಿ ಅವರಿಗೆ ತಮ್ಮ ಗೆಳೆಯರನ್ನು ಭೇಟಿಯಾಗಲು ಆಗಿಲ್ಲ. ಲಾಕ್‌ಡೌನ್ ತೆರವಾದ ಮೇಲೆ ಈಗ ಸ್ನೇಹಿತರೊಂದಿಗೆ ಹೊರಗಡೆ ಊಟಕ್ಕೆ ಹೋಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಥೆಲ್ಮಾ ಅವರ ದೀರ್ಘಕಾಲದ ಸ್ನೇಹಿತ ಲುಯೆಲ್ಲಾ ‘ಲೌ‘ ಮೇಸನ್ ಪ್ರಕಾರ, ‘ಲಾಕ್‌ಡೌನ್ ಅವಧಿಯಲ್ಲಿ ತಾನು ವಾಸಿಸುತ್ತಿದ್ದ ‘ಹಿರಿಯ ನಾಗರಿಕರ ಕೇಂದ್ರ‘ ಬಂದ್ ಆಗಿದ್ದರೂ, ವಿಚಲಿತರಾಗದ ಥೆಲ್ಮಾ, ಈ ವಯಸ್ಸಿನಲ್ಲಿ, ತಾನು ಹೇಗೆ ಬದುಕಬೇಕು ಎಂದುಕೊಂಡಿದ್ದರೋ ಹಾಗೆಯೇ ಬದುಕುತ್ತಿದ್ದಾರೆ. ಇಳಿ ವಯಸ್ಸಿನಲ್ಲೂ ಚುರುಕಾಗಿದ್ದಾರೆ, ಉತ್ಸಾಹದಿಂದ್ದಾರೆ.

ಥೆಲ್ಮಾ ಅವರಿಗೆ ಇತ್ತೀಚೆಗೆ ಕಣ್ಣು ಮತ್ತು ಕಿವಿ ಸ್ವಲ್ಪ ಮಂದವಾಗುತ್ತಿದೆ. ಆದರೆ, ಮನಸ್ಸು ಇನ್ನೂ ತೀಕ್ಷ್ಣವಾಗಿದೆ ಎಂದು ಮೇಸನ್ ಉಲ್ಲೇಖಿಸಿದ್ದಾರೆ.

ಸಟ್ಕ್ಲಿಫ್‌, ಕೊರೊನಾ ಲಸಿಕೆಯ ಎರಡೂ ಡೋಸ್‌ಗಳನ್ನೂ ಪಡೆದಿದ್ದಾರೆ. ಇವರಿಗೆ ಕೊರೊನಾ ಸೋಂಕಿನ ಪರೀಕ್ಷೆ ಮಾಡಿಸಿದಾಗ, ವರದಿ ನೆಗೆಟಿವ್ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT