ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುನಿಸ್‌’: 2 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್‌ ಸ್ಥಗಿತ

Last Updated 19 ಫೆಬ್ರುವರಿ 2022, 21:16 IST
ಅಕ್ಷರ ಗಾತ್ರ

ಲಂಡನ್‌: ಅಟ್ಲಾಂಟಿಕ್‌ನಲ್ಲಿ ಉದ್ಭವಿಸಿರುವ ‘ಯುನಿಸ್‌’ ಚಂಡಮಾರುತದ ಪ್ರಭಾವದಿಂದಾಗಿ ಬ್ರಿಟನ್‌ನಲ್ಲಿ ಶುಕ್ರವಾರ ವಿದ್ಯುತ್‌ ವ್ಯತ್ಯಯ ಉಂಟಾಗಿದ್ದರಿಂದ 2 ಲಕ್ಷಕ್ಕೂ ಹೆಚ್ಚು ಮನೆಗಳಲ್ಲಿ ವಿದ್ಯುತ್‌ ಸರಬರಾಜು ಕಡಿತವಾಗಿತ್ತು.ಬ್ರಿಟನ್‌, ಐರ್ಲೆಂಡ್‌, ಬೆಲ್ಜಿಯಂ, ಜರ್ಮನಿ, ನೆದರ್‌ಲ್ಯಾಂಡ್‌ ಮತ್ತು ಪೋಲೆಂಡ್‌ನಲ್ಲಿ ಚಂಡಮಾರುತದಿಂದಾಗಿ ಸಂಭವಿಸಿದ ವಿವಿಧ ಅವಘಡಗಳಲ್ಲಿ 14 ಮಂದಿ ಮೃತಪಟ್ಟಿದ್ದಾರೆ ಎಂದು ತುರ್ತು ಸೇವೆ ಇಲಾಖೆ ತಿಳಿಸಿವೆ.

‘ತುರ್ತು ಸಿಬ್ಬಂದಿ ವಿದ್ಯುತ್‌ ಪುನರ್‌ ಸ್ಥಾಪನೆಗೆ ಹರಸಾಹಸ ಪಡುತ್ತಿದ್ದಾರೆ. ಚಂಡಮಾರುತ ಪ್ರತಿ ಗಂಟೆಗೆ196 ಕಿ.ಮೀ ವೇಗದಲ್ಲಿ ಬೀಸುತ್ತಿದೆ. ಚಂಡಮಾರುತದಿಂದಾಗಿ ಬ್ರಿಟನ್‌ನಲ್ಲಿ ಈವರೆಗೆ ಮೂವರು ಮೃತಪಟ್ಟಿದ್ದಾರೆ ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬ್ರಿಟನ್‌ನಲ್ಲಿ ಶುಕ್ರವಾರ ಹಲವೆಡೆರೈಲು ಸಂಚಾರವೂ ಸ್ಥಗಿತಗೊಂಡಿತ್ತು. ಈ ಪರಿಸ್ಥಿತಿಯಲ್ಲಿ ರೈಲಿನಲ್ಲಿ ಪ್ರಯಾಣಿಸದಂತೆ ರೈಲ್ವೆ ಅಧಿಕಾರಿಗಳು ಜನರಲ್ಲಿ ಮನವಿ ಮಾಡಿದ್ದಾರೆ.

ಫ್ರಾನ್ಸ್‌ ಕೂಡ ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, 75,000 ಹೆಚ್ಚು ಮನೆಗಳಿಗೆ ವಿದ್ಯುತ್‌ ಪೂರೈಕೆ ಕಡಿತವಾಗಿದೆ. ಅಲ್ಲದೇ ರೈಲು ಸಂಚಾರದಲ್ಲೂ ಅಡಚಣೆ ಉಂಟಾಗಿದೆ.ನೆದರ್‌ಲ್ಯಾಂಡ್‌ನಲ್ಲೂ ವಿದ್ಯುತ್‌ ವ್ಯತ್ಯಯ ಉಂಟಾಗಿದ್ದು, ರೈಲು ಸಂಚಾರವೂ ಅಸ್ತವ್ಯಸ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT