ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಬಿಯಾ: ದೋಣಿ ಅವಘಡದಲ್ಲಿ 130 ಮಂದಿ ಸಾವು?

Last Updated 23 ಏಪ್ರಿಲ್ 2021, 10:48 IST
ಅಕ್ಷರ ಗಾತ್ರ

ಕೈರೋ: ‘ಲಿಬಿಯಾ ಮೆಡಿಟರೇನಿಯನ್‌ ಕರಾವಳಿಯಲ್ಲಿ ಯೂರೋಪ್ದೋ‌ನತ್ತ ತೆರಳುತ್ತಿದ್ದ ದೋಣಿಯೊಂದು ಮುಳುಗಿದ್ದು, ಇದರಲ್ಲಿ 100 ಕ್ಕೂ ಹೆಚ್ಚು ವಲಸೆಗಾರರು ಇದ್ದರು’ ಎಂದು ಸ್ವತಂತ್ರ ರಕ್ಷಣಾ ಪಡೆಯೊಂದು ಆತಂಕ ವ್ಯಕ್ತಪಡಿಸಿದೆ.

‘ಲಿಬಿಯಾದ ರಾಜಧಾನಿ ಟ್ರಿಪೋಲಿಯದ ಈಶಾನ್ಯ ಭಾಗದಲ್ಲಿರುವ ಮೆಡಿಟರೇನಿಯನ್ ಸಮುದ್ರದಲ್ಲಿ ಗುರುವಾರ ಈ ಅವಘಡ ಸಂಭವಿಸಿದೆ. 130 ಜನರನ್ನು ಕರೆದುಕೊಂಡು ಹೋಗುತ್ತಿದ್ದ ರಬ್ಬರ್‌ ದೋಣಿಯು ನೀರಿನಲ್ಲಿ ಮುಳುಗಿದೆ. ದೋಣಿಯ ಅವಶೇಷ ದೊರೆತಿದೆ. ಅದರ ಸಮೀಪ 10 ಮಂದಿಯ ಶವಗಳು ಸಿಕ್ಕಿವೆ. ಇನ್ನುಳಿದ ಪ್ರಯಾಣಿಕರು ಮೃತಪಟ್ಟಿರುವ ಸಾಧ್ಯತೆಗಳಿವೆ’ ಎಂದು ಎಸ್ಒಎಸ್ ಮೆಡಿಟರೇನಿ ರಕ್ಷಣಾ ಪಡೆ ಶಂಕಿಸಿದೆ.

‘ಈ ಅಪಘಾತವನ್ನು ಹೊರತುಪಡಿಸಿ ಈ ವರ್ಷದಲ್ಲಿ 350ಕ್ಕೂ ಹೆಚ್ಚು ಮಂದಿ ದೋಣಿ ಮುಳುಗಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟಿದ್ದಾರೆ. ಹೀಗೆ ಮೃತಪಟ್ಟವರೆಲ್ಲ ನಿರಾಶ್ರಿತರು.ಯಾವುದೇ ದೇಶ ಅವರ ರಕ್ಷಣೆಯ ಜವಾಬ್ದಾರಿಯನ್ನು ತೆಗೆದುಕೊಂಡಿಲ್ಲ. ದುರಂತದ ಬಗ್ಗೆ ಗೊತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ’ ಎಂದು ಅದು ಹೇಳಿದೆ.

ಲಿಬಿಯಾದ ದೀರ್ಘ ಕಾಲದ ಸರ್ವಾಧಿಕಾರಿ ಮೌಮ್ಮರ್‌ ಗಢಾಫಿ ಅವರು 2011ರಲ್ಲಿ ಹತರಾದ ಬಳಿಕ ಆಫ್ರಿಕಾ ಮತ್ತು ಮಧ್ಯ ಏಷ್ಯಾಗಳಿಂದ ಪಲಾಯನ ಮಾಡುವ ನಿರಾಶ್ರಿತರಿಗೆ ಮೆಡಿಟರೇನಿಯನ್‌ ಸಮುದ್ರ ಪ್ರಮುಖ ಜಲಮಾರ್ಗವಾಗಿದೆ. ಆದರೆ ಇಲ್ಲಿ ಅಸಂಖ್ಯ ಮಂದಿ ದೋಣಿ ದುರಂತ ಅಥವಾ ಇತರ ವಿಧ್ವಂಸಕ ಕೃತ್ಯಗಳಿಂದಾಗಿ ಹೇಳ ಹೆಸರಿಲ್ಲದೆ ಹೋಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT