ಶನಿವಾರ, ಸೆಪ್ಟೆಂಬರ್ 18, 2021
27 °C

ಭದ್ರತಾ ತಾಣಗಳ ಮೇಲೆ ದಾಳಿ, ಪಾಕ್‌ನ ಇಬ್ಬರು ಯೋಧರ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪೆಶಾವರ (ಪಿಟಿಐ): ಇಲ್ಲಿನ ದಕ್ಷಿಣ ಮತ್ತು ಉತ್ತರ ವಾಜಿರಿಸ್ತಾನದ ಜಿಲ್ಲೆಗಳಲ್ಲಿ ಮೂರು ಭದ್ರತಾ ತಾಣಗಳ ಮೇಲೆ ಉಗ್ರರು ಗುಂಡುಹಾರಿಸಿದ್ದು, ಪಾಕ್‌ನ ಇಬ್ಬರು ಯೋಧರು ಮೃತಪ‍ಟ್ಟಿದ್ದಾರೆ. ಇತರೆ ಒಂಬತ್ತು ಮಂದಿ ಗಾಯಗೊಂಡಿದ್ದಾರೆ.

ದಕ್ಷಿಣ ವಾಜಿರಿಸ್ತಾನದ ಶಾವಾಲ್‌ ವಲಯದಲ್ಲಿ ಮೊದಲಿಗೆ ದಾಳಿ ನಡೆದಿದ್ದು, ಒಬ್ಬ ಯೋಧ ಮೃತಪಟ್ಟು ಇತರೆ ಇಬ್ಬರು ಗಾಯಗೊಂಡರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.

ದಕ್ಷಿಣ ವಾಜಿರಿಸ್ತಾನದ ಜಿಲ್ಲೆಯ ಎರಡು ಕಡೆ ದಾಳಿ ನಡೆದಿದ್ದು ಒಬ್ಬ ಯೋಧರು ಮೃತಪಟ್ಟಿದ್ದು, ಇತರೆ ಏಳು ಮಂದಿ ಗಾಯಗೊಂಡರು. ವರದಿ ಪ್ರಕಾರ, ಸುಧಾರಿತ ಸ್ಫೋಟಕ ಸಾಧನವನ್ನು ಬಳಸಲಾಗಿತ್ತು. ಲಾಧಾ ಬಳಿ ಭದ್ರತಾ ಸಿಬ್ಬಂದಿ ಕೂಡಾ ಪ್ರತಿರೋಧ ತೋರಿ ಗುಂಡು ಹಾರಿಸಿದರು ಎಂದು ತಿಳಿಸಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು