ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕೊರಿಯಾ: ವಾಯುಪಡೆ ವಿಮಾನಗಳು ಡಿಕ್ಕಿ, ನಾಲ್ವರು ಸಾವು

Last Updated 1 ಏಪ್ರಿಲ್ 2022, 11:38 IST
ಅಕ್ಷರ ಗಾತ್ರ

ಸಿಯೋಲ್‌: ದಕ್ಷಿಣ ಕೊರಿಯಾದ ವಾಯುಪಡೆಯ ಎರಡು ವಿಮಾನಗಳು ತರಬೇತಿ ವೇಳೆ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ವಿಮಾನದಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ.

ಸಚೆಯಾನ್‌ ವಾಯು ನೆಲೆಯಿಂದ ಎರಡೂ ವಿಮಾನಗಳು ಒಂದರ ನಂತರ ಒಂದರಂತೆ ಟೇಕಾಫ್ ಆದವು. ಇದಾದ ಐದೇ ನಿಮಿಷದಲ್ಲೇ ವಿಮಾನಗಳು ಡಿಕ್ಕಿಯಾಗಿ, ಇಬ್ಬರು ಸಿಬ್ಬಂದಿ ಹಾಗೂ ಇಬ್ಬರು ತರಬೇತಿ ಪಡೆಯುವವರು ಮೃತಪಟ್ಟರು ಎಂದು ವಾಯುಪಡೆ ಹೇಳಿಕೆಯಲ್ಲಿ ತಿಳಿಸಿದೆ.

ಅಪಘಾತದ ಕಾರಣ ಪತ್ತೆಗಾಗಿ ತನಿಖೆ ನಡೆಸಲು ಸಮಿತಿ ರಚಿಸಲಾಗಿದೆ ಎಂದೂ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT