ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಜೈಲಿನಿಂದ 20 ಭಾರತೀಯ ಮೀನುಗಾರರ ಬಿಡುಗಡೆ

Last Updated 13 ನವೆಂಬರ್ 2021, 13:07 IST
ಅಕ್ಷರ ಗಾತ್ರ

ಕರಾಚಿ: ಪಾಕಿಸ್ತಾನದ ಕರಾಚಿ ಜೈಲಿನಿಂದ ಬಿಡುಗಡೆಯಾದ 20 ಭಾರತೀಯ ಮೀನುಗಾರರನ್ನು ಭಾನುವಾರ ವಾಘಾ ಗಡಿಗೆ ಕಳುಹಿಸಲಾಗುತ್ತಿದ್ದು, ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಶಿಕ್ಷೆಯ ಅವಧಿ ಪೂರ್ಣಗೊಳಿಸಿ ಜೈಲಿನಲ್ಲಿರುವ 350 ಭಾರತೀಯ ಮೀನುಗಾರರ ಪೈಕಿ ಬಿಡುಗಡೆಯಾದ 20 ಮಂದಿ ಗುಜರಾತ್‌ ರಾಜ್ಯದವರು. ಉಳಿದವರನ್ನು ಸಹ ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು. ಬಿಡುಗಡೆಯಾದ ಮೀನುಗಾರರನ್ನು ಭಾನುವಾರ ಬೆಳಿಗ್ಗೆ ವಾಘಾ-ಅಟ್ಟಾರಿ ಗಡಿಗೆ ಕಳುಹಿಸಲಾಗುವುದು ಎಂದು ಹಿರಿಯ ಜೈಲು ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT