ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನದಲ್ಲಿನ 20 ವರ್ಷಗಳ ಮಿಲಿಟರಿ ಉಪಸ್ಥಿತಿ ಅಂತ್ಯ: ಬೈಡನ್

Last Updated 31 ಆಗಸ್ಟ್ 2021, 6:58 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಯುದ್ಧಪೀಡಿತ ಅಫ್ಗಾನಿಸ್ತಾನದಲ್ಲಿ ಅಮೆರಿಕ ಪಡೆಗಳ20 ವರ್ಷಗಳ ಉಪಸ್ಥಿತಿ ಅಂತ್ಯಗೊಂಡಿತು’ ಎಂದು ಅಧ್ಯಕ್ಷ ಜೋ ಬೈಡನ್‌ ಮಂಗಳವಾರ ಹೇಳಿದರು.

ಅಫ್ಗಾನಿಸ್ತಾನದಿಂದ ಎಲ್ಲ ಯೋಧರನ್ನು ಹಿಂದಕ್ಕೆ ಕರೆಸಿಕೊಂಡ ನಂತರ ಅವರು ಮಾತನಾಡಿದರು.

‘ಆ. 31ರೊಳಗೆ ಭದ್ರತಾಪ‍ಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ತೀರ್ಮಾನಿಸಲಾಗಿತ್ತು. ಈ ತೆರವು ಕಾರ್ಯ ಅತ್ಯಂತ ಅಪಾಯಕಾರಿಯೂ ಆಗಿತ್ತು. ಆದರೆ, ಈ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಿರುವುದಕ್ಕೆ ಭದ್ರತಾ ಪಡೆಗಳನ್ನು ಅಭಿನಂದಿಸುವೆ’ ಎಂದರು.

‘ಅಫ್ಗಾನಿಸ್ತಾನದಿಂದ ಯೋಧರನ್ನು ವಾಪಸು ಕರೆಸಿಕೊಳ್ಳಬೇಕು ಎಂಬುದು ಎಲ್ಲ ಸೇನಾಧಿಕಾರಿಗಳ ಸರ್ವಾನುಮತದ ಶಿಫಾರಸು ಆಗಿತ್ತು. ನಮ್ಮ ಯೋಧರ ಪ್ರಾಣ ರಕ್ಷಣೆಗೆ ಇದೇ ಅತ್ಯಂತ ಸೂಕ್ತ ಮಾರ್ಗವಾಗಿತ್ತು’ ಎಂದ ಅವರು, ‘ಈ ಕುರಿತು ನಾನು ದೇಶವನ್ನು ಉದ್ದೇಶಿಸಿ ಮಾತನಾಡುವೆ’ ಎಂದೂ ಹೇಳಿದರು.

‘ಅಫ್ಗಾನಿಸ್ತಾನದಲ್ಲಿ ಅಮೆರಿಕದ ಪ್ರಜೆಗಳು ಉಳಿದುಕೊಂಡಿದ್ದರೆ ಅವರನ್ನು ಹಾಗೂ ಆ ದೇಶದಿಂದ ಹೋಗಲು ಇಚ್ಛಿಸುವ ವಿದೇಶಿ ಪ್ರಜೆಗಳ ಸುರಕ್ಷಿತ ತೆರವು ಕಾರ್ಯಕ್ಕೆ ನೆರವಾಗುವಂತೆ ವಿದೇಶಾಂಗ ಕಾರ್ಯದರ್ಶಿಗೆ ಸೂಚಿಸಿದ್ದೇನೆ’ ಎಂದು ಬೈಡನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT