ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಮೂಲದವರ ಕೊಡುಗೆ ₹28 ಲಕ್ಷ ಕೋಟಿ: ಇಂಡಿಯಾಸ್ಪೋರಾ

Last Updated 16 ಫೆಬ್ರುವರಿ 2021, 10:15 IST
ಅಕ್ಷರ ಗಾತ್ರ

ವಾಷಿಂಗ್ಟನ್‌:‘ಭಾರತೀಯ ಮೂಲದವರು ಜಾಗತಿಕವಾಗಿ 28 ಲಕ್ಷ ಕೋಟಿಯಷ್ಟು ಜಿಡಿಪಿಗೆ ಕೊಡುಗೆ ನೀಡಿದ್ದಾರೆ. ಜಗತ್ತಿನಲ್ಲಿ ಭಾರತೀಯ ಮೂಲದವರ ಪ್ರಭಾವ ಇದರಲ್ಲೇ ಗೊತ್ತಾಗುತ್ತದೆ’ ಎಂದು ಅಮೆರಿಕದ ಇಂಡಿಯಾಸ್ಪೋರಾ ಸಂಸ್ಥೆ ಹೇಳಿದೆ.

ವಿದೇಶಗಳಲ್ಲಿ 55 ಕೋಟಿಯಷ್ಟು ಭಾರತೀಯ ಮೂಲದವರಿದ್ದು, ಅವರ ಪೈಕಿ 200 ಮಂದಿಯ ಅತ್ಯಂತ ಪ್ರಭಾವಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವ ಸಂಸ್ಥೆ ಈ ವಿಷಯ ತಿಳಿಸಿದೆ. ಈ ಪ್ರಭಾವಿಗಳ ಪೈಕಿ ಶೇ60ರಷ್ಟು ಮಂದಿ ಕ್ಯಾಬಿನೆಟ್‌ ಸ್ಥಾನ ಪಡೆದಿರುವುದನ್ನು ಸಂಸ್ಥೆ ಬೊಟ್ಟುಮಾಡಿ ತೋರಿಸಿದೆ.

‘ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಈ ಪಟ್ಟಿಗೆ ಸೇರ್ಪ‍ಡೆಯಾದ ಇತ್ತೀಚಿನ ಪ್ರಭಾವಿ ಮಹಿಳೆ. ಇದೇ ರೀತಿ ಆಸ್ಟ್ರೇಲಿಯಾ, ಕೆನಡಾ, ಸಿಂಗಪುರ, ದಕ್ಷಿಣ ಆಫ್ರಿಕಾ, ಸಂಯುಕ್ತ ಅರಬ್‍ ಸಂಸ್ಥಾನ (ಯುಎಇ), ಬ್ರಿಟನ್‌ ಮತ್ತು ಅಮೆರಿಕದಲ್ಲಿ ಭಾರತೀಯ ಸಂಜಾತರು ರಾಜತಾಂತ್ರಿಕ, ಸಂಸದರು, ಸೆಂಟ್ರಲ್‌ ಬ್ಯಾಂಕ್‌ನ ಮುಖ್ಯಸ್ಥ ಮತ್ತು ನಾಗರಿಕ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಸಂಸ್ಥೆ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT