ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರೆಜಿಲ್| ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ: 26 ಮಂದಿ ಸಾವು

Last Updated 20 ಫೆಬ್ರವರಿ 2023, 3:03 IST
ಅಕ್ಷರ ಗಾತ್ರ

ಸಾವೊ ಪಾಲೊ: ಬ್ರೆಜಿಲ್‌ನ ಉತ್ತರ ಸಾವೊ ಪಾಲೊ ರಾಜ್ಯದ ಹಲವಾರು ನಗರಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದ್ದು, ಕನಿಷ್ಠ 26 ಜನರು ಮೃತಪಟ್ಟಿದ್ದಾರೆ ಎಂದು ಬ್ರೆಜಿಲ್ ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರ ಸಾವೊ ಸೆಬಾಸ್ಟಿಯಾವೊ ಮತ್ತು ಬರ್ಟಿಯೊಗಾ ನಗರಗಳಲ್ಲಿ ಹಬ್ಬವನ್ನು ರದ್ದುಗೊಳಿಸಲಾಗಿದೆ. ಪ್ರವಾಹದಲ್ಲಿ ಸಿಲುಕಿದವರ, ಗಾಯಗೊಂಡವರ ಮತ್ತು ಮೃತಪಟ್ಟವರಿಗಾಗಿ ರಕ್ಷಣಾ ತಂಡಗಳು ಹುಡುಕಾಟ ನಡೆಸುತ್ತಿವೆ ಎಂದು ಹೇಳಿದ್ದಾರೆ.

‘ ಪ್ರವಾಹದ ಪರಿಸ್ಥಿತಿಯಿಂದಾಗಿ ನಮ್ಮ ರಕ್ಷಣಾ ತಂಡಗಳು ಹಲವು ಸ್ಥಳಗಳಿಗೆ ತಲುಪಲು ಆಗುತ್ತಿಲ್ಲ. ಅಸ್ತವ್ಯಸ್ತವಾಗಿರುವ ಸ್ಥಿತಿ ಕಂಡುಬರುತ್ತಿದೆ’ ಎಂದು ಫೆಲಿಪೆ ಅಗಸ್ಟೊ ತಿಳಿಸಿದ್ದಾರೆ.

ಸಾವೊ ಸೆಬಾಸ್ಟಿಯಾವೊ ಮೇಯರ್, ಫೆಲಿಪೆ ಅಗಸ್ಟೊ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪ್ರವಾಹದ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ಪ್ರವಾಹಕ್ಕೆ ಸಿಲುಕಿದ ಜನ ಬೀದಿಯಲ್ಲಿ ನಿಂತಿರುವುದು, ಮಕ್ಕಳ ರಕ್ಷಣೆಯಲ್ಲಿ ತೊಡಗಿರುವುದು ವಿಡಿಯೊಗಳಲ್ಲಿದೆ.

ಒಂದೇ ದಿನದಲ್ಲಿ 600 ಮಿಲಿಮೀಟರ್‌ಗೂ ಹೆಚ್ಚಿನ ಮಳೆಯಾಗಿದೆ. ಕಡಿಮೆ ಅವಧಿಯಲ್ಲಿ ಅತ್ಯಧಿಕ ಪ್ರಮಾಣದ ಮಳೆಯಾಗಿದೆ. ಬರ್ಟಿಯೋಗ ಎಂಬಲ್ಲಿ 687 ಮಿಲಿಮೀಟರ್‌ನಷ್ಟು ಮಳೆ ಪ್ರಮಾಣ ದಾಖಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

‘ಸೇನೆಯಿಂದ ಬೆಂಬಲವನ್ನು ಕೋರಲಾಗಿದೆ. ಎರಡು ವಿಮಾನಗಳು ಮತ್ತು ರಕ್ಷಣಾ ತಂಡಗಳನ್ನು ಪ್ರವಾಹ ಪೀಡಿತ ಪ್ರದೇಶಕ್ಕೆ ಕಳುಹಿಸಲಾಗುವುದು. ಉಬಾಟುಬಾ, ಸಾವೊ ಸೆಬಾಸ್ಟಿಯಾವೊ, ಇಲ್ಹಬೆಲಾ, ಕ್ಯಾರಗ್ವಾಟಟುಬಾ ಮತ್ತು ಬರ್ಟಿಯೋಗಾ ನಗರಗಳನ್ನು ಪ್ರವಾಹ ಪೀಡಿತ ಪ್ರದೇಶಗಳೆಂದು’ ಗವರ್ನರ್ ಟಾರ್ಸಿಸಿಯೊ ಡಿ ಫ್ರೀಟಾಸ್ ಅವರು ಘೋಷಿಸಿದರು.

ಇಲ್ಲಿನ ಮನೆಗಳು ಸಂಪೂರ್ಣ ಜಲಾವೃತವಾಗಿದ್ದು ಛಾವಣಿ ಮಾತ್ರ ಗೋಚರಿಸುತ್ತಿದೆ. ನಿವಾಸಿಗಳು ದೋಣಿಗಳನ್ನು ಬಳಸಿ ಬೇರೆ ಸ್ಥಳಗಳಿಗೆ ಜನರನ್ನು ಸ್ಥಳಾಂತರಿಸುತ್ತಿದ್ದಾರೆ.

ಪ್ರವಾಹ ಪರಿಸ್ಥಿತಿ ಮತ್ತು ಭೂಕುಸಿತದಿಂದಾಗಿ ಉಂಟಾಗಿರುವ ಈ ಅವಘಡದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT