ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೆಬನಾನ್: ತೀವ್ರ ಚಳಿ ಹಿನ್ನೆಲೆ ಕಲ್ಲಿದ್ದಲು ಉರಿಸಿದ್ದ ಸಿರಿಯಾದ ನಾಲ್ವರು ಸಾವು

Last Updated 2 ಜನವರಿ 2022, 13:39 IST
ಅಕ್ಷರ ಗಾತ್ರ

ಬೈರುತ್: ತೀವ್ರ ಚಳಿ ಹಿನ್ನೆಲೆಯಲ್ಲಿ ಮಲಗುವ ಕೋಣೆಯಲ್ಲಿ ಕಲ್ಲಿದ್ದಲು ಉರಿಸಿದ್ದರಿಂದ ಹೊರಸೂಸಿದ ವಿಷಾನಿಲ ಸೇವಿಸಿ ಸಿರಿಯಾ ಮೂಲದ ಮಹಿಳೆ ಹಾಗೂ ಆಕೆಯ ಮೂವರು ಮಕ್ಕಳು ನಿದ್ರೆಯಲ್ಲಿಯೇ ಮೃತಪಟ್ಟಿದ್ದಾರೆ.

ಲೆಬನಾನ್‌ನ ದಕ್ಷಿಣದಲ್ಲಿರುವ ಖರಯಾಬ್‌ ಗ್ರಾಮದಲ್ಲಿನ ನಿರಾಶ್ರಿತರ ಶಿಬಿರದಲ್ಲಿ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿ ಯೂಸಫ್‌ ಅಲ್‌–ದೊರ್ ಹೇಳಿದ್ದಾರೆ.

31 ವರ್ಷದ ತಾಯಿ, 8, 7 ಹಾಗೂ 4 ವರ್ಷದ ಮಕ್ಕಳು, ಆಸ್ಪತ್ರೆಗೆ ಕರೆತರುವ ಮೊದಲೇ ಮೃತಪಟ್ಟಿದ್ದರು ಎಂದು ಫಕೀಹ್ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ಲೆಬನಾನ್‌ನ ಜನಸಂಖ್ಯೆ 60 ಲಕ್ಷ. ಈ ಪೈಕಿ, ಯುದ್ಧಪೀಡಿತ ಸಿರಿಯಾದಿಂದ ವಲಸೆ ಬಂದವರ ಸಂಖ್ಯೆಯೇ 15 ಲಕ್ಷ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT