ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ವಿಜ್ಞಾನ ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ ಐವರು ಭಾರತೀಯ ವಿದ್ಯಾರ್ಥಿಗಳು

Last Updated 25 ಜನವರಿ 2023, 14:16 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಪ್ರತಿಷ್ಠಿತ ರೆಜೆನರ್‌ ಸೈನ್ಸ್‌ ಟ್ಯಾಲೆಂಟ್‌ ಸರ್ಚ್‌ ಹಾಗೂ ಗಣಿತ ಸ್ಪರ್ಧೆಯಲ್ಲಿ ಅಮೆರಿಕದ 40 ಮಂದಿ ವಿದ್ಯಾರ್ಥಿಗಳು ಅಂತಿಮಘಟಕ್ಕೆ ತಲುಪಿದ್ದು, ಇವರಲ್ಲಿ ಐವರು ಭಾರತೀಯ ಮೂಲದವರಾಗಿದ್ದಾರೆ.

ಕಳೆದ 82 ವರ್ಷಗಳಿಂದ ಈ ಸ್ಪರ್ಧೆ ನಡೆಯುತ್ತಿದ್ದು, ಯುವ ವಿಜ್ಞಾನಿಗಳನ್ನು ಜಗತ್ತಿಗೆ ಪರಿಚಯಿಸುವ ಕೆಲಸ ಮಾಡುತ್ತಿದೆ. ಜೊತೆಗೆ 18 ಲಕ್ಷ ಡಾಲರ್‌ (ಅಂದಾಜು ₹14.76 ಕೋಟಿ) ಪ್ರಶಸ್ತಿ ಮೊತ್ತವನ್ನು ನಿಗದಿ ಮಾಡಲಾಗಿದೆ.

ಟೆಕ್ಸಾಸ್‌ನಿಂದ ಸಿಧು ಪಾಚಿಪಲಾ, ಫ್ಲಾರಿಡಾದಿಂದ ಲಾವಣ್ಯ ನಟರಾಜನ್‌ ಹಾಗೂ ಇಶಿಕಾ, ಮಿಷಿಗನ್‌ನಿಂದ ನೀಲ್‌ ಮೌದ್ಗಲ್‌ ಹಾಗೂ ಕೆನಾಡಿಕೆಟ್‌ನಿಂದ ಅಂಬಿಕಾ ಗ್ರೋವರ್‌ ಅಂತಿಮ ಸುತ್ತಿಗೆ ಆಯ್ಕೆಯಾದ ಭಾರತ ಮೂಲದ ವಿದ್ಯಾರ್ಥಿಗಳಾಗಿದ್ದಾರೆ.

300 ಮಂದಿ ವಿದ್ಯಾರ್ಥಿಗಳ ಪೈಕಿ, 40 ವಿದ್ಯಾರ್ಥಿಗಳನ್ನು ವಿಜ್ಞಾನಿಗಳ ತಂಡವು ಅಂತಿಮ ಸುತ್ತಿಗೆ ಆಯ್ಕೆ ಮಾಡಿದೆ. ಈ ಸ್ಪರ್ಧೆಗಾಗಿ ಒಟ್ಟು 1,900 ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಯೋಜನೆವೊಂದರ ಜೊತೆಯಲ್ಲಿ ಅರ್ಜಿ ಸಲ್ಲಿಸಿದ್ದರು.

‘ಅಂತಿಮ ಸುತ್ತಿನಲ್ಲಿರುವ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗುವುದು. ಮಾರ್ಚ್‌ 14ರಂದು ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಪರ್ಧೆಯ ಟಾಪ್‌ 10 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು’ ಎಂದು ಸೊಸೈಟಿ ಫಾರ್‌ ಸೈನ್ಸ್‌ ಆ್ಯಂಡ್‌ ಎಕ್ಸಿಕ್ಯುಟಿವ್‌ ಪಬ್ಲಿಷರ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT