ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರೆಜಿಲ್‌: ಕ್ರಿಸ್‌ಮಸ್‌ ಆಚರಣೆ ವೇಳೆ ಗ್ಯಾಂಗ್‌ವಾರ್– ಐವರ ಸಾವು

Last Updated 26 ಡಿಸೆಂಬರ್ 2021, 12:27 IST
ಅಕ್ಷರ ಗಾತ್ರ

ಬ್ರೆಸಿಲಿಯಾ, ಬ್ರೆಜಿಲ್‌ (ಎಪಿ): ಬ್ರೆಜಿಲ್‌ನ ಈಶಾನ್ಯ ಭಾಗದ ಫೋರ್ಟಲೆಜಾದಲ್ಲಿನ ಫುಟ್‌ಬಾಲ್ ಮೈದಾನದಲ್ಲಿ ಕ್ರಿಸ್‌ಮಸ್‌ ಆಚರಣೆ ವೇಳೆ ನಡೆದ ಗುಂಡು ದಾಳಿಯಲ್ಲಿ ಐವರು ಮೃತಪಟ್ಟಿದ್ದಾರೆ.

ಈ ಘಟನೆಯಲ್ಲಿಆರು ಮಂದಿ ಗಾಯಗೊಂಡಿದ್ದಾರೆ ಎಂದು ಸಿಯಾರಾ ರಾಜ್ಯದ ಸಾರ್ವಜನಿಕ ಭದ್ರತಾ ಸಚಿವಾಲಯ ಹೇಳಿದೆ.

ಘಟನೆ ಸಂಬಂಧ ಮೂರು ಮಂದಿಯನ್ನು ಬಂಧಿಸಲಾಗಿದೆ ಎಂದು ಸುದ್ದಿ ಸಂಸ್ಥೆಯ ಪತ್ರಿಕಾ ಕಚೇರಿ ಹೇಳಿದೆ. ಅಪರಾಧಿಗಳ ನಡುವಿನ ವೈಷಮ್ಯದಿಂದ (ಗ್ಯಾಂಗ್‌ವಾರ್) ಈ ಗುಂಡಿನ ಕಾಳಗ ನಡೆದಿರಬಹುದು ಎಂದು ಸ್ಥಳೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT