ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ಭೀಕರ ಮಳೆ: 6 ಮಂದಿ ಸಾವು, 2 ಲಕ್ಷ ಮಂದಿ ಸ್ಥಳಾಂತರ

Last Updated 15 ಜೂನ್ 2022, 12:42 IST
ಅಕ್ಷರ ಗಾತ್ರ

ಬೀಜಿಂಗ್‌: ಚೀನಾದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಈ ವಾರ 6 ಮಂದಿ ಮೃತಪಟ್ಟಿದ್ದು, ಅಂದಾಜು ಎರಡು ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಬಾರೀ ಮಳೆಯ ಪರಿಣಾಮ ಸೋಮವಾರ ಜಿಯಾಂಗ್‌ಷಿ ಪ್ರಾಂತ್ಯದಲ್ಲಿ ಭೂಕುಸಿತದಲ್ಲಿ ಸಿಲುಕಿ ಇಬ್ಬರು ಮತ್ತುಮಂಗಳವಾರ ಮನೆ ಕುಸಿದು ಬಿದ್ದು ಫುಜಿಯಾನ್ ಪ್ರಾಂತ್ಯದಲ್ಲಿ ಮೂವರು ಮೃತಪಟ್ಟಿದ್ದಾರೆ. ಉತ್ತರ ಚೀನಾದಲ್ಲಿ ಒಬ್ಬರು ಮೃತಪಟ್ಟಿದ್ದಾರೆ.

ನಿರಂತರ ಮಳೆಯಾಗುತ್ತಿರುವ ಕಾರಣ ಚೀನಾದಲ್ಲಿ ರಸ್ತೆಗಳು ಕೆಸರು ನೀರಿನಿಂದ ಆವೃತವಾಗಿವೆ.ಕಳೆದ ವಾರ ಮಳೆಯಿಂದಾಗಿ ಚೀನಾದ ಕೇಂದ್ರ ಭಾಗದಲ್ಲಿ 17 ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT