ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1560 ಸ್ಥಳಗಳ ಹೆಸರು ಉಲ್ಲೇಖ: 6 ವರ್ಷದ ಬಾಲೆಯ ದಾಖಲೆ

Last Updated 17 ಅಕ್ಟೋಬರ್ 2021, 8:27 IST
ಅಕ್ಷರ ಗಾತ್ರ

ಸಿಂಗಪುರ:1,560 ಸ್ಥಳಗಳನ್ನು ಉಲ್ಲೇಖಿಸುವ ಮೂಲಕ ಅತಿ ಹೆಚ್ಚು ಸ್ಥಳಗಳ ಹೆಸರು ನೆನಪಿಡುವ ಕುರಿತಾದ ಸಿಂಗಪುರದ ರಾಷ್ಟ್ರೀಯ ದಾಖಲೆಯನ್ನು ಮುರಿದಿರುವ ಭಾರತೀಯ ಮೂಲದ 6 ವರ್ಷದ ಇಶಾನಿ ಷಣ್ಮುಖಂ ಹೊಸ ದಾಖಲೆ ನಿರ್ಮಿಸಿದ್ದಾರೆ.

ಅಕ್ಟೋಬರ್‌ 13 ರಂದು ತನ್ನ ಮನೆಯಲ್ಲಿ ಬಾಲಕಿ ಇಶಾನಿ 10 ನಿಮಿಷಗಳಲ್ಲಿ ಶಾಂತರೀತಿಯಲ್ಲಿಯೇ ಸ್ಥಳಗಳ ಹೆಸರು ಹೇಳಿದಳು. ಸಿಂಗಪುರ ಬುಕ್‌ ಆಫ್‌ ರೆಕಾರ್ಡ್ಸ್‌ ಸಿಬ್ಬಂದಿ ಸ್ಥಳಗಳ ಹೆಸರು ಹಾಗೂ ಸಂಖ್ಯೆಯನ್ನು ಪರಿಶೀಲಿಸಿದರು.

ಪರಿಶೀಲನೆ ಹಂತದಲ್ಲಿ, ನಾವು ದಿಗಿಲುಗೊಂಡಿದ್ದೆವು. ಹೃದಯ ಜೋರಾಗಿ ಬಡಿದುಕೊಳ್ಳುತ್ತಿತ್ತು ಎಂದು ಬಾಲಕಿಯ ತಾಯಿ ವೆನ್ನಿಲಾ ಮುನುಸಾಮಿ (36) ಅವರು ಶನಿವಾರ ಇಲ್ಲಿನ ಸ್ಟ್ರೈಟ್ಸ್‌ ಟೈಮ್ಸ್‌ಗೆ ಪ್ರತಿಕ್ರಿಯಿಸಿದರು.

‘ಸ್ಥಳಗಳ ಹೆಸರು ಹೇಳುವ ಮೊದಲು ಇಶಾನಿ ಶಾಂತವಾಗಿ ಇದ್ದಳು. ಆತಂಕವಾಗಿದೆಯೇ ಎಂದು ಬುಕ್‌ ಆಫ್‌ ರೆಕಾರ್ಡ್ಸ್‌ನ ಸಿಬ್ಬಂದಿ ಪ್ರಶ್ನಿಸಿದಾಗ, ‘ನಾನು ಉತ್ಸುಕವಾಗಿದ್ದೇನೆ. ಈಗ ಆರಂಭಿಸಬಹುದು ಎಂದು ಹೇಳಿದಳು’ ಎಂದು ವೆನ್ನಿಲಾ ಟೈಮ್ಸ್‌ಗೆ ಹೇಳಿದರು.

ಇಶಾನಿ ತಂದೆ ಷಣ್ಮುಖಂ ವಿ.ಎಸ್‌. (42) ತಮ್ಮ ಪತ್ನಿ ವೆನ್ನಿಲಾ ಅವರ ಜೊತೆ ಸೇರಿ ಕಳೆದ ಏಪ್ರಿಲ್‌ನಿಂದ ಪ್ರತಿದಿನ ಹೊಸ ಸ್ಥಳಗಳನ್ನು ಹೇಳಿಕೊಡುವ ತರಬೇತಿ ಕೊಡಲು ಆರಂಭಿಸಿದರು.

‘ಮಗಳ ಸಾಧನೆಯ ಬಗ್ಗೆ ನಾವು ಹೆಮ್ಮೆಪಡುತ್ತೇವೆ. ಅವಳು ಮೊದಲ ಯತ್ನದಲ್ಲೇ ಇದನ್ನು ಸಾಧಿಸುತ್ತಾಳೆ ಎಂದು ನಿರೀಕ್ಷಿಸಿರಲಿಲ್ಲ. ಅವಳ ದಾಖಲೆಯು ನಮಗೆ ಸಂತಸ ತಂದಿದೆ’ ಎಂದು ಷಣ್ಮುಖಂ ಹೇಳಿದರು.

ಇದುವರೆಗೂ ಈ ದಾಖಲೆ ಸ್ಮರಣಾ ತರಬೇತುದಾರರಾದ ಸ್ಯಾನ್ಸಿ ಸೂರಜ್ ಹೆಸರಿನಲ್ಲಿತ್ತು. ಅವರು 2018ರಲ್ಲಿ ಈ ದಾಖಲೆ ಮಾಡಿದ್ದು, 1505 ಸ್ಥಳದ ಹೆಸರು ಸ್ಮರಿಸಿ, ಉಲ್ಲೇಖಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT