ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌1ಬಿ ವೀಸಾ: ಉದ್ಯೋಗಿಗಳ ಸಂಗಾತಿಗೂ ನೌಕರಿಗೆ ಅವಕಾಶ ನೀಡಲು ಒತ್ತಾಯ

ಚುನಾಯಿತ ಅಧ್ಯಕ್ಷ ಬೈಡನ್ ಅವರಿಗೆ 60 ಜನಪ್ರತಿನಿಧಿಗಳ ಒತ್ತಾಯ
Last Updated 18 ಡಿಸೆಂಬರ್ 2020, 8:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಎಚ್‌1 ಬಿ ವೀಸಾದಡಿ ನೆಲೆಸಿರುವ ಉದ್ಯೋಗಿಗಳ ಸಂಗಾತಿಯರಿಗೆ ಮತ್ತು ಕುಟುಂಬದವರಿಗೂ ಉದ್ಯೋಗ ದೃಢೀಕರಣ ದಾಖಲಾತಿಗಳನ್ನು ವಿಸ್ತರಿಸುವಂತೆ ಅಮೆರಿಕದ 60 ಜನಪ್ರತಿನಿಧಿಗಳ ನಿಯೋಗವೊಂದು, ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾಗಿರುವ ಜೋ ಬೈಡನ್ ಅವರನ್ನು ಒತ್ತಾಯಿಸಿದೆ.

ಎಚ್‌-1ಬಿ ವೀಸಾ ಹೊಂದಿರುವವರ ಸಂಗಾತಿಗಳಿಗೆಅಮೆರಿಕದಲ್ಲಿ ನೌಕರಿ ಮಾಡಲು ಅನುಮತಿ ನೀಡುವ ಎಚ್4 ವೀಸಾವನ್ನು ರದ್ದುಗೊಳಿಸುವ ಟ್ರಂಪ್ ಆಡಳಿತದ ನಿರ್ಧಾರವನ್ನು ಕೈಬಿಡುವಂತೆ ಈ ಜನಪ್ರತಿನಿಧಿಗಳ ತಂಡ ಮನವಿ ಮಾಡಿದೆ.

ಎಚ್ -1 ಬಿ ವೀಸಾ ಹೊಂದಿರುವ ಉದ್ಯೋಗಿಗಳ ಕುಟುಂಬ ಸದಸ್ಯರಿಗೆ (ಪತ್ನಿ/ಪತಿ ಮತ್ತು 21 ವರ್ಷದೊಳಗಿನ ಮಕ್ಕಳಿಗೆ) ಅಮೆರಿಕದ ಪೌರತ್ವ ಮತ್ತು ವಲಸೆ ಸೇವಾ ಇಲಾಖೆ (ಯುಎಸ್‌ಸಿಐಎಸ್) ಎಚ್ -4 ವೀಸಾವನ್ನು ನೀಡುತ್ತದೆ. ಈಗ ಈ ವೀಸಾ ಪಡೆದಿರುವವರಲ್ಲಿ ಹೆಚ್ಚಿನವರು ಭಾರತೀಯ ಐಟಿ ವೃತ್ತಿಪರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT