ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಲಿಪ್ಪೀನ್ಸ್‌ನಲ್ಲಿ ಮುಸ್ಲಿಂ ದಂಡುಕೋರರು–ಯೋಧರ ನಡುವೆ ಸಂಘರ್ಷ: 7 ಸಾವು

Last Updated 10 ನವೆಂಬರ್ 2022, 14:01 IST
ಅಕ್ಷರ ಗಾತ್ರ

ಮನಿಲಾ (ಫಿಲಿಪ್ಪೀನ್ಸ್);ಫಿಲಿಪ್ಪೀನ್ಸ್‌ನ ದಕ್ಷಿಣ ಭಾಗದ ಬಸಿಲನ್‌ ಪ್ರಾಂತ್ಯದ ಉಂಗ್‌ಕಯ ಪುಕನ್‌ ಪಟ್ಟಣದಲ್ಲಿ ಮಂಗಳವಾರದಿಂದ ಆರಂಭವಾಗಿರುವಮುಸ್ಲಿಂ ಬಂಡುಕೋರರು ಮತ್ತು ಸೇನಾಪಡೆಗಳ ನಡುವಿನ ಘರ್ಷಣೆಯಲ್ಲಿ ಕನಿಷ್ಠ ಮೂವರು ಯೋಧರು ಹಾಗೂ ನಾಲ್ವರು ಬಂಡುಕೋರರು ಮೃತಪಟ್ಟಿದ್ದಾರೆ.

ಎರಡು ದಿನಗಳಿಂದ ನಡೆಯುತ್ತಿದ್ದ ಸಂಘರ್ಷ ಗುರುವಾರ ಮತ್ತಷ್ಟು ಉಲ್ಬಣಗೊಂಡಿತು. 2014ರಲ್ಲಿ ಮಾಡಿಕೊಳ್ಳಲಾದ ಶಾಂತಿ ಒಪ್ಪಂದವನ್ನು ಉಲ್ಲಂಘಿಸಿರುವುದಾಗಿ ಎರಡೂ ಗುಂಪುಗಳು ಪರಸ್ಪರ ಆರೋಪಿಸಿವೆ.

2014ರ ಒಪ್ಪಂದದಂತೆ ಮೊರೊ ಇಸ್ಲಾಮಿಕ್‌ ಲಿಬರೇಶನ್ ಫ್ರಂಟ್‌ ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು ಕೈಬಿಟ್ಟಿತ್ತು, ಅದಕ್ಕೆ ಪ್ರತಿಯಾಗಿ ಬಂಗ್ಸಮೊರೊ ಎಂಬ ಮುಸ್ಲಿಂ ಸ್ವಾಯತ್ತ ಪ್ರದೇಶದ ರಚನೆಗೆ ಒಪ್ಪಿಕೊಳ್ಳಲಾಗಿತ್ತು. ಇದೀಗ ಈ ಪ್ರಾಂತ್ಯವನ್ನು ಮಾಜಿ ಗೆರಿಲ್ಲಾ ನಾಯಕರು ಮುನ್ನಡೆಸುತ್ತಿದ್ದು, ತಾತ್ಕಾಲಿಕ ಅಧಿಕಾರ ಹಸ್ತಾಂತರ ಅವಧಿ 2025ರಲ್ಲಿ ಕೊನೆಗೊಳ್ಳಲಿದೆ. ಒಪ್ಪಂದದಂತೆ ಸೂಕ್ತ ಜೀವನ ವ್ಯವಸ್ಥೆ ಕಲ್ಪಿಸಿದ್ದೇ ಆದಲ್ಲಿ ತಮ್ಮ ಶಸ್ತ್ರಾಸ್ತ್ರ ತ್ಯಜಿಸುವುದಾಗಿ ಸುಮಾರು 40 ಸಾವಿರದಷ್ಟಿರುವ ಗೆರಿಲ್ಲಾಗಳ ಪೈಕಿ ಅರ್ಧದಷ್ಟು ಮಂದಿ ಈಗಾಗಲೇ ತಿಳಿಸಿದ್ದಾರೆ. ಈ ಒಪ್ಪಂದದಂತೆ ನಡೆದುಕೊಳ್ಳುತ್ತಿಲ್ಲ ಎಂಬುದೇ ಸದ್ಯದ ಸಂಘರ್ಷದ ಮೂಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT