ಗುರುವಾರ , ಮೇ 26, 2022
26 °C

ಫಿಲಿಪ್ಪೀನ್ಸ್‌ನಲ್ಲಿ ಸೂಪರ್‌ ಟೈಫೂನ್‌ ಅಟ್ಟಹಾಸ: ಭೀಕರ ಚಂಡಮಾರುತಕ್ಕೆ 112 ಸಾವು

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಮನಿಲಾ: ಫಿಲಿಪ್ಪೀನ್ಸ್‌ನಲ್ಲಿ ‘ರೈ’ ಚಂಡಮಾರುತದ ಪರಿಣಾಮ ಮೃತಪಟ್ಟವರ ಸಂಖ್ಯೆ 112ಕ್ಕೇ ಏರಿದೆ. ಭಾನುವಾರವೇ 65 ಜನ ಮೃತಪಟ್ಟಿದ್ದಾರೆ ಎಂದು ಸೆಂಟ್ರಲ್‌ ಫಿಲಿಪ್ಪೀನ್ಸ್‌ ಪ್ರಾಂತ್ಯದ ಗವರ್ನರ್‌ ತಿಳಿಸಿದ್ದಾರೆ.

ಚಂಡಮಾರುತದ ತೀವ್ರತೆಗೆ ದ್ವೀಪರಾಷ್ಟ್ರದ ಬಹುತೇಕ ಪಟ್ಟಣಗಳು ಗುರಿಯಾಗಿವೆ. 10 ಜನ ನಾಪತ್ತೆಯಾಗಿದ್ದು, 13 ಮಂದಿ ಗಾಯಗೊಂಡಿದ್ದಾರೆ. ಸಂಪರ್ಕ ಕೊರತೆಯಿಂದ ಇನ್ನೂ 33 ಮೇಯರ್‌ಗಳು ವಸ್ತುಸ್ಥಿತಿ ವರದಿ ಕಳುಹಿಸಿಲ್ಲ. ಹೀಗಾಗಿ, ಮೃತರ ಸಂಖ್ಯೆ ಇನ್ನಷ್ಟು ಏರಬಹುದು ಎಂದು ಗವರ್ನರ್ ಅರ್ತುರ್‌ ಯಾಪ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು