ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಕ್ಸಿಕೋದಲ್ಲಿ ಗುಂಡಿನ ಚಕಮಕಿ: ಎಂಟು ಸಾವು

Last Updated 28 ನವೆಂಬರ್ 2021, 11:00 IST
ಅಕ್ಷರ ಗಾತ್ರ

ಮೆಕ್ಸಿಕೋ ಸಿಟಿ: ಮಧ್ಯ ಮೆಕ್ಸಿಕೋದ ಝಕಾಟೆಕಾಸ್‌ ರಾಜ್ಯದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಎಂಟು ಮಂದಿ ಸಾವನ್ನ‍ಪ್ಪಿದ್ದಾರೆ.

ಜಲಿಸ್ಕೋ ರಾಜ್ಯದ ಗಡಿಯ ಸಮೀಪದಲ್ಲಿರುವ ವಾಲ್ಪರೈಸೋ ಪಟ್ಟಣದ ಬಳಿ ಶೂಟೌಟ್‌ ನಡೆದಿದ್ದು, ಘಟನಾ ಸ್ಥಳದಲ್ಲಿ ವಾಹನಗಳು ಮತ್ತು ಬಂದೂಕುಗಳು ಪತ್ತೆಯಾಗಿವೆ ಎಂದು ರಾಜ್ಯ ಸರ್ಕಾರಿ ವಕೀಲರು ತಿಳಿಸಿದ್ದಾರೆ.

ಜಕಾಟೆಕಾಸ್‌ನ ಹೆದ್ದಾರಿಯ ಮೇಲ್ಸೇತುವೆಯಲ್ಲಿ ಮೂರು ಮೃತದೇಹಗಳನ್ನು ನೇತುಹಾಕಿರುವುದನ್ನು ಪೊಲೀಸರು ಪತ್ತೆಹಚ್ಚಿದ ಮೂರು ದಿನಗಳ ನಂತರ ಈ ಶೂಟೌಟ್ ನಡೆದಿದೆ. ಇದಕ್ಕೂ ಒಂದು ವಾರ ಮೊದಲು 10 ಮೃತದೇಹಗಳು ಮೇಲ್ಸೇತುವೆಯಲ್ಲಿ ಪತ್ತೆಯಾಗಿದ್ದವು.

ಜಕಾಟೆಕಾಸ್‌ಗೆ ಮೂರು ಹೆಲಿಕಾಪ್ಟರ್ ಗನ್‌ಶಿಪ್‌ಗಳನ್ನು ಕಳುಹಿಸುವುದಾಗಿ ಮೆಕ್ಸಿಕನ್ ಸೇನೆಯು ಘೋಷಿಸಿದೆ. ಅಧ್ಯಕ್ಷ ಆಂಡ್ರೆಸ್ ಮಾನ್ಯುವೆಲ್ ಲೋಪೆಜ್ ಒಬ್ರೇಡರ್ ಅವರು ಅಮೆರಿಕಾ ಸಂಯುಕ್ತ ಸಂಸ್ಥಾನದ ಶಸ್ತ್ರಗಳನ್ನು ಬಳಸಲು ಅಥವಾ ಸ್ವೀಕರಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.

ಜಕಾಟೆಕಾಸ್ ಔಷಧಿಗಳ ಸಾಗಾಣಿಕೆಯ ಪ್ರಮುಖ ಕೇಂದ್ರವಾಗಿದ್ದು, ವಿಶೇಷವಾಗಿ ಫೆಂಟಾನಿಲ್ ಎನ್ನುವ ಪ್ರಬಲ ಕೃತಕ ನೋವು ನಿವಾರಕವನ್ನು ಅಮೆರಿಕಕ್ಕೆ ಇಲ್ಲಿಂದಲೇ ಸಾಗಿಸಲಾಗುತ್ತದೆ. ಈ ಕಾರಣದಿಂದಹೊಸ ತಲೆಮಾರಿನ ಸಿನಲೋವಾ ಮತ್ತು ಜಲಿಸ್ಕೋ ಹೆಸರಿನ ಗ್ಯಾಂಗ್‌ಗಳು ರಾಜ್ಯದ ಮೇಲೆ ನಿಯಂತ್ರಣ ಸಾಧಿಸಲು ಹೋರಾಡುತ್ತಿವೆ.

ಫೆಡರಲ್ ದತ್ತಾಂಶಗಳ ಪ್ರಕಾರ ವರ್ಷದ ಮೊದಲ ಒಂಭತ್ತು ತಿಂಗಳುಗಳಲ್ಲಿ ಮೆಕ್ಸಿಕೋ 25,000ಕ್ಕಿಂತಲೂ ಹೆಚ್ಚಿನ ಕೊಲೆ ಪ್ರಕರಣಗಳು ವರದಿಯಾಗಿದ್ದು, ಹಿಂದಿನ ವರ್ಷಕ್ಕೆಹೋಲಿಸಿದರೆ ಇದು ಶೇ 3.4ರಷ್ಟು ಕಡಿಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT