ಶುಕ್ರವಾರ, ಏಪ್ರಿಲ್ 16, 2021
31 °C
ಹೈಟಿ ರಾಜಧಾನಿ ಸಮೀಪದ ಜೈಲಿನಲ್ಲಿ ನಡೆದ ಘಟನೆ

ಹೈಟಿಯಲ್ಲಿ ಜೈಲ್ ಬ್ರೇಕ್‌: ಕೈದಿಗಳು ಪರಾರಿ, ಜೈಲು ನಿರ್ದೇಶಕ ಸೇರಿ 8 ಮಂದಿ ಸಾವು

ಎಪಿ Updated:

ಅಕ್ಷರ ಗಾತ್ರ : | |

Prajavani

ಕ್ರೊಯಿಕ್ಸ್‌–ಡೇಸ್‌–ಬಾಕಿಟ್ಸ್‌‌: ಹೈಟಿ ರಾಜಧಾನಿ ಪೋರ್ಟ್‌ ಆ ಪ್ರಿನ್ಸ್‌ನ ಈಶಾನ್ಯ ಭಾಗದಲ್ಲಿರುವ ಕ್ರೊಯಿಕ್‌–ಡೆಸ್‌–ಬೊಕೆಟ್ಸ್‌ನ ಜೈಲಿನಿಂದ ಹಲವು ಕೈದಿಗಳು ಬಂದೀಖಾನೆ ನಿರ್ದೇಶಕ ಸೇರಿದಂತೆ ಎಂಟು ಮಂದಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಇಲ್ಲಿನ ಈಶಾನ್ಯ ಪ್ರಾಂತ್ಯದ ಪೋರ್ಟ್‌ ಆ ಪ್ರಿನ್ಸ್‌ನ ಕ್ರೋಯಿಕ್ಸ್‌ ಡೇಸ್‌ ಬಾಕಿಟ್ಸ್‌ನ ಜೈಲಿನಲ್ಲಿ ಘಟನೆ ನಡೆದಿದೆ. 2012ರಲ್ಲಿ ಕಟ್ಟಲಾದ ಈ ಜೈಲಿನಲ್ಲಿ 2014ರಲ್ಲಿ 300ಕ್ಕೂ ಹೆಚ್ಚು ಕೈದಿಗಳು ಪರಾರಿಯಾಗಿದ್ದರು.

2012ರಲ್ಲಿ ಕೆನಡಾ ನಿರ್ಮಿಸಿದ ಕ್ರೋಯಿಕ್ಸ್-ಡೆಸ್-ಬೊಕೆಟ್ಸ್‌ನಲ್ಲಿನ ಜೈಲಿನಲ್ಲಿ ‌ಈ ಘಟನೆ ನಡೆದಿದೆ. ಈ ಜೈಲಿನಲ್ಲಿ 2014 ರಲ್ಲಿ ಇದೇ ರೀತಿ 300 ಕೈದಿಗಳು ಪರಾರಿಯಾಗಿದ್ದರು.

ಸ್ಥಳೀಯ ನಿವಾಸಿಗಳು, ಪ್ರತ್ಯಕ್ಷದರ್ಶಿಗಳ ಪ್ರಕಾರ, ʼ ಸಶಸ್ತ್ರಧಾರಿಗಳ ಗುಂಪೊಂದು ಏಕಾಏಕಿ ಜೈಲಿನ ಕಾವಲುಗಾರ ಸಿಬ್ಬಂದಿ ಮೇಲೆ ಗುಂಡು ಹಾರಿಸುತ್ತಾ ಚಲಿಸಿ ಪರಾರಿಯಾಗಿದ್ದಾರೆʼ ಎಂದು ಹೇಳಿದ್ದಾರೆ. ಈ ಸಮಯದಲ್ಲಿ ಕೆಲವು ಗಂಟೆಗಳವರೆಗೆ ಬಂದೀಖಾನೆ ಒಳಗೆ ಗುಂಡಿನ ಚಕಮಕಿಯ ಶಬ್ದ ಕೇಳಿಸುತ್ತಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು