ಬುಧವಾರ, ಜೂನ್ 23, 2021
30 °C

ಒಂದು ವರ್ಷದಿಂದ ಭೂಪ್ರದಕ್ಷಿಣೆ ಹಾಕಿದ ಈ ಫ್ರೆಂಚ್ ವೈನ್ ಬಾಟಲಿ ಬೆಲೆ ₹7.39 ಕೋಟಿ!

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಒಂದು ವರ್ಷದಿಂದ ಭೂಪ್ರದಕ್ಷಿಣೆ ಹಾಕಿದ ಫ್ರೆಂಚ್ ವೈನ್ ಬಾಟಲಿ ಮಾರಾಟಕ್ಕಿಡಲಾಗಿದ್ದು, ₹7.39 ಕೋಟಿ ಬೆಲೆ ನಿಗದಿಪಡಿಸಲಾಗಿದೆ.

'ಪ್ರೆಟಸ್ 2000' ಎಂಬ ಹೆಸರಿನ ವೈನ್ ಇದಾಗಿದ್ದು, ಬೋರ್ಡೆಕ್ಸ್ ಪ್ರದೇಶದ ಮೆರ್ಲಾಟ್ ದ್ರಾಕ್ಷಿಯಿಂದ ತಯಾರಿಸಲಾಗಿದೆ.

ಆಹಾರ ಹಾಗೂ ಕೃಷಿಯ ಕುರಿತು ಖಾಸಗಿ ಅನುದಾನಿತ ಸಂಶೋಧನೆ ಹಾಗೂ ಅಧ್ಯಯನದ ಭಾಗವಾಗಿ ಈ ಫ್ರೆಂಚ್ ವೈನ್, 14 ತಿಂಗಳು ಕಕ್ಷೆಯಲ್ಲಿ ಕಾಲ ಕಳೆದಿದೆ.

ಇದನ್ನೂ ಓದಿ: 

ಮಂಗಳವಾರದಂದು ಫ್ರೆಂಚ್ ವೈನ್ ಬಾಟಲಿಯನ್ನು ಕ್ರಿಸ್ಟೀಸ್ ಹರಾಜಿಗೆ ಇರಿಸಿದ್ದು, ಅಂದಾಜು ₹7.39 ಕೋಟಿ ಬೆಲೆ ನಿಗದಿಪಡಿಸಲಾಗಿದೆ.

2019 ನವೆಂಬರ್‌ನಲ್ಲಿ ಸ್ಪೇಸ್ ಕಾರ್ಗೊ ಅನ್‌ಲಿಮಿಟೆಡ್ 12 ವೈನ್ ಬಾಟಲಿಗಳನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಕಳುಹಿಸಿಕೊಟ್ಟಿತ್ತು.

ಬಾಹ್ಯಾಕಾಶದಲ್ಲಿ 400 ದಿನಗಿಂತಲೂ ಹೆಚ್ಚು ಶೂನ್ಯ ಗುರುತ್ವಾಕರ್ಷಣೆಯಲ್ಲಿ ಸುಮಾರು 300 ಮಿಲಿಯನ್ ಕಿ.ಮೀ. ಪ್ರಯಾಣಿಸಿದ ನಂತರ 2021ರ ಜನವರಿಯಲ್ಲಿ ಭೂಮಿಗೆ ಮರಳಿತ್ತು.

ಭೂಮಿಯಲ್ಲಿರುವ ವೈನ್‌ಗಳಿಗೆ ಹೋಲಿಸಿದಾಗ ಇದರ ರುಚಿ ಸಂಪೂರ್ಣ ವಿಭಿನ್ನವಾfಗಿರಲಿದೆ ಎಂದು ಫ್ರಾನ್ಸ್‌ನ ಬೋರ್ಡೆಕ್ಸ್ ಇನ್‌ಸ್ಟಿಟ್ಯೂಟ್ ಫಾರ್ ವೈನ್ ಆ್ಯಂಡ್ ವೈನ್ ರಿಸರ್ಚ್‌ನ ಸಂಶೋಧಕರು ವಿಶ್ಲೇಷಣೆ ಮಾಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು