ಗುರುವಾರ , ಡಿಸೆಂಬರ್ 3, 2020
20 °C
ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಪುಸ್ತಕದ ಭರ್ಜರಿ ಮಾರಾಟ

ಒಬಾಮ ಅವರ ‘ಎ ಪ್ರಾಮಿಸ್ಡ್‌ ಲ್ಯಾಂಡ್‌‘ ಬಿಡುಗಡೆ ದಿನವೇ 8.90 ಲಕ್ಷ ಪ್ರತಿ ಮಾರಾಟ

ಎಪಿ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ‘ಎ ಪ್ರಾಮಿಸ್ಡ್ ಲ್ಯಾಂಡ್‌‘ ಪುಸ್ತಕ ಬಿಡುಗಡೆಯಾದ 24 ನಾಲ್ಕು ಗಂಟೆಗಳಲ್ಲಿ 8.90 ಲಕ್ಷ ಪ್ರತಿಗಳು ಖರ್ಚಾಗಿವೆ !

ಅಮೆರಿಕ ಮತ್ತು ಕೆನಾಡಾದಲ್ಲಿ ಭರ್ಜರಿ ಮಾರಾಟವಾಗಿವೆ. ಅಧ್ಯಕ್ಷರೊಬ್ಬರ ನೆನಪಿನ ದಾಖಲಾತಿಯೊಂದು ಈ ಪ್ರಮಾಣದಲ್ಲಿ ಮಾರಾಟವಾಗಿರುವುದು, ಆಧುನಿಕ ಇತಿಹಾಸದ ದಾಖಲೆಯಾಗಿದೆ ಎಂದು ಬಣ್ಣಿಸಲಾಗುತ್ತಿದೆ.

ಪುಸ್ತಕದ ಬಿಡುಗಡೆಗೆ ಪೂರ್ವದಲ್ಲಿ ಮತ್ತು ಬಿಡುಗಡೆಯಾದ ಮೊದಲ ದಿನದಲ್ಲಿ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದ್ದು, ಇದರಲ್ಲಿ ಮುದ್ರಿತ ಪುಸ್ತಕದ ಜತೆಗೆ ಇ–ಪುಸ್ತಕ ಹಾಗೂ ಆಡಿಯೊ ಕೂಡ ಸೇರಿದೆ ಎಂದು ಪುಸ್ತಕ ಪ್ರಕಟಿಸಿರುವ ಪ್ರಕಾಶನ ಸಂಸ್ಥೆ ಪೆಂಗ್ವಿನ್ ರ‍್ಯಾಂಡಮ್‌ ಹೌಸ್‌ ಹೇಳಿದೆ.

‘ಮೊದಲ ದಿನದ ಮಾರಾಟದಿಂದ ನಾವು ರೋಮಾಂಚನಗೊಂಡಿದ್ದೇವೆ‘ ಎಂದು ಪೆಂಗ್ವಿನ್ ರ‍್ಯಾಂಡಮ್‌ ಹೌಸ್‌ ಇಂಪ್ರಿಂಟ್‌ ಕ್ರೌನ್‌ ಪ್ರಕಾಶಕ ಡೇವಿಡ್ ಡ್ರೇಕ್ ಹೇಳಿದ್ದಾರೆ. ‘ಅಧ್ಯಕ್ಷ ಒಬಾಮಾ ಅವರ ಕೃತಿಯಲ್ಲಿ ಎಂಥ ಅಪೂರ್ವ ಹಾಗೂ ಆಸಕ್ತಿದಾಯಕ ಮಾಹಿತಿಗಳಿವೆ ಎಂಬುದಕ್ಕೆ ಓದುಗರು ತೋರುತ್ತಿರುವ ಉತ್ಸಾಹ ಸಾಕ್ಷಿಯಾಗುತ್ತಿದೆ‘ ಎಂದು ಅವರು ಹೇಳಿದ್ದಾರೆ.

ಒಬಾಮಾ ಅವರ ‘ಎ ಪ್ರಾಮಿಸ್ಡ್‌ ಲ್ಯಾಂಡ್‌‘ನಂತೆ ಬಿಡುಗಡೆಯ ಆರಂಭದಲ್ಲೇ ವೇಗವಾಗಿ ಮಾರಾಟವಾದ ಮತ್ತೊಂದು ಕೃತಿ ಅವರ ಪತ್ನಿ ಮಿಶೆಲ್‌ ಒಬಾಮಾ ವರ ಆತ್ಮಚರಿತ್ರೆ ‘ಬಿಕಮಿಂಗ್‌‘. 2018ರಲ್ಲಿ ಈ ಕೃತಿ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಮೊದಲ ದಿನ ಉತ್ತರ ಅಮೆರಿಕದಲ್ಲಿ 7.25 ಲಕ್ಷ ಕೃತಿಗಳು ಮಾರಾಟವಾಗಿತ್ತು. ವಿಶ್ವದಾದ್ಯಂತ 1 ಕೋಟಿ ಕೃತಿಗಳು ಖರ್ಚಾಗಿತ್ತು. ಈಗಲೂ ಅದು ಬೇಡಿಕೆಯಲ್ಲಿರುವ ಕೃತಿ. ಈ ಎರಡೂ ಕೃತಿಗಳನ್ನೂ ಪೆಂಗ್ವಿನ್ ರ‍್ಯಾಂಡಮ್‌ ಹೌಸ್‌ ಪ್ರಕಟಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು