ಭಾನುವಾರ, ಜೂನ್ 13, 2021
21 °C

ಅಫ್ಗಾನಿಸ್ತಾನದಲ್ಲಿ ಉಗ್ರ ಸಂಘಟನೆ ಐಎಸ್‌ ಘೋಷಿಸಿದ್ದ 3 ದಿನಗಳ ಕದನ ವಿರಾಮ ಅಂತ್ಯ

ಎಪಿ Updated:

ಅಕ್ಷರ ಗಾತ್ರ : | |

Prajavani

ಕಾಬೂಲ್‌: ಉಗ್ರ ಸಂಘಟನೆ ಐಎಸ್‌ ಘೋಷಿಸಿದ್ದೆನ್ನಲಾದ ಮೂರು ದಿನಗಳ ಕದನ ವಿರಾಮ ಭಾನುವಾರ ಅಂತ್ಯವಾಗಿದೆ. ಕದನ ವಿರಾಮ ವೇಳೆಯಲ್ಲಿಯೂ ಹಿಂಸಾಕೃತ್ಯಗಳಿಗೆ ಅಫ್ಗಾನಿಸ್ತಾನ ಸಾಕ್ಷಿಯಾಗಿತ್ತು.

ಸಂಘರ್ಷ ಪೀಡಿತ ಅಫ್ಗಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಗಾಗಿ ಸರ್ಕಾರ ಮತ್ತು ತಾಲಿಬಾನ್‌ ನಡುವೆ ಮಾತುಕತೆ ಮತ್ತೆ ಆರಂಭಿಸಬೇಕು ಎಂದು ಜಾಗತಿಕ ಮಟ್ಟದಲ್ಲಿ ಒತ್ತಡ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳೂ ನಡೆದಿವೆ.

‘ಕತಾರ್‌ನಲ್ಲಿ ಶನಿವಾರ ನಡೆದ ಸಭೆಯಲ್ಲಿ ಅಫ್ಗಾನಿಸ್ತಾನ ಸರ್ಕಾರದ ಪ್ರತಿನಿಧಿಗಳು, ಇಸ್ಲಾಮಿಕ್‌ ಎಮಿರೇಟ್‌ನ ಮುಖಂಡರು ಮುಖಾಮುಖಿಯಾಗಿದ್ದಾರೆ. ಸ್ಥಗಿತಗೊಂಡಿದ್ದ ಮಾತುಕತೆಯನ್ನು ಮುಂದುವರಿಸುವ ಬಗೆಗಿನ ತಮ್ಮ ಬದ್ಧತೆಯನ್ನು ಉಭಯ ತಂಡಗಳು ಪುನರುಚ್ಚರಿಸಿವೆ’ ಎಂದು ತಾಲಿಬಾನ್‌ನ ವಕ್ತಾರ ಸುಹೇಲ್‌ ಶಾಹೀನ್‌ ಹೇಳಿದ್ದಾರೆ.

ತನ್ನ ಸೈನಿಕರ ಪೈಕಿ ಅಫ್ಗಾನಿಸ್ತಾನದಲ್ಲಿ ಉಳಿದಿದ್ದ 3,500 ಜನ ಯೋಧರನ್ನು ಅಮೆರಿಕ ವಾಪಸು ಕರೆಸಿಕೊಂಡಿದೆ. ಇದರ ಬೆನ್ನಲ್ಲೇ, ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಮಾತುಕತೆ ಮುಂದುವರಿಸುವಂತೆ ಅದು ಆಫ್ಗನ್‌ ಸರ್ಕಾರ ಮತ್ತು ತಾಲಿಬಾನ್‌ ಮೇಲೆ ಒತ್ತಡ ಹೇರುತ್ತಲೇ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು