ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನ: ಜನಪ್ರಿಯ ಹಾಸ್ಯನಟ ನಜರ್ ಮೊಹಮ್ಮದ್ ಹತ್ಯೆ

Last Updated 28 ಜುಲೈ 2021, 6:43 IST
ಅಕ್ಷರ ಗಾತ್ರ

ಕಾಬೂಲ್‌: ಅಫ್ಗಾನಿಸ್ತಾನದ ಜನಪ್ರಿಯಹಾಸ್ಯನಟ ನಜರ್ ಮೊಹಮ್ಮದ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಕಂದಹಾರ್ ಪ್ರಾಂತ್ಯದಲ್ಲಿನ ಅವರ ನಿವಾಸದ ಸಮೀಪ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ತಾಲಿಬಾನ್‌ ಉಗ್ರರು ಈ ದಾಳಿ ಮಾಡಿದ್ದಾರೆ ಎಂದು ನಜರ್ ಮೊಹಮ್ಮದ್ ಅವರ ಕುಟುಂಬದವರು ಆರೋಪಿಸಿದ್ದಾರೆ.

ವಿಶ್ವದ ಹಲವು ದೇಶಗಳು ನಜರ್ ಮೊಹಮ್ಮದ್‌ ಹತ್ಯೆಯನ್ನು ಖಂಡಿಸಿವೆ.

ಕಂದಹಾರ್‌ ಪ್ರಾಂತ್ಯವನ್ನು ಶೇ 70ರಷ್ಟು ವಶಪಡಿಸಿಕೊಳ್ಳಲಾಗಿದೆ ಎಂದು ತಾಲಿಬಾನ್ ಸಂಘಟನೆ ಘೋಷಣೆ ಮಾಡಿದೆ. ಈ ಪ್ರಾಂತ್ಯದಿಂದ ಜನರು ವಲಸೆ ಹೋಗುತ್ತಿದ್ದು, ಅಫ್ಗಾನ್ ಸರ್ಕಾರ ಸ್ಥಾಪನೆ ಮಾಡಿರುವ ನಿರಾಶ್ರಿತರ ಶಿಬಿರಗಳಲ್ಲೂ ಕೆಲವು ಕುಟುಂಬಗಳು ಆಶ್ರಯ ಪಡೆದಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT