ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗನ್‌ ನಾಗರಿಕರ ಸ್ಥಳಾಂತರ ಅತ್ಯಂತ ಕಠಿಣ: ಜೋ ಬೈಡನ್‌

Last Updated 21 ಆಗಸ್ಟ್ 2021, 6:16 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ಅಮೆರಿಕದ ನಾಗರಿಕರು ಮತ್ತು ಅವರಿಗೆ ಬೆಂಬಲ ನೀಡಿದ ‌ಅಫ್ಗನ್ನರನ್ನು ಸ್ಥಳಾಂತರಿಸಲಾಗುತ್ತಿದ್ದು, ಇದು ಇತಿಹಾಸದಲ್ಲೇ ಅತಿದೊಡ್ಡ ಮತ್ತು ಅತ್ಯಂತ ಕಷ್ಟಕರ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ತಿಳಿಸಿದ್ದಾರೆ.

‘ಈಗಾಗಲೇ ಅಮೆರಿಕ ಜುಲೈನಿಂದ 18 ಸಾವಿರ ಮಂದಿಯನ್ನು ಸ್ಥಳಾಂತರಿಸಿದೆ. ಒಟ್ಟಿನಲ್ಲಿ ಆಗಸ್ಟ್‌ 14ರಿಂದ ಇದುವರೆಗೆ ಮಿಲಿಟರಿ ವಿಮಾನದ ಮೂಲಕ ಸುಮಾರು 13ಸಾವಿರ ಜನರನ್ನು ಅಫ್ಗಾನಿಸ್ತಾನದಿಂದ ಕರೆದೊಯ್ಯಲಾಗಿದೆ’ ಎಂದು ತಿಳಿಸಿದ್ದಾರೆ.

‘ಇದು ಇತಿಹಾಸದಲ್ಲಿ ಅತಿ ಕಷ್ಟಕರ ಏರ್‌ಲಿಫ್ಟ್‌ ಆಗಿದೆ. ಇಡಿ ವಿಶ್ವದಲ್ಲೇ ಈ ಮಟ್ಟದ ಶಕ್ತಿ ಪ್ರದರ್ಶಿಸುವ ಸಾಮರ್ಥ್ಯ ಹೊಂದಿರುವ ಏಕೈಕ ದೇಶ ಅಮೆರಿಕ’ ಎಂದು ಬೈಡನ್‌ ಅಭಿಪ್ರಾಯಪಟ್ಟಿದ್ದಾರೆ.

‘ನಮ್ಮ ಸರ್ಕಾರವು ಖಾಸಗಿ ವಿಮಾನಗಳ ಮೂಲಕವೂ ಸಾವಿರಾರು ಮಂದಿಯನ್ನು ಸ್ಥಳಾಂತರಿಸಲಾಗಿದೆ. ಈ ವಿಮಾನಗಳ ಮೂಲಕ ಅಮೆರಿಕದ ನಾಗರಿಕರು, ಕಾಯಂ ನಿವಾಸಿಗಳು ಹಾಗೂ ಅವರ ಕುಟುಂಬಗಳನ್ನು ಅಫ್ಗಾನಿಸ್ತಾನದಿಂದ ಸ್ಥಳಾಂತರಿಸಲಾಗಿದೆ. ಇವರಲ್ಲಿ ವಿಶೇಷ ವಲಸೆ ವೀಸಾ (ಎಸ್‌ಐವಿ) ಅರ್ಜಿದಾರರು ಮತ್ತು ಅವರ ಕುಟುಂಬದವರು ಒಳಗೊಂಡಿದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಅಮೆರಿಕವು ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಬಿಗಿ ಭದ್ರತೆಯನ್ನು ಕೈಗೊಂಡಿದೆ. ಅಲ್ಲಿಂದ ಸೇನಾ ವಿಮಾನಗಳು ಮಾತ್ರವಲ್ಲದೇ ನಾಗರಿಕ ವಿಮಾನಗಳು, ಇತರೆ ದೇಶಗಳ ವಿಮಾನಗಳ ಹಾರಾಟಕ್ಕೂ ಅನುವು ಮಾಡಿಕೊಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT