ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಬೂಲ್‌: 3,000 ಲೀಟರ್‌ ಮದ್ಯವನ್ನು ಕಾಲುವೆಗೆ ಸುರಿದ ಅಫ್ಗನ್ ಗುಪ್ತಚರ ದಳ

Last Updated 2 ಜನವರಿ 2022, 13:59 IST
ಅಕ್ಷರ ಗಾತ್ರ

ಕಾಬೂಲ್‌: ಅಫ್ಗಾನಿಸ್ತಾನದಲ್ಲಿ ಸುಮಾರು 3,000 ಲೀಟರ್‌ ಮದ್ಯವನ್ನು ಕಾಲುವೆಗೆ ಸುರಿಯಲಾಗಿದೆ. ಅಫ್ಗನ್‌ನಲ್ಲಿ ನೂತನ ತಾಲಿಬಾನ್‌ ಆಡಳಿತವು ಮದ್ಯ ಮಾರಾಟಕ್ಕೆ ನಿಷೇಧ ಹೇರಿದ್ದು, ಗುಪ್ತಚರ ದಳದ ಸಿಬ್ಬಂದಿ ಮದ್ಯವನ್ನು ಕಾಲುವೆಗೆ ಸುರಿಯುವ ಕ್ರಮಕೈಗೊಂಡಿದ್ದಾರೆ.

ಕಾಬೂಲ್‌ನಲ್ಲಿ ನಡೆಸಿದ ದಾಳಿಗಳಲ್ಲಿ ಮದ್ಯದ ಸಂಗ್ರಹ ವಶ ಪಡಿಸಿಕೊಳ್ಳಲಾಗಿತ್ತು. ಬ್ಯಾರೆಲ್‌ಗಳಲ್ಲಿ ತುಂಬಲಾಗಿದ್ದ ಸುಮಾರು ಮೂರು ಸಾವಿರ ಲೀಟರ್‌ಗಳಷ್ಟು ಮದ್ಯವನ್ನು ಕಾಲುವೆಗೆ ಸುರಿಯುತ್ತಿರುವ ವಿಡಿಯೊ ಅನ್ನು ಗುಪ್ತಚರ ಇಲಾಖೆ ಬಿಡುಗಡೆ ಮಾಡಿದೆ.

'ಮದ್ಯ ತಯಾರಿಕೆ ಮತ್ತು ಅದರ ಪೂರೈಕೆಯಿಂದ ಮುಸ್ಲೀಮರು ದೂರ ಉಳಿಯಬೇಕು' ಎಂದು ಗುಪ್ತಚರ ಇಲಾಖೆ ಅಧಿಕಾರಿಯೊಬ್ಬರು ಹೇಳಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ.

ಯಾವಾಗ ದಾಳಿ ನಡೆಸಿ ಮದ್ಯವನ್ನು ವಶ ಪಡಿಸಿಕೊಳ್ಳಲಾಗಿದೆ ಅಥವಾ ಯಾವಾಗ ಮದ್ಯವನ್ನು ಕಾಲುವೆಗೆ ಸುರಿಯಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಗುಪ್ತಚರ ದಳದ ಪ್ರಕಟಣೆಯ ಪ್ರಕಾರ, ಕಾರ್ಯಾಚರಣೆಯಲ್ಲಿ ಮೂವರು ಮದ್ಯ ಮಾರಾಟಗಾರರನ್ನು (ಡೀಲರ್‌ಗಳು) ಬಂಧಿಸಲಾಗಿದೆ.

ಈ ಹಿಂದಿನ ಅಫ್ಗಾನಿಸ್ತಾನ ಸರ್ಕಾರದ ಆಡಳಿತದಲ್ಲಿಯೂ ಮದ್ಯ ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಲಾಗಿತ್ತು. ಆದರೆ, ಈಗಿನ ತಾಲಿಬಾನ್‌ ಆಡಳಿತವು ಆ ನಿಯಮಗಳನ್ನು ಕಠಿಣವಾಗಿ ಪಾಲನೆಯಾಗುವಂತೆ ಮಾಡುತ್ತಿದೆ.

ಆಗಸ್ಟ್‌ 15ರಂದು ತಾಲಿಬಾನ್‌ಗಳು ಕಾಬೂಲ್‌ನಲ್ಲಿ ಹಿಡಿತ ಸಾಧಿಸಿದ ನಂತರ ಡ್ರಗ್‌ ವ್ಯಸನಿಗಳಿರುವ ಸ್ಥಳಗಳು ಸೇರಿದಂತೆ ಹಲವು ಕಡೆ ನಡೆಸಲಾಗುತ್ತಿರುವ ದಾಳಿಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಮಹಿಳೆಯರ ಹಕ್ಕುಗಳಿಗೂ ಹಲವು ನಿರ್ಬಂಧಗಳನ್ನು ತಾಲಿಬಾನ್‌ ಸರ್ಕಾರ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT