ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಬೂಲ್‌ ವಿಮಾನ ನಿಲ್ದಾಣ: ಕೆಲಸಕ್ಕೆ ಮರಳಿದ ಅಫ್ಗನ್‌ ಪೊಲೀಸರು

Last Updated 12 ಸೆಪ್ಟೆಂಬರ್ 2021, 9:43 IST
ಅಕ್ಷರ ಗಾತ್ರ

ಕಾಬೂಲ್‌: ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಅಫ್ಗನ್‌ ಪೊಲೀಸರು ತಾಲಿಬಾನಿಗಳ ಭದ್ರತೆಯ ಜೊತೆಗೆ ಚೆಕ್‌ಪೋಸ್ಟ್‌ಗಳನ್ನು ನಿರ್ವಹಿಸುವ ಕೆಲಸಕ್ಕೆ ಮರಳಿದ್ದಾರೆ.

ಕಳೆದ ತಿಂಗಳು ತಾಲಿಬಾನಿಗಳು ಕಾಬೂಲ್‌ ಅನ್ನು ಆಕ್ರಮಿಸಿದಾಗ, ಆತಂಕಗೊಂಡಿದ್ದ ಪೊಲೀಸರು ಹುದ್ದೆ ತ್ಯಜಿಸಿದ್ದರು.

ಆದರೆ, ತಾಲಿಬಾನ್ ಕಮಾಂಡರ್‌ಗಳಿಂದ ಕರೆ ಬಂದ ನಂತರ ಇಬ್ಬರು ಅಧಿಕಾರಿಗಳು ಶನಿವಾರ ಕೆಲಸಕ್ಕೆ ಮರಳಿದ್ದರು.

ವಿಮಾನ ನಿಲ್ದಾಣದ ದೇಶೀಯ ಟರ್ಮಿನಲ್‌ ಸೇರಿದಂತೆ ನಿಲ್ದಾಣದ ಮುಖ್ಯ ಕಟ್ಟಡಗಳ ಹೊರಗಿನ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದುದು ಭಾನುವಾರ ಕಂಡು ಬಂದಿದೆ.

‘ಮನೆಗೆ ಕಳುಹಿಸಿದ ಎರಡು ವಾರಗಳ ಬಳಿಕ ಕೆಲಸಕ್ಕೆ ಮತ್ತೆ ಬಂದಿದ್ದೇನೆ’ ಎಂದು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್‌ ಒಬ್ಬರು ತಿಳಿಸಿದ್ದಾರೆ. ಕೆಲಸಕ್ಕೆ ಮರಳಿ ಹಾಜರಾಗುವಂತೆ ತಾಲಿಬಾನ್‌ ಕಮಾಂಡರ್‌ನಿಂದ ಕರೆ ಬಂದಿತ್ತು ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT