ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಬೂಲ್‌ ಪ್ರೌಢ ಶಾಲೆಯಲ್ಲಿ ಬಾಂಬ್‌ ಸ್ಫೋಟ; ಹಲವು ಮಂದಿ ಸಾವು

Last Updated 19 ಏಪ್ರಿಲ್ 2022, 8:35 IST
ಅಕ್ಷರ ಗಾತ್ರ

ಕಾಬೂಲ್‌: ಅಫ್ಗಾನಿಸ್ತಾನದ ಪಶ್ಚಿಮ ಕಾಬೂಲ್‌ನ ಪ್ರೌಢ ಶಾಲೆಯಲ್ಲಿ ಬಾಂಬ್‌ಗಳ ಸ್ಫೋಟ ಸಂಭವಿಸಿದ್ದು, ಹಲವು ಮಂದಿ ಸಾವಿಗೀಡಾಗಿರುವುದಾಗಿ ವರದಿಯಾಗಿದೆ.

ಶಾಲೆಗೆ ಸಮೀಪದಲ್ಲಿರುವ ಅಲ್ಪಸಂಖ್ಯಾತ ಶಿಯಾ ಹಜಾರಾ ಸಮುದಾಯದವರನ್ನು ಗುರಿಯಾಗಿಸಿ ಸುನ್ನಿ ಉಗ್ರರ ಗುಂಪುಗಳು ದಾಳಿ ನಡೆಸಿರುವುದಾಗಿ ವರದಿಯಾಗಿದ್ದು, ಘಟನೆಯಲ್ಲಿ ಹಲವು ಮಕ್ಕಳು ಗಾಯಗೊಂಡಿದ್ದಾರೆ.

ಮಂಗಳವಾರ ನಡೆದಿರುವ ಮೂರು ಸ್ಫೋಟಗಳಲ್ಲಿ ಕನಿಷ್ಠ 4 ಮಂದಿ ಸಾವಿಗೀಡಾಗಿದ್ದು, 14 ಮಂದಿ ಗಾಯಗೊಂಡಿರುವುದಾಗಿ ಅಫ್ಗಾನ್‌ನ ಭದ್ರತಾ ಮತ್ತು ಆರೋಗ್ಯ ಅಧಿಕಾರಿಗಳಿಂದ ತಿಳಿದು ಬಂದಿದೆ.

'ಪ್ರೌಢ ಶಾಲೆಯೊಂದರಲ್ಲಿ ಮೂರು ಸ್ಫೋಟಗಳು ಸಂಭವಿಸಿವೆ, ಶಿಯಾ ಸಮುದಾಯದ ಕೆಲವು ಮಂದಿ ಸಾವಿಗೀಡಾಗಿದ್ದಾರೆ' ಎಂದು ಕಾಬೂಲ್‌ ಕಮಾಂಡರ್‌ ಅವರ ವಕ್ತಾರ ಖಾಲಿದ್‌ ಜದ್ರಾನ್‌ ಹೇಳಿದ್ದಾರೆ.

ಪ್ರಸ್ತುತ ದಾಳಿಯ ಹೊಣೆ ಬಗ್ಗೆ ಯಾವುದೇ ಸಂಘಟನೆ ಘೋಷಿಸಿಕೊಂಡಿಲ್ಲ. ಕಳೆದ ವರ್ಷ ವಿದೇಶದ ಸೇನಾ ಪಡೆಗಳು ದೇಶ ತೊರೆದ ಬೆನ್ನಲ್ಲೇ ಆಗಸ್ಟ್‌ನಿಂದ ತಾಲಿಬಾನ್‌ ಅಫ್ಗಾನಿಸ್ತಾನದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಇಸ್ಲಾಮಿಕ್‌ ಸ್ಟೇಟ್‌ ಉಗ್ರರ ಗುಂಪುಗಳು ಹಲವು ಕಡೆ ದಾಳಿ ಮುಂದುವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT