ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋಹಾದಿಂದ ಕಂದಹಾರ್‌ಗೆ ತೆರಳಿದ ತಾಲಿಬಾನ್ ನಾಯಕ ಮುಲ್ಲಾ ಬರಾದರ್

Last Updated 17 ಆಗಸ್ಟ್ 2021, 14:20 IST
ಅಕ್ಷರ ಗಾತ್ರ

ಕಾಬೂಲ್: ತಾಲಿಬಾನ್‌ನ ಉನ್ನತ ನಾಯಕ ಮುಲ್ಲಾ ಬ್ದುಲ್ ಘನಿ ಬರಾದರ್ ದೋಹಾದಿಂದ ಅಫ್ಗಾನಿಸ್ತಾನದ ಕಂದಹಾರ್‌ಗೆ ಪ್ರಯಾಣ ಬೆಳೆಸಿರುವುದಾಗಿ ವರದಿಯಾಗಿದೆ.

ಕಂದಹಾರ್‌ಗೆ ತೆರಳುವುದಕ್ಕೂ ಮುನ್ನ ಕತಾರ್‌ನ ವಿದೇಶಾಂಗ ಸಚಿವ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್‌ರಹಮಾನ್ ಅಲ್ ಥನಿ ಅವರನ್ನು ಬರಾದರ್ ಭೇಟಿಯಾಗಿದ್ದಾರೆ ಎನ್ನಲಾಗಿದೆ.

ಅಫ್ಗಾನಿಸ್ತಾನದ ರಾಜಕೀಯ ಬೆಳವಣಿಗೆಗಳು, ಭದ್ರತೆ, ನಾಗರಿಕರ ರಕ್ಷಣೆ, ರಾಷ್ಟ್ರೀಯ ಸಮನ್ವಯ, ಶಾಂತಿಯುತ ಅಧಿಕಾರ ಹಸ್ತಾಂತರ ಮತ್ತಿತರ ವಿಷಯಗಳ ಬಗ್ಗೆ ಉಭಯರೂ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಭಿವೃದ್ಧಿ ಅನುದಾನ ಸ್ಥಗಿತಗೊಳಿಸಿದ ಜರ್ಮನಿ

ಅಫ್ಗಾನಿಸ್ತಾನವು ತಾಲಿಬಾನ್ ವಶವಾಗಿರುವ ಬೆನ್ನಲ್ಲೇ ಆ ದೇಶಕ್ಕೆ ನೀಡಲಾಗುತ್ತಿರುವ ಅಬಿವೃದ್ಧಿ ಅನುದಾನವನ್ನು ಸ್ಥಗಿತಗೊಳಿಸಿರುವುದಾಗಿ ಜರ್ಮನಿ ಹೇಳಿದೆ.

ಅಫ್ಗಾನಿಸ್ತಾನದ ಅಭಿವೃದ್ಧಿಗೆ ನೀಡಲಾಗುತ್ತಿರುವ ಕೊಡುಗೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅಲ್ಲಿಂದ ಮರಳಬೇಕೆಂದು ಆಶಿಸಿರುವ ಸ್ಥಳೀಯ ಅಭಿವೃದ್ಧಿ ಅಧಿಕಾರಿಗಳು ಮತ್ತು ಎನ್‌ಜಿಒ ಕಾರ್ಯಕರ್ತರನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಅಭಿವೃದ್ಧಿ ಸಚಿವ ಗೆರ್ಡ್ ಮುಲ್ಲರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT