ಭಾನುವಾರ, ಮೇ 22, 2022
22 °C

ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸುವುದು ಕಡ್ಡಾಯ: ತಾಲಿಬಾನ್‌ ಆದೇಶ

ಎಎಫ್‌‍ಪಿ Updated:

ಅಕ್ಷರ ಗಾತ್ರ : | |

Prajavani

ಕಾಬೂಲ್‌: ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಸರ್ಕಾರ ಮಹಿಳೆಯರ ಮೇಲೆ ಮತ್ತಷ್ಟು ಕಠಿಣ ನಿರ್ಬಂಧಗಳನ್ನು ವಿಧಿಸಿದೆ. ಇನ್ಮುಂದೆ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ದೇಹವನ್ನು ಸಂಪೂರ್ಣವಾಗಿ ಮುಚ್ಚುವ ಬುರ್ಖಾ ಧರಿಸುವುದು ಕಡ್ಡಾಯ ಎಂದು ಶನಿವಾರ ಆದೇಶಿಸಿದೆ.

ಅಫ್ಗಾನಿಸ್ತಾನ ಸರ್ವೋಚ್ಚ ನಾಯಕ ಮತ್ತು ತಾಲಿಬಾನ್ ಮುಖ್ಯಸ್ಥ ಹುಬತುಲ್ಲಾ ಅಖುಂದ್‌ಜಾದ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ವಸ್ತ್ರಸಂಹಿತೆ ಜಾರಿ ಮಾಡಿ ಆದೇಶಿಸಿದ್ದಾರೆ. ‘ಮಹಿಳೆಯರು ಇನ್ಮುಂದೆ ಮುಖ ಮತ್ತು ಇಡೀ ದೇಹವನ್ನು ಮುಚ್ಚುವ ನೀಲಿ ಬಣ್ಣದ ಸಾಂಪ್ರದಾಯಿಕ ಆಫ್ಗನ್‌ ಬುರ್ಖಾ ಧರಿಸಬೇಕು’ ಎಂದು ಆಜ್ಞೆ ಮಾಡಿದ್ದಾರೆ.

ಷರಿಯಾ ಕಾನೂನಿನ ಪ್ರಕಾರ ಪುರುಷರನ್ನು ಪ್ರಚೋದಿಸದಿರಲು, ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳು ಅಥವಾ ಯುವತಿಯರು ಕಣ್ಣನ್ನು ಹೊರತುಪಡಿಸಿ ಮುಖವನ್ನು ಮುಚ್ಚುವ ಬುರ್ಕಾ ಧರಿಸಬೇಕು. ಮಹಿಳೆಯರು ಘನತೆ ಮತ್ತು ಸುರಕ್ಷತೆಯಿಂದ ಬದುಕಬೇಕೆಂಬುದು ನಮ್ಮ ಬಯಕೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು