ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನ್ | ಸಂಭಾವ್ಯ ಬೆದರಿಕೆ: ಎಚ್ಚರಿಕೆ; ನಿರಾಶ್ರಿತರಿಗೆ ನೆರವು

Last Updated 21 ಆಗಸ್ಟ್ 2021, 21:38 IST
ಅಕ್ಷರ ಗಾತ್ರ

ವಾಷಿಂಗ್ಟನ್: ಸಾವಿರಾರು ಜನರು ದೇಶವನ್ನು ತೊರೆಯಲು ಪ್ರಯತ್ನಿಸುತ್ತಿದ್ದು, ಕಾಬೂಲ್ ವಿಮಾನ ನಿಲ್ದಾಣಕ್ಕೆ ತೆರಳುವುದನ್ನು ತಪ್ಪಿಸಿ ಎಂದು ಅಫ್ಗಾನಿಸ್ತಾನದಲ್ಲಿರುವ ಅಮೆರಿಕನ್ನರಿಗೆ ಅಲ್ಲಿನ ರಾಯಭಾರ ಕಚೇರಿ ಸಲಹೆ ನೀಡಿದೆ.

‘ಕಾಬೂಲ್ ವಿಮಾನ ನಿಲ್ದಾಣದ ಹೊರಗಿನ ಪ್ರವೇಶದ್ವಾರದಲ್ಲಿ ಅಪಾರ ಜನರು ಸೇರಿದ್ದು, ಭದ್ರತೆಯ ಕೊರತೆ ಇದೆ. ವಿಮಾನ ನಿಲ್ದಾಣಕ್ಕೆ ಬರುವಂತೆ ಅಮೆರಿಕದ ಅಧಿಕಾರಿಗಳಿಂದ
ಅಧಿಕೃತ ಸಂದೇಶ ಬಾರದ ಹೊರತು, ನೀವು ವಿಮಾನ ನಿಲ್ದಾಣ ಅಥವಾ ಅದರ ಹೊರಗಿದ ಪ್ರವೇಶದ್ವಾರದ ಬಳಿಗೆ ಹೋಗಬೇಡಿ’ ಎಂದು ಸಲಹೆ ನೀಡಿದೆ.

ನಿರಾಶ್ರಿತರಿಗೆ ನೆರವು

*ಐರೋಪ್ಯ ಒಕ್ಕೂಟದಿಂದ ಹೊರನಡೆದಿರುವ ಬ್ರಿಟನ್, ಈ ವರ್ಷ 5,000 ಅಫ್ಗನ್ ನಿರಾಶ್ರಿತರಿಗೆ ಆಶ್ರಯ ನೀಡುವುದಾಗಿ ಭರವಸೆ ನೀಡಿದೆ. ಮುಂಬರುವ ವರ್ಷಗಳಲ್ಲಿ ಒಟ್ಟು 20,000 ಜನರಿಗೆ ಪುನರ್ವಸತಿ ಕಲ್ಪಿಸುವ ವಾಗ್ದಾನ ನೀಡಿದೆ.

*ಅಫ್ಗಾನಿಸ್ತಾನದ ಸುಮಾರು 400 ನಿರಾಶ್ರಿತರನ್ನು ಉಜ್ಬೇಕಿಸ್ತಾನ್ ಸ್ವಾಗತಿಸಿ, ಅವರನ್ನು ಗಡಿಯ ಬಳಿ ತಾತ್ಕಾಲಿಕ ವಸತಿಗೃಹದಲ್ಲಿ ಇರಿಸಿಕೊಂಡಿದೆ ಎಂದು ರಷ್ಯಾದ ರಾಜ್ಯ ಸುದ್ದಿ ಸಂಸ್ಥೆ ಟಾಸ್ ಶನಿವಾರ ವರದಿ ಮಾಡಿದೆ.

*ಅಮೆರಿಕ ಅಥವಾ ಇತರ ಮಿತ್ರರಾಷ್ಟ್ರಗಳು ಬಯಸಿದಲ್ಲಿ, ಹೆಚ್ಚುವರಿ ಅಫ್ಗನ್ ನಿರಾಶ್ರಿತರಿಗೆ ಪ್ರವೇಶ ನೀಡುವುದನ್ನು ಕೆನಡಾ ಪರಿಗಣಿಸುತ್ತದೆ ಎಂದು ವಲಸೆ ಸಚಿವ ಮಾರ್ಕೊ ಮೆಂಡಿಸಿನೊ ತಿಳಿಸಿದ್ದಾರೆ.

*ತಮ್ಮ ದೇಶದ ಒಳಗೆ ಮತ್ತು ಇರಾನ್ ಮತ್ತು ಪಾಕಿಸ್ತಾನದಂತಹ ನೆರೆಯ ರಾಷ್ಟ್ರಗಳಲ್ಲಿ ಅಫ್ಗನ್ ನಿರಾಶ್ರಿತರಿಗೆ ಸಹಾಯ ಮಾಡುವತ್ತ ಗಮನ ಹರಿಸುತ್ತಿದ್ದೇವೆ ಎಂದು ಕೆಲವು ಐರೋಪ್ಯ ದೇಶಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT