ಮಂಗಳವಾರ, ಜೂನ್ 28, 2022
26 °C
ಎಐ ಸೆಂಟರ್‌ ಆಫ್ ಎಕ್ಸ್‌ಲೆನ್ಸ್‌ ವಿಭಾಗದ ಮುಖ್ಯಸ್ಥ

ಭಾರತೀಯ–ಅಮೆರಿಕನ್‌ ಕೃಷ್ಣಕುಮಾರ್‌ ಎಡತ್ತಿಲ್‌ಗೆ ‘ವರ್ಷದ ಸಂಶೋಧಕ‘ ಪ್ರಶಸ್ತಿ ಗೌರವ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹ್ಯೂಸ್ಟನ್‌: ದಿ ಟೆಕ್ಸಾಸ್‌ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ ಸೆಂಟರ್‌ ಆಫ್‌ ಎಕ್ಸಲೆನ್ಸ್‌(ಎಐ–ಸಿಒಇ) ಮುನ್ನಡೆಸುತ್ತಿರುವ ಭಾರತೀಯ–ಅಮೆರಿಕನ್ ಮೂಲದ ಕೃಷ್ಣಕುಮಾರ್ ಎಡತ್ತಿಲ್ ಅವರು ಅಮೆರಿಕ ಸರ್ಕಾರ ಕೊಡಮಾಡುವ ‘ವರ್ಷದ ಅತ್ಯುತ್ತಮ ಸಂಶೋಧಕ‘ ಪ್ರಶಸ್ತಿಗೆ ಭಾಜನರಾಗಿದ್ದಾರೆ.

2021ನೇ ಸಾಲಿನ ‘ಸ್ಟೇಟ್‌ ಸ್ಕೂಪ್‌‘ 50ನೇ ರಾಷ್ಟ್ರೀಯ ಪ್ರಶಸ್ತಿಗಳ ಭಾಗವಾಗಿ ಅಮೆರಿಕ ಈ ಪ್ರಶಸ್ತಿ ಪ್ರದಾನ ಮಾಡುತ್ತಿದೆ.

ಕೇರಳ ಮೂಲದ ಕೃಷ್ಣಕುಮಾರ್ ಅವರು ಕಳೆದ ಡಿಸೆಂಬರ್‌ನಲ್ಲಿ ಆರಂಭವಾದ ಎಲ್‌–ಸಿಒಇ ಸಂಸ್ಥೆಯ ಎಂಟರ್‌ಪ್ರೈಸ್‌ ಸಲ್ಯೂಷನ್‌ ಸರ್ವೀಸ್‌ನ ನಿರ್ದೇಶಕರು ಮತ್ತು ಪ್ರ್ಯಾಕ್ಟೀಸ್‌ ಲೀಡರ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ನ್ಯಾಷನಲ್ ಕ್ಲೌಡ್ ಡಿಜಿಟಲ್‌ ಸರ್ವೇಸ್‌ ವಿಭಾಗಕ್ಕೆ ಟೆಕ್ಸಾಸ್‌ ಅನ್ನು ಸೇರಿಸಲು ಶ್ರಮಿಸಿದ ಹಿನ್ನೆಲೆಯಲ್ಲಿ ಕೃಷ್ಣ ಅವರಿಗೆ ಸರ್ಕಾರದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ ಇನಿಷಿಯೇಟಿವ್‌ ವಿಭಾಗವನ್ನು ಮುನ್ನಡೆಸಲು ಹೆಚ್ಚುವರಿ ಜವಾಬ್ದಾರಿ ನೀಡಲಾಯಿತು.

ಈ ಸಂಸ್ಥೆಯು ಸ್ಥಳೀಯ ಸರ್ಕಾರಗಳು ತಮ್ಮ ಕೆಲಸಗಳಲ್ಲಿ ಡಿಜಿಟಲ್‌ ವರ್ಗಾವಣೆ ಅಳವಡಿಕೆ ಮತ್ತು ಕಾರ್ಯ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕಾಗಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ ಟೆಕ್ನಾಲಜಿಯನ್ನು ಬಳಕೆ ಮಾಡಲು ಉತ್ತೇಜನ ನೀಡುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು