ಪ್ರಮಾಣ ಸ್ವೀಕರಿಸಿದ ಬೆನ್ನಲ್ಲೇ ಕ್ವಾಡ್ ಶೃಂಗದಲ್ಲಿ ಪಾಲ್ಗೊಳ್ಳಲು ಟೋಕಿಯೊಗೆ ಪ್ರಯಾಣ
ಆಸ್ಟ್ರೇಲಿಯಾ ನೂತನ ಪ್ರಧಾನಿಯಾಗಿ ಆ್ಯಂಟನಿ ಅಲ್ಬನೀಸ್ ಪ್ರಮಾಣ ಸ್ವೀಕಾರ

ಕ್ಯಾನ್‌ಬೆರಾ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾದ ನೂತನ ಪ್ರಧಾನಿಯಾಗಿ ಆ್ಯಂಟನಿ ಅಲ್ಬನೀಸ್ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ಅದರ ಬೆನ್ನಲ್ಲೇ ಅಲ್ಬನೀಸ್ ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್ನ ಟೋಕಿಯೊಗೆ ತೆರಳಿದರು.
ಆಸ್ಟ್ರೇಲಿಯಾ ಸಂಸತ್ತಿಗೆ ಶನಿವಾರ ನಡೆದ ಚುನಾವಣೆಯಲ್ಲಿ ವಿಪಕ್ಷ ಲೇಬರ್ ಪಾರ್ಟಿ ಈಗಾಗಲೇ ಸರಳ ಬಹುಮತ ಪಡೆದುಕೊಂಡಿದ್ದು, ಮತ ಎಣಿಕೆ ಕಾರ್ಯ ಮುಂದುವರಿದಿದೆ. ಈ ಮೂಲಕ ಸತತ 9 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಸ್ಕಾಟ್ ಮಾರಿಸನ್ ನೇತೃತ್ವದ ಕನ್ಸರ್ವೇಟಿವ್ ಪಕ್ಷವನ್ನು ಲೇಬರ್ ಪಾರ್ಟಿ ಪರಾಭವಗೊಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.