ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಲಿಫೋರ್ನಿಯಾದಲ್ಲಿ ಭಾರತದ ಸ್ವಾತಂತ್ರ್ಯ ದಿನ ಆಚರಣೆ

Last Updated 23 ಆಗಸ್ಟ್ 2022, 12:32 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಕ್ಯಾಲಿಫೋರ್ನಿಯಾದ ಪುಟ್ಟ ನಗರ ಪ್ಲೀಸನ್‌ಟೌನ್‌ನಲ್ಲಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಭಾರತದ ತ್ರಿವರ್ಣಧ್ವಜ ಹಾರಿಸುವುದರ ಮೂಲಕ ಆಚರಿಸಲಾಯಿತು.

ಅಮೆರಿಕದಲ್ಲಿರುವ ಭಾರತೀಯರು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಡೆನ್ಸಾ ಸಮುದಾಯ ಕಾಲೇಜಿನ ಹಿಂದಿ ಭಾಷೆ ಪ್ರೊಫೆಸರ್‌ ಹಾಗೂ ಪ್ರವಾಸಿ ಭಾರತೀಯ ಸಮ್ಮಾನ್‌ ಪುರಸ್ಕೃತೆ ನೀಲು ಗುಪ್ತಾ ಧ್ವಜಾಹೋರಣ ಮಾಡಿದರು.

ಪ್ಲೀಸನ್‌ಟೌನ್‌ನ ಮೇಯರ್‌ ಕರ್ಲಾ ಬ್ರೌನ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಗರದಲ್ಲಿ ವಿವಿಧ ದೇಶದ ಸಂಸ್ಕೃತಿಯನ್ನು ಸಂಭ್ರಮಿಸುವ ಅವಕಾಶ ಸಿಗುತ್ತಿರುವುದು ಸಂತಸ ತಂದಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT