ಸೋಮವಾರ, ಡಿಸೆಂಬರ್ 5, 2022
19 °C

ನೇಪಾಳದಲ್ಲಿ ಮತ್ತೆ ಭೂಕಂಪ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕಠ್ಮಂಡು: ನೇಪಾಳದಲ್ಲಿ ಸತತ ಎರಡನೇ ದಿನವಾದ ಗುರುವಾರ ಸಹ ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಯಾವುದೇ ಸಾವು, ನೋವಿನ ವರದಿಯಾಗಿಲ್ಲ.

ಇಲ್ಲಿಂದ 750 ಕಿ.ಮೀ. ದೂರದ ಬಜೂರಾ ಜಿಲ್ಲೆಯ ಕಾಡಾ ಎಂಬಲ್ಲಿ ಕೇಂದ್ರಬಿಂದುವಿದ್ದ ಭೂಕಂಪ ಬೆಳಿಗ್ಗೆ 5.13ರ ವೇಳೆಗೆ ಸಂಭವಿಸಿತು. ಇದು ಹೊಸದಾಗಿ ಸಂಭವಿಸಿದ ಭೂಕಂಪವೇ ಹೊರತು ಬುಧವಾರದ ಭೂಕಂಪದ ಮರುಕಂಪನ ಆಗಿರಲಿಲ್ಲ ಎಂದು ರಾಷ್ಟ್ರೀಯ ಭೂಕಂಪ ಪರಿವೀಕ್ಷಣೆ ಮತ್ತು ಸಂಶೋಧನಾ ಕೇಂದ್ರ ತಿಳಿಸಿದೆ.

ದೋತಿ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ್ದ ಭೂಕಂಪದಲ್ಲಿ ಆರು ಮಂದಿ ಮೃತಪಟ್ಟಿದ್ದರು ಹಾಗೂ ಹತ್ತಾರು ಮನೆಗಳು ನಾಶವಾಗಿದ್ದವು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು