ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್‌: ಪತ್ರಕರ್ತ ಥೀನ್‌ ಜಾವ್‌ ಬಿಡುಗಡೆ ಸಾಧ್ಯತೆ

Last Updated 24 ಮಾರ್ಚ್ 2021, 10:38 IST
ಅಕ್ಷರ ಗಾತ್ರ

ಯಾಂಗೂನ್: ಕಳೆದ ತಿಂಗಳು ಮ್ಯಾನ್ಮಾರ್‌ನಲ್ಲಿ ಮಿಲಿಟರಿ ದಂಗೆ ವಿರುದ್ಧದ ಪ್ರತಿಭಟನೆಯ ವರದಿ ಮಾಡುತ್ತಿದ್ದ ವೇಳೆ ಬಂಧಿಸಿದ್ದ ಅಸೋಸಿಯೇಟೆಡ್‌ ಪ್ರೆಸ್‌ (ಎಪಿ) ಸುದ್ದಿ ಸಂಸ್ಥೆಯ ಪತ್ರಕರ್ತ ಥೀನ್‌ ಜಾವ್‌ ಅವರನ್ನುಬುಧವಾರ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಸ್ವತಃ ಥೀನ್‌ ಅವರೇ ಈ ವಿಷಯವನ್ನು ತನ್ನ ಕುಟುಂಬದವರಿಗೆ ತಿಳಿಸಿದ್ದಾರೆ.

ಕಾನೂನುಸುವ್ಯವಸ್ಥೆ ಉಲ್ಲಂಘನೆ ಆರೋಪದಡಿ ಥೀನ್‌ ಜಾವ್‌ ಅವರನ್ನು ಬಂಧಿಸಲಾಗಿತ್ತು. ಈ ಕಾನೂನು ಉಲ್ಲಂಘಿಸಿದವರು ಮೂರು ವರ್ಷ‌ದ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.

ಫೆಬ್ರುವರಿ 27ರಂದು ನಡೆದ ಪ್ರತಿಭಟನೆ ವೇಳೆ ಥೀನ್‌ ಸೇರಿದಂತೆ ಒಂಬತ್ತು ಮಂದಿ ಪತ್ರಕರ್ತರನ್ನು ಬಂಧಿಸಲಾಗಿತ್ತು. ಫೆಬ್ರುವರಿ 1ರ ಮಿಲಿಟರಿ ದಂಗೆಯ ಬಳಿಕ ಒಟ್ಟು 40 ಪತ್ರಕರ್ತರನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT