ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯದಿಂದ ಸಶಸ್ತ್ರ ಪಡೆ ದೂರ: ಪಾಕ್ ಸೇನಾ ಜನರಲ್ ಬಾಜ್ವಾ

Last Updated 5 ಅಕ್ಟೋಬರ್ 2022, 16:02 IST
ಅಕ್ಷರ ಗಾತ್ರ

ಇಸ್ಲಾಮಬಾದ್ : ‘ದೇಶದ ಸಶಸ್ತ್ರ ಪಡೆಗಳು ರಾಜಕೀಯದಿಂದ ದೂರ ಉಳಿಯಲಿವೆ. ಇದೇ ಕ್ರಮವನ್ನು ಮುಂದುವರಿಸಲು ನಾನು ಬಯಸುತ್ತೇನೆ’ ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕಮರ್‌ ಜಾವೇದ್‌ ಬಾಜ್ವಾ ನೀಡಿದ್ಡಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ವಾಷಿಂಗ್ಟನ್‌ನಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ನಡೆದ ಭೋಜನಕೂಟದ ವೇಳೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

‘ನವೆಂಬರ್‌ನಲ್ಲಿ ತಮ್ಮ ಅವಧಿ ಪೂರ್ಣಗೊಳ್ಳಲಿದೆ. ಸೇನೆಗೆ ಸಂಬಂಧಿಸಿ ನಾನು ನೀಡಿರುವ ವಾಗ್ದಾನವನ್ನು ಈಡೇರಿಸುವೆ’ ಎಂಬುದಾಗಿ ಬಾಜ್ವಾ ಹೇಳಿದ್ದಾರೆ ಎಂದು ‘ಡಾನ್‌’ ಪತ್ರಿಕೆ ವರದಿ ಮಾಡಿದೆ.

ಜನರಲ್ ಬಾಜ್ವಾ ಅವರು ನ. 29 ರಂದು ನಿವೃತ್ತರಾಗಲಿದ್ದಾರೆ. 2019 ರಲ್ಲಿ ಎರಡನೇ ಬಾರಿ ಮೂರು ವರ್ಷಗಳ ಅವಧಿಗೆ ಅವರ ಸೇವೆಯನ್ನು ವಿಸ್ತರರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT