ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ: ಮುಸ್ಲಿಂ ಧರ್ಮ ಗುರುವಿನ ವಿರುದ್ಧ ಜಾಮೀನು ರಹಿತ ವಾರೆಂಟ್‌ ಜಾರಿ

Last Updated 11 ನವೆಂಬರ್ 2020, 9:09 IST
ಅಕ್ಷರ ಗಾತ್ರ

ಕರಾಚಿ: ಅಪ್ರಾಪ್ತ ವಯಸ್ಸಿನ ಕ್ರಿಶ್ಚಿಯನ್‌ ಬಾಲಕಿಯನ್ನು ಒತ್ತಾಯಪೂರ್ವಕವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳಿಸಿ ವಿವಾಹ ಮಾಡಿಸಿದ ಆರೋಪದಡಿ ಪಾಕಿಸ್ತಾನ ನ್ಯಾಯಾಲಯವು ಮುಸ್ಲಿಂ ಧರ್ಮ ಗುರುವಿಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.

ಈ ಸಂಬಂಧ ಬಾಲಕಿಯು ಕಾಜಿ ಮುಫ್ತಿ ಅಹಮೆದ್‌ ಜಾನ್‌ ರಹೀಮಿ ವಿರುದ್ಧ ‍ಪ್ರಕರಣ ದಾಖಲಿಸಿದ್ದಳು. ಈ ಬಳಿಕ ಅ.16 ರಂದು ಧರ್ಮ ಗುರು ತಲೆಮರೆಸಿಕೊಂಡಿದ್ದಾರೆ. ಕಾಜಿ ಮುಫ್ತಿಯ ವಿರುದ್ಧ ಹಲವು ಮತಾಂತರ ಮತ್ತು ಅಪ್ರಾಪ್ತ ವಯಸ್ಸಿನ ಬಾಲಕಿಯರ ವಿವಾಹ ನಡೆಸಿದ ಪ್ರಕರಣಗಳು ದಾಖಲಾಗಿವೆ.

ಈ ಪ್ರಕರಣ ಸಂಬಂಧ ಕರಾಚಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಕಾಜಿ ಮುಫ್ತಿ ಅಹಮೆದ್ ವಿರುದ್ಧ ಜಾಮೀನು ರಹಿತ ವಾರೆಂಟ್‌ ಜಾರಿಗೊಳಿಸಿದೆ. ಆರೋಪಿ ಕಾಜಿ ಮುಫ್ತಿ ಅಹಮೆದ್‌ ಅವರನ್ನು ನ.16 ರಂದು ನ್ಯಾಯಾಲಯಕ್ಕೆ ಹಾಜರಿಪಡಿಸುವಂತೆ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT