ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ ಬಿಕ್ಕಟ್ಟು: ರಷ್ಯಾ ತೊರೆಯುತ್ತಿರುವ ಕಂಪನಿಗಳು

ಆಸ್ತಿ ಮುಟ್ಟುಗೋಲು ಎಚ್ಚರಿಕೆ ನೀಡಿದ ಪುಟಿನ್‌
Last Updated 12 ಮಾರ್ಚ್ 2022, 13:49 IST
ಅಕ್ಷರ ಗಾತ್ರ

ಕೀವ್‌: ಉಕ್ರೇನ್‌ ಹಾಗೂ ರಷ್ಯಾ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದ್ದು, ರಷ್ಯಾ ಆರ್ಥಿಕತೆ ಮೇಲೆ ಹೊಡೆತ ಬೀಳುತ್ತಿದೆ.

ದೇಶದಲ್ಲಿ ದೊಡ್ಡ ಕಂಪನಿಗಳು ರಷ್ಯಾದ ಯುದ್ಧದ ಕ್ರಮಗಳಿಂದ ತೀವ್ರ ನಲುಗಿದ್ದು ಇಲ್ಲಿನ ತಮ್ಮ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿ ದೇಶ ತೊರೆಯುತ್ತಿವೆ. ಇನ್ನೊಂದೆಡೆ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಇಂತಹ ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

‘ಒಂದು ವೇಳೆ ವಿದೇಶಿ ಕಂಪನಿಗಳು ದೇಶ ತೊರೆದರೆ ಹೊರಗಿನಿಂದ ಕಂಪನಿಗಳ ಆಡಳಿತವನ್ನು ತರಲಾಗುತ್ತದೆ. ಇದಕ್ಕಾಗಿ ಆಸಕ್ತ ಹೊಸಬರಿಗೆ ಅವಕಾಶ ನೀಡಲಾಗುತ್ತದೆ’ ಎಂದು ಪುಟಿನ್‌ ಹೇಳಿದ್ದಾರೆ.

ಮಾಸ್ಕೊದಲ್ಲಿರುವ ‘ಎವ್ರೊಪಿಸ್ಕಿ’ ಮಾಲ್‌ ಜಾಗತಿಕ ಮಟ್ಟದಲ್ಲಿ ಹೆಸರು ಪಡೆದಿದೆ. ಇಂತಹ ಪ್ರಮುಖ ಕಂಪನಿಗಳ ಉತ್ಪನ್ನಗಳ ಮಾರಾಟ ಕೇಂದ್ರಗಳಿಂದಾಗಿ ಮಾಸ್ಕೊ ಸಹ ಲಂಡನ್‌, ಪ್ಯಾರಿಸ್‌ ನಗರಗಳಂತೆ ಜಾಗತಿಕ ಆರ್ಥಿಕತೆಯೊಂದಿಗೆ ಬೆಸೆದುಕೊಂಡಿದೆ.

ಆದರೆ ಉಕ್ರೇನ್‌ನೊಡನೆ ಸಂಘರ್ಷ ಆರಂಭವಾದಾಗಿನಿಂದ ಅನೇಕ ಕಂಪನಿಗಳು ಮಾಲ್‌ ತೊರೆಯುತ್ತಿವೆ. ಜನರಿಂದ ಸದಾ ಕಿಕ್ಕಿರಿದು ತುಂಬಿರುತ್ತಿದ್ದ, ಮಾಲ್‌ ಈಗ ಮೌನಕ್ಕೆ ಜಾರಿದೆ. ಈಗಾಗಲೇ ನೂರಾರು ಕಂಪನಿಗಳು ರಷ್ಯಾ ಜೊತೆ ಸಂಬಂಧ ಕಡಿದುಕೊಳ್ಳುವುದಾಗಿ ಘೋಷಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT